ಲಂಚ ಪ್ರಕರಣ: ಜಾಮೀನು ಪಡೆದು ಹೊರಬಂದ ಪಿಡಿಒ ರಮ್ಯಾಗೆ ಅದ್ಧೂರಿ ಸ್ವಾಗತ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jan 19, 2021 | 6:33 PM

ಲಂಚ ಪಡೆಯುತ್ತಿದ್ದ ವೇಳೆ ಎಸಿಬಿ ಬಲೆಗೆ ಬಿದ್ದ ರಮ್ಯಾ ಅವರನ್ನು ರಾಮನಗರ ಎಸಿಬಿ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಜನವರಿ 16ರಂದು ಕನಕಪುರ ಕೋರ್ಟ್ ರಮ್ಯಾ ಅವರಿಗೆ ಜಾಮೀನು ನೀಡಿತ್ತು.

ಲಂಚ ಪ್ರಕರಣ: ಜಾಮೀನು ಪಡೆದು ಹೊರಬಂದ ಪಿಡಿಒ ರಮ್ಯಾಗೆ ಅದ್ಧೂರಿ ಸ್ವಾಗತ
ಪ್ರಾತಿನಿಧಿಕ ಚಿತ್ರ
Follow us on

ರಾಮನಗರ:  ಲಂಚ ಪ್ರಕರಣದಲ್ಲಿ ಸಿಸಿಬಿ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ ಪಿಡಿಒ ರಮ್ಯಾ ಜಾಮೀನು ಪಡೆದು ಹೊರಬಂದಿದ್ದಾರೆ. ಜಾಮೀನಿನ ಮೇಲೆ ಹೊರಬಂದ  ರಮ್ಯಾ ಅವರಿಗೆ ತೋಕಸಂದ್ರ ಗ್ರಾಮಸ್ಥರು ಅದ್ಧೂರಿ ಸ್ವಾಗತ ನೀಡಿದ್ದಾರೆ.

57 ಸಾವಿರ ಲಂಚ ಸ್ವೀಕರಿಸಿದ್ದ ರಮ್ಯಾ ಅವರನ್ನು ಜನವರಿ 15ರಂದು ಎಸಿಬಿ ಬಂಧಿಸಿತ್ತು. ನರೇಗಾ ಕಾಮಗಾರಿ ಸಂಬಂಧ ರಮ್ಯಾ ಅವರು ಸಿದ್ದೇಗೌಡ ಎಂಬವರಿಂದ 87 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಲಂಚ ಪಡೆಯುತ್ತಿದ್ದ ವೇಳೆ ಎಸಿಬಿ ಬಲೆಗೆ ಬಿದ್ದ ರಮ್ಯಾ ಅವರನ್ನು ರಾಮನಗರ ಎಸಿಬಿ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಜನವರಿ 16ರಂದು ಕನಕಪುರ ಕೋರ್ಟ್ ರಮ್ಯಾ ಅವರಿಗೆ ಜಾಮೀನು ನೀಡಿತ್ತು.

ಪ್ರತ್ಯೇಕ ಪ್ರಕರಣ: ಲಂಚಕ್ಕೆ ಕೈಯೊಡ್ಡಿದ್ದ ಪಿಡಿಒ, ಸಬ್​ ರಿಜಿಸ್ಟ್ರಾರ್ ಎಸಿಬಿ ಬಲೆಗೆ

Published On - 6:33 pm, Tue, 19 January 21