ಮಂಡ್ಯ: ಜಮೀನು ವಿವಾದ; ಚಾಕು ಇರಿದು ತಮ್ಮನಿಂದಲೇ ಅಣ್ಣನ ಕೊಲೆ

54 ವರ್ಷದ ಬಾಲಕೃಷ್ಣ ಮೈಸೂರಿನಲ್ಲಿ ವಾಸ ಮಾಡುತ್ತಿದ್ದರು. ಲಾಕ್​ಡೌನ್​ ಕಾರಣ ಅರಳಕುಪ್ಪೆ ಗ್ರಾಮಕ್ಕೆ ಬಂದಿದ್ದರು. ಒಂದೇ ಮನೆಯ ಮಧ್ಯೆ ಗೋಡೆ ಹಾಕಿಕೊಂಡು ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದರು. ಜಮೀನು ವಿಚಾರವಾಗಿ ಅಣ್ಣ ಮತ್ತು ತಮ್ಮನ ನಡುವೆ ಜಗಳ ನಡೆಯುತ್ತಿತ್ತು.

ಮಂಡ್ಯ: ಜಮೀನು ವಿವಾದ; ಚಾಕು ಇರಿದು ತಮ್ಮನಿಂದಲೇ ಅಣ್ಣನ ಕೊಲೆ
ಸಾಂದರ್ಭಿಕ ಚಿತ್ರ

Updated on: Jun 01, 2021 | 8:59 AM

ಮಂಡ್ಯ: ಚಾಕು ಇರಿದು ತಮ್ಮನಿಂದಲೇ ಅಣ್ಣನ ಕೊಲೆಯಾಗಿರುವ ಘಟನೆ ಜಿಲ್ಲೆಯ ಪಾಂಡವಪುರ ತಾಲೂಕಿನ ಅರಳಕುಪ್ಪೆ ಗ್ರಾಮದಲ್ಲಿ ನಡೆದಿದೆ. ಬಾಲಕೃಷ್ಣ ಕೊಲೆಯಾದ ವ್ಯಕ್ತಿ. ಜಮೀನು ವಿವಾದ ಹಿನ್ನೆಲೆ ತಮ್ಮ ಸುರೇಶ್​ನಿಂದ ಈ ಕೃತ್ಯ ನಡೆದಿದೆ. ಜಗಳ ಬಿಡಿಸಲು ಹೋದ ಅತ್ತಿಗೆಗೂ ಸುರೇಶ್ ಚಾಕುವಿನಿಂದ ಇರಿದಿದ್ದಾನೆ. ಈ ಪ್ರಕರಣ ಪಾಂಡವಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. 54 ವರ್ಷದ ಬಾಲಕೃಷ್ಣ ಮೈಸೂರಿನಲ್ಲಿ ವಾಸ ಮಾಡುತ್ತಿದ್ದರು. ಲಾಕ್​ಡೌನ್​ ಕಾರಣ ಅರಳಕುಪ್ಪೆ ಗ್ರಾಮಕ್ಕೆ ಬಂದಿದ್ದರು.

ಒಂದೇ ಮನೆಯ ಮಧ್ಯೆ ಗೋಡೆ ಹಾಕಿಕೊಂಡು ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದರು. ಜಮೀನು ವಿಚಾರವಾಗಿ ಅಣ್ಣ ಮತ್ತು ತಮ್ಮನ ನಡುವೆ ಜಗಳ ನಡೆಯುತ್ತಿತ್ತು. ನಿನ್ನೆ (ಮೇ 31) ಜಗಳ ವಿಕೋಪಕ್ಕೆ ತಿರುಗಿ ತಮ್ಮ ಅಣ್ಣನಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಈ ವೇಳೆ ಅತ್ತಿಗೆ ಸರಳ ಜಗಳ ಬಿಡಿಸಲು ಹೋದಾಗ ಸುರೇಶ್ ಆಕೆಗೂ ಚಾಕುವಿನಿಂದ ಇರಿದಿದ್ದಾನೆ. ಗಂಭೀರವಾಗಿ ಗಾಯಗೊಂಡಿರುವ ಸರಳರಿಗೆ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಪರಪ್ಪನ ಅಗ್ರಹಾರ ಕಾರಾಗೃಹದ ಕೈದಿಗಳಿಗೆ ವ್ಯಾಕ್ಸಿನೇಷನ್
ಬೆಂಗಳೂರು: ಪರಪ್ಪನ ಅಗ್ರಹಾರ ಕಾರಾಗೃಹದ ಕೈದಿಗಳಿಗೆ ಲಸಿಕೆ ನೀಡಲಾಗುತ್ತಿದೆ. ಕಾರಾಗೃಹದಲ್ಲಿ ಒಟ್ಟು 4,783 ಕೈದಿಗಳು ಇದ್ದಾರೆ. 2,500ಕ್ಕೂ ಹೆಚ್ಚು ಕೈದಿಗಳಿಗೆ ಇಂದು (ಜೂನ್ 1) ಕೊವಿಡ್ ಲಸಿಕೆ ನೀಡಲಾಗುತ್ತಿದೆ. ಉಳಿದ ಕೈದಿಗಳಿಗೆ ನಾಳೆ ಕೊವಿಡ್ ಲಸಿಕೆ ನೀಡಲಾಗುತ್ತದೆ. 530 ಮಂದಿ 45 ವರ್ಷ ಮೇಲ್ಪಟ್ಟರಾಗಿದ್ದಾರೆ. ಆರೋಪಿಗಳನ್ನು ಕರೆತರುವ ಪೊಲೀಸರಿಗೂ ಆರ್​ಟಿಪಿಸಿಆರ್ ನೆಗೆಟಿವ್ ರಿಪೋರ್ಟ್ ಕಡ್ಡಾಯ ಮಾಡಿರುವ ಕಾರಣ ಜೈಲಲ್ಲಿ ಸೋಂಕಿನ ಪ್ರಮಾಣ ಕಂಟ್ರೋಲ್ ತರುವಲ್ಲಿ ಜೈಲಾಧಿಕಾರಿಗಳು ಯಶಸ್ವಿ‌‌‌‌ಯಾಗಿದ್ದಾರೆ.

ಇದನ್ನೂ ಓದಿ

ಲೈಂಗಿಕ ಕ್ರಿಯೆ ನಡೆಸಲು ನಿರಾಕರಿಸಿದ ಪತ್ನಿಯ ತಲೆಗೆ ಗುಂಡಿಕ್ಕಿದ ಪತಿ; ಬಳಿಕ ಮೂವರು ಪುಟಾಣಿ ಮಕ್ಕಳನ್ನು ನಾಲೆಗೆ ಎಸೆದು ಕೊಲೆ

ನೆಲ್ಲೂರು ನಾಟಿ ವೈದ್ಯ ಆನಂದಯ್ಯ ಬಳಿ ಔಷಧಿ ಪಡೆದಿದ್ದ ವ್ಯಕ್ತಿ ಸಾವು

(brother has murdered his older brother in a land dispute at Mandya)