ಕೊವಿಡ್ ವಾರ್ಡ್ನಲ್ಲಿ ಮೃತ ದೇಹ ಇರಿಸಿದಕ್ಕೆ ಬಿಮ್ಸ್ನ 7 ನರ್ಸ್‌ಗಳು ಕರ್ತವ್ಯದಿಂದ ಬಿಡುಗಡೆ

ಸರ್ಜನ್ ಡಾ.ಹುಸೇನ್ ಸಾಬ್ ನಿನ್ನೆ ಸೇವೆಯಿಂದ ನಿವೃತ್ತಿ ಹೊಂದಿದ್ದಾರೆ. ಆದರೆ ನಿವೃತ್ತಿಗೂ ಮುನ್ನ 7 ನರ್ಸ್‌ಗಳನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿ ಆದೇಶ ಹೊರಡಿಸಿದ್ದಾರೆ. ಬಿಮ್ಸ್ ಆಡಳಿತ ಮಂಡಳಿ ಮೇಲಾಧಿಕಾರಿಗಳ ತಪ್ಪಿಗೆ ಕೆಳ ಹಂತದ ಸಿಬ್ಬಂದಿ ಹೊಣೆಗಾರರನ್ನಾಗಿ ಮಾಡಿದೆ. ಇದರಿಂದ ಬಿಮ್ಸ್ ಆಸ್ಪತ್ರೆಯ ನರ್ಸ್‌ಗಳ ಕಣ್ಣೀರು ಹಾಕಿದ್ದಾರೆ.

ಕೊವಿಡ್ ವಾರ್ಡ್ನಲ್ಲಿ ಮೃತ ದೇಹ ಇರಿಸಿದಕ್ಕೆ ಬಿಮ್ಸ್ನ 7 ನರ್ಸ್‌ಗಳು ಕರ್ತವ್ಯದಿಂದ ಬಿಡುಗಡೆ
ಬೆಳಗಾವಿ ಬಿಮ್ಸ್ ಆಸ್ಪತ್ರೆ
Follow us
ಆಯೇಷಾ ಬಾನು
|

Updated on: Jun 01, 2021 | 8:29 AM

ಬೆಳಗಾವಿ: ಡಿಸಿಎಂ ಲಕ್ಷ್ಮಣ್ ಸವದಿ ಭೇಟಿ ವೇಳೆ ಕೊವಿಡ್ ವಾರ್ಡ್‌ನಲ್ಲಿ ಮೃತದೇಹ ಇಟ್ಟಿದ್ದ ವಿಚಾರಕ್ಕೆ ಸಂಬಂಧಿಸಿ ಬಿಮ್ಸ್ ಆಡಳಿತ ಮಂಡಳಿ 7 ನರ್ಸ್‌ಗಳನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿದೆ. ಬೆಳಗಾವಿಯ ಜಿಲ್ಲಾ ಸರ್ಜನ್ ಡಾ.ಹುಸೇನ್ ಸಾಬ್ ಖಾಜಿ 7 ನರ್ಸ್‌ಗಳನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿ ಆದೇಶ ನೀಡಿದ್ದಾರೆ.

ಸರ್ಜನ್ ಡಾ.ಹುಸೇನ್ ಸಾಬ್ ನಿನ್ನೆ ಸೇವೆಯಿಂದ ನಿವೃತ್ತಿ ಹೊಂದಿದ್ದಾರೆ. ಆದರೆ ನಿವೃತ್ತಿಗೂ ಮುನ್ನ 7 ನರ್ಸ್‌ಗಳನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿ ಆದೇಶ ಹೊರಡಿಸಿದ್ದಾರೆ. ಬಿಮ್ಸ್ ಆಡಳಿತ ಮಂಡಳಿ ಮೇಲಾಧಿಕಾರಿಗಳ ತಪ್ಪಿಗೆ ಕೆಳ ಹಂತದ ಸಿಬ್ಬಂದಿ ಹೊಣೆಗಾರರನ್ನಾಗಿ ಮಾಡಿದೆ. ಇದರಿಂದ ಬಿಮ್ಸ್ ಆಸ್ಪತ್ರೆಯ ನರ್ಸ್‌ಗಳ ಕಣ್ಣೀರು ಹಾಕಿದ್ದಾರೆ.

ಡಿಸಿಎಂ ಸವದಿ ಭೇಟಿ ವೇಳೆ ಐವರು ಸೋಂಕಿತರು ಮೃತ‌ಪಟ್ಟಿದ್ರು. ಈ ವೇಳೆ ಸಂಬಂಧ ಪಟ್ಟ ವೈದ್ಯರು ಇಲ್ಲದೇ ಶವಾಗಾರಕ್ಕೆ ಮೃತದೇಹ ಶಿಫ್ಟ್ ಮಾಡಲಾಗಲ್ಲ. ಮೃತದೇಹ ಪ್ಯಾಕ್ ಮಾಡಲು ಸಮಯಕ್ಕೆ ಸರಿಯಾಗಿ ವಸ್ತುಗಳನ್ನು ಕೊಡಲ್ಲ. ಅದರಲ್ಲೂ ಬಿಮ್ಸ್‌ನಲ್ಲಿ ಶವ ಸಾಗಿಸುವುದಕ್ಕೆ 1 ಆ್ಯಂಬುಲೆನ್ಸ್ ಮಾತ್ರ ಇದೆ. ಸೂಕ್ತ ವ್ಯವಸ್ಥೆ ಇಲ್ಲದ ಹಿನ್ನೆಲೆಯಲ್ಲಿ ಶವವನ್ನು ಸಾಗಿಸಿರಲಿಲ್ಲ. ಇಂತಹ ಸಮಯದಲ್ಲಿ ಮೃತದೇಹ ಶಿಫ್ಟ್ ಮಾಡಿಲ್ಲ ಅಂತಾ ನಮ್ಮನ್ನ ಹೊಣೆಗಾರರನ್ನಾಗಿಸಿದ್ದಾರೆ.

ಆಸ್ಪತ್ರೆಯಲ್ಲಿನ ಅವ್ಯವಸ್ಥೆ ಸರಿಪಡಿಸದೆ ನಮ್ಮ ವಿರುದ್ಧ ಕ್ರಮಕೈಗೊಂಡಿದ್ದಾರೆ ಎಂದು ನರ್ಸ್ಗಳು ಕಣ್ಣೀರು ಹಾಕಿದ್ದಾರೆ. ಇನ್ನು ಜಿಲ್ಲಾ ಸರ್ಜನ್ ವಿರುದ್ಧ ಆಸ್ಪತ್ರೆಯ ನರ್ಸ್‌ಗಳ ಆಕ್ರೋಶ ಹೊರ ಹಾಕಿದ್ದು ರಿಲೀವಿಂಗ್ ಆರ್ಡರ್ ಹಿಂಪಡೆಯದಿದ್ದರೆ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ಕೊಟ್ಟಿದ್ದಾರೆ.

ಇನ್ನು ಮೇ 29ರಂದು ಪಿಪಿಇ ಕಿಟ್ ಧರಿಸಿ ಬಿಮ್ಸ್ ಕೊವಿಡ್ ವಾರ್ಡ್‌ಗೆ ಡಿಸಿಎಂ ಲಕ್ಷ್ಮಣ್ ಸವದಿ ಭೇಟಿ ನೀಡಿದ್ದರು. ಈ ವೇಳೆ ಕೊವಿಡ್ ವಾರ್ಡ್‌ನಲ್ಲೇ ಮೃತದೇಹ ಇದ್ದಿದ್ದನ್ನು ಕಂಡು ಗರಂ ಆಗಿದ್ದರು. ಜಿಲ್ಲಾ ಸರ್ಜನ್ ನಡೆಗೆ ಶುಶ್ರೂಷಾಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಬಿಮ್ಸ್ ಆಸ್ಪತ್ರೆಯಲ್ಲಿ ಅವ್ಯವಸ್ಥೆಯ ಆಗರ; ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ ಡಿಸಿಎಂ ಸವದಿ