ಹೊಂಡದಲ್ಲಿ ಎತ್ತುಗಳ ಮೈ ತೊಳೆಯಲು ಹೋಗಿದ್ದ ಸಹೋದರರು ನೀರುಪಾಲು

|

Updated on: Dec 16, 2019 | 6:59 PM

ಗದಗ: ಎತ್ತುಗಳ ಮೈ ತೊಳೆಯಲು ಹೋಗಿದ್ದ ಸಹೋದರರು ಅಕ್ರಮ ಮಣ್ಣು ಗಣಿಗಾರಿಕೆ ನಡೆದ ಹೊಂಡದಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಕಳಸಾಪುರ ಗ್ರಾಮದಲ್ಲಿ ನಡೆದಿದೆ. ಲಕ್ಷ್ಮಣ್(18), ವಿಕಾಸ್(11) ಮೃತ ಸಹೋದರರು. ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕಾಗಿ ಅಕ್ರಮವಾಗಿ ಜಮೀನಿನಲ್ಲಿ ಮಣ್ಣು ತೆಗೆದಿದ್ದಾರೆ. ಇದರಿಂದ ಜಮೀನಿನಲ್ಲಿ ಹೊಂಡ ನಿರ್ಮಾಣವಾಗಿ, ಮಳೆಯಿಂದ ನೀರು ಶೇಖರಣೆಯಾಗಿದೆ. ಎತ್ತುಗಳ ಮೈ ತೊಳೆಯುವ ವೇಳೆ ನೀರಿನ ಆಳ ತಿಳಿಯದೆ ಒಬ್ಬ ಸಹೋದರ ಹೊಂಡದಲ್ಲಿ ಮುಳುಗಿದ್ದಾನೆ. ಈ ವೇಳೆ ಸಹೋದರನನ್ನು ರಕ್ಷಿಸಲು ಹೋಗಿ ಮತ್ತೊಬ್ಬ ಸಹ ಹೊಂಡದಲ್ಲಿ ಮುಳುಗಿ […]

ಹೊಂಡದಲ್ಲಿ ಎತ್ತುಗಳ ಮೈ ತೊಳೆಯಲು ಹೋಗಿದ್ದ ಸಹೋದರರು ನೀರುಪಾಲು
Follow us on

ಗದಗ: ಎತ್ತುಗಳ ಮೈ ತೊಳೆಯಲು ಹೋಗಿದ್ದ ಸಹೋದರರು ಅಕ್ರಮ ಮಣ್ಣು ಗಣಿಗಾರಿಕೆ ನಡೆದ ಹೊಂಡದಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಕಳಸಾಪುರ ಗ್ರಾಮದಲ್ಲಿ ನಡೆದಿದೆ. ಲಕ್ಷ್ಮಣ್(18), ವಿಕಾಸ್(11) ಮೃತ ಸಹೋದರರು.

ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕಾಗಿ ಅಕ್ರಮವಾಗಿ ಜಮೀನಿನಲ್ಲಿ ಮಣ್ಣು ತೆಗೆದಿದ್ದಾರೆ. ಇದರಿಂದ ಜಮೀನಿನಲ್ಲಿ ಹೊಂಡ ನಿರ್ಮಾಣವಾಗಿ, ಮಳೆಯಿಂದ ನೀರು ಶೇಖರಣೆಯಾಗಿದೆ. ಎತ್ತುಗಳ ಮೈ ತೊಳೆಯುವ ವೇಳೆ ನೀರಿನ ಆಳ ತಿಳಿಯದೆ ಒಬ್ಬ ಸಹೋದರ ಹೊಂಡದಲ್ಲಿ ಮುಳುಗಿದ್ದಾನೆ. ಈ ವೇಳೆ ಸಹೋದರನನ್ನು ರಕ್ಷಿಸಲು ಹೋಗಿ ಮತ್ತೊಬ್ಬ ಸಹ ಹೊಂಡದಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಹೆದ್ದಾರಿ ನಿರ್ಮಾಣಕ್ಕಾಗಿ ಅಕ್ರಮವಾಗಿ ಮಣ್ಣು ಸಾಗಾಟ ಮಾಡಿದ್ರಿಂದಲೇ ನನ್ನ ಮೊಮ್ಮಕ್ಕಳು ಬಲಿಯಾಗಿದ್ದಾರೆ ಎಂದು ಅಜ್ಜ ಚೆನ್ನಪ್ಪ ಚವ್ಹಾಣ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಅಕ್ರಮವಾಗಿ ಮಣ್ಣು ಲೂಟಿ ಮಾಡಿದವ್ರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.

Published On - 6:58 pm, Mon, 16 December 19