KSRTC ಬಸ್ ಡಿಕ್ಕಿ: 3 ವರ್ಷದ ಮಗು ಸ್ಥಳದಲ್ಲಿಯೇ ದುರ್ಮರಣ
ಕೊಡಗು: ಕುಶಾಲನಗರದ ಬೈಚನಹಳ್ಳಿ ಬಳಿ KSRTC ಬಸ್ ಡಿಕ್ಕಿಯಾಗಿ ಬೈಕ್ನಲ್ಲಿದ್ದ 3 ವರ್ಷದ ಮಗು ಸ್ಥಳದಲ್ಲಿಯೇ ಮೃತಪಟ್ಟಿದೆ. ಸೋಮವಾರಪೇಟೆ ತಾಲೂಕಿನ ಗೊಂದಿ ಬಸವನಹಳ್ಳಿಯ ಗೀತಾ, ಪರಮೇಶ್ ದಂಪತಿ ಪುತ್ರ ಪೃತ್ವಿಕ್ ಮೃತ ಮಗು. ಮಡಿಕೇರಿಯಿಂದ ಮೈಸೂರು ಕಡೆ ಕೆಎಸ್ಆರ್ಟಿಸಿ ಬಸ್ ಬರುತ್ತಿತ್ತು. ದೇವಸ್ಥಾನಕ್ಕೆ ತೆರಳಿದ್ದ ದಂಪತಿ ಮನೆಗೆ ವಾಪಸ್ ಆಗುತ್ತಿದ್ದರು. ಈ ವೇಳೆ ಬಸ್ ಬೈಕ್ಗೆ ಡಿಕ್ಕಿಯೊಡೆದಿದೆ. ಅಪಘಾತದಲ್ಲಿ ಮಗು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಘಟನೆಗೆ ಬಸ್ ಚಾಲಕನ ನಿರ್ಲಕ್ಷ್ಯವೇ ಕಾರಣ ಎನ್ನಲಾಗಿದೆ. ಈ ಸಂಬಂಧ ಕುಶಾಲನಗರ ಸಂಚಾರಿ […]
ಕೊಡಗು: ಕುಶಾಲನಗರದ ಬೈಚನಹಳ್ಳಿ ಬಳಿ KSRTC ಬಸ್ ಡಿಕ್ಕಿಯಾಗಿ ಬೈಕ್ನಲ್ಲಿದ್ದ 3 ವರ್ಷದ ಮಗು ಸ್ಥಳದಲ್ಲಿಯೇ ಮೃತಪಟ್ಟಿದೆ. ಸೋಮವಾರಪೇಟೆ ತಾಲೂಕಿನ ಗೊಂದಿ ಬಸವನಹಳ್ಳಿಯ ಗೀತಾ, ಪರಮೇಶ್ ದಂಪತಿ ಪುತ್ರ ಪೃತ್ವಿಕ್ ಮೃತ ಮಗು.
ಮಡಿಕೇರಿಯಿಂದ ಮೈಸೂರು ಕಡೆ ಕೆಎಸ್ಆರ್ಟಿಸಿ ಬಸ್ ಬರುತ್ತಿತ್ತು. ದೇವಸ್ಥಾನಕ್ಕೆ ತೆರಳಿದ್ದ ದಂಪತಿ ಮನೆಗೆ ವಾಪಸ್ ಆಗುತ್ತಿದ್ದರು. ಈ ವೇಳೆ ಬಸ್ ಬೈಕ್ಗೆ ಡಿಕ್ಕಿಯೊಡೆದಿದೆ. ಅಪಘಾತದಲ್ಲಿ ಮಗು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಘಟನೆಗೆ ಬಸ್ ಚಾಲಕನ ನಿರ್ಲಕ್ಷ್ಯವೇ ಕಾರಣ ಎನ್ನಲಾಗಿದೆ. ಈ ಸಂಬಂಧ ಕುಶಾಲನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.