ಸ್ತ್ರೀಯರ ಜಗಳ ಬಿಡಿಸಲು ಹೋದ ಮಹಿಳಾ ಪೇದೆ ಮೇಲೆಯೇ ಹಲ್ಲೆ
ಶಿವಮೊಗ್ಗ: ಮೈಕ್ರೋ ಫೈನಾನ್ಸ್ನಲ್ಲಿ ಸಾಲ ಪಡೆದ ಮಹಿಳೆಯಿಂದ ಕಿರುಕುಳ ಖಂಡಿಸಿ ಜಿಲ್ಲಾಧಿಕಾರಿ ಕಚೇರಿ ಬಳಿ ಮಹಿಳೆಯರು ಪ್ರತಿಭಟನೆ ನಡೆಸುತ್ತಿದ್ರು. ಈ ವೇಳೆ ಮಹಿಳೆಯರ ನಡುವೆಯೇ ಗಲಾಟೆಯಾಗಿದ್ದು, ಸ್ತ್ರೀಯರ ಜಗಳ ಬಿಡಿಸಲು ಹೋದ ಮಹಿಳಾ ಪೇದೆ ಮೇಲೆ ಹಲ್ಲೆ ಮಾಡಿದ್ದಾರೆ. ಫೈನಾನ್ಸ್ನಲ್ಲಿ ಸಾಲಪಡೆದ ಮಹಿಳೆಯರಿಗೆ ಕಿರುಕುಳ ಹಿನ್ನೆಲೆಯಲ್ಲಿ ಸಾಗರ ತಾಲೂಕಿನ ಮಹಿಳೆಯರು ಧರಣಿ ನಡೆಸುತ್ತಿದ್ರು. ಆಗ ಪ್ರತಿಭಟನಾಕಾರರ ಗುಂಪಿಗೆ ಸೇರಿ ಕೆಲ ಮಹಿಳೆಯರು ಗಲಾಟೆ ಮಾಡಿದ್ದಾರೆ. ಇದನ್ನು ಗಮನಿಸಿದ ಪ್ರತಿಭಟನಾನಿರತ ಮಹಿಳೆಯರು ಆ ಮಹಿಳಾ ಗುಂಪನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. […]
ಶಿವಮೊಗ್ಗ: ಮೈಕ್ರೋ ಫೈನಾನ್ಸ್ನಲ್ಲಿ ಸಾಲ ಪಡೆದ ಮಹಿಳೆಯಿಂದ ಕಿರುಕುಳ ಖಂಡಿಸಿ ಜಿಲ್ಲಾಧಿಕಾರಿ ಕಚೇರಿ ಬಳಿ ಮಹಿಳೆಯರು ಪ್ರತಿಭಟನೆ ನಡೆಸುತ್ತಿದ್ರು. ಈ ವೇಳೆ ಮಹಿಳೆಯರ ನಡುವೆಯೇ ಗಲಾಟೆಯಾಗಿದ್ದು, ಸ್ತ್ರೀಯರ ಜಗಳ ಬಿಡಿಸಲು ಹೋದ ಮಹಿಳಾ ಪೇದೆ ಮೇಲೆ ಹಲ್ಲೆ ಮಾಡಿದ್ದಾರೆ.
ಫೈನಾನ್ಸ್ನಲ್ಲಿ ಸಾಲಪಡೆದ ಮಹಿಳೆಯರಿಗೆ ಕಿರುಕುಳ ಹಿನ್ನೆಲೆಯಲ್ಲಿ ಸಾಗರ ತಾಲೂಕಿನ ಮಹಿಳೆಯರು ಧರಣಿ ನಡೆಸುತ್ತಿದ್ರು. ಆಗ ಪ್ರತಿಭಟನಾಕಾರರ ಗುಂಪಿಗೆ ಸೇರಿ ಕೆಲ ಮಹಿಳೆಯರು ಗಲಾಟೆ ಮಾಡಿದ್ದಾರೆ. ಇದನ್ನು ಗಮನಿಸಿದ ಪ್ರತಿಭಟನಾನಿರತ ಮಹಿಳೆಯರು ಆ ಮಹಿಳಾ ಗುಂಪನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವೇಳೆ ಗಲಾಟೆ ಬಿಡಿಸಲು ಹೋದ ಜಯನಗರ ಪೊಲೀಸ್ ಠಾಣೆಯ ಮಹಿಳಾ ಪೇದೆ ಸವಿತಾ ಮಫ್ತಿಯಲ್ಲಿದ್ದದ್ದು ತಿಳಿಯದೆ ಹಲ್ಲೆ ಮಾಡಿದ್ದಾರೆ. ಮಹಿಳಾ ಪೊಲೀಸ್ ಮೇಲೆ ಹಲ್ಲೆ ಮಾಡಿದ ಮಹಿಳೆಯರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.