ಕರ್ನಾಟಕದ ಸಿಎಂ-ಡಿಸಿಎಂ ನಡೆಸಿದ ‘ಮಹಾ’ ಪ್ರಚಾರಗಳಲ್ಲಿ ಬಿಜೆಪಿಗೆ ಏನಾಯ್ತು?

|

Updated on: Oct 24, 2019 | 6:05 PM

ಬೆಳಗಾವಿ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟಗೊಂಡು ಬಿಜೆಪಿ ಗೆಲುವಿನ ಕೇಕೆ ಹಾಕಿದೆ. ಆದ್ರೆ ಕರ್ನಾಟಕದ ಸಿಎಂ ಬಿ.ಎಸ್.ಯಡಿಯೂರಪ್ಪ ಮತ್ತು ಡಿಸಿಎಂ ಲಕ್ಷ್ಮಣ್ ಸವದಿಗೆ ಮಾತ್ರ ಭಾರೀ ಮುಖಭಂಗವಾಗಿದೆ. ನೀರು ಹರಿಸುವ ಭರವಸೆ ವ್ಯರ್ಥವಾಯ್ತು: ಕೊಲ್ಹಾಪುರ ಜಿಲ್ಲೆಯಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ್ದರು. ಪ್ರಚಾರದಲ್ಲಿ ಬಿಎಸ್​ವೈ ಕೃಷ್ಣಾ ನದಿಯಿಂದ ಮಹಾರಾಷ್ಟ್ರಕ್ಕೆ ನೀರು ಹರಿಸುವ ಭರವಸೆಯನ್ನು ನೀಡಿದ್ದರು. ಆದ್ರೆ, ಕೊಲ್ಹಾಪುರ ಜಿಲ್ಲೆಯಲ್ಲಿ ‌ಬಿಜೆಪಿಯು‌ ಒಂದೇ ಒಂದು ಕ್ಷೇತ್ರದಲ್ಲೂ ಗೆದ್ದಿಲ್ಲ. ಡಿಸಿಎಂ ಲಕ್ಷ್ಮಣ ಸವದಿಯೂ ಸಹ […]

ಕರ್ನಾಟಕದ ಸಿಎಂ-ಡಿಸಿಎಂ ನಡೆಸಿದ ‘ಮಹಾ’ ಪ್ರಚಾರಗಳಲ್ಲಿ ಬಿಜೆಪಿಗೆ ಏನಾಯ್ತು?
Follow us on

ಬೆಳಗಾವಿ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟಗೊಂಡು ಬಿಜೆಪಿ ಗೆಲುವಿನ ಕೇಕೆ ಹಾಕಿದೆ. ಆದ್ರೆ ಕರ್ನಾಟಕದ ಸಿಎಂ ಬಿ.ಎಸ್.ಯಡಿಯೂರಪ್ಪ ಮತ್ತು ಡಿಸಿಎಂ ಲಕ್ಷ್ಮಣ್ ಸವದಿಗೆ ಮಾತ್ರ ಭಾರೀ ಮುಖಭಂಗವಾಗಿದೆ.

ನೀರು ಹರಿಸುವ ಭರವಸೆ ವ್ಯರ್ಥವಾಯ್ತು:
ಕೊಲ್ಹಾಪುರ ಜಿಲ್ಲೆಯಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ್ದರು. ಪ್ರಚಾರದಲ್ಲಿ ಬಿಎಸ್​ವೈ ಕೃಷ್ಣಾ ನದಿಯಿಂದ ಮಹಾರಾಷ್ಟ್ರಕ್ಕೆ ನೀರು ಹರಿಸುವ ಭರವಸೆಯನ್ನು ನೀಡಿದ್ದರು. ಆದ್ರೆ, ಕೊಲ್ಹಾಪುರ ಜಿಲ್ಲೆಯಲ್ಲಿ ‌ಬಿಜೆಪಿಯು‌ ಒಂದೇ ಒಂದು ಕ್ಷೇತ್ರದಲ್ಲೂ ಗೆದ್ದಿಲ್ಲ.

ಡಿಸಿಎಂ ಲಕ್ಷ್ಮಣ ಸವದಿಯೂ ಸಹ ಕೊಲ್ಹಾಪುರ, ಸಾಂಗ್ಲಿ, ಸೊಲ್ಲಾಪುರ ಜಿಲ್ಲೆಯಲ್ಲಿ ಪ್ರಚಾರ ನಡೆಸಿದ್ದರು. ಗಡಿ ಭಾಗದ ಕನ್ನಡಿಗರು, ಲಿಂಗಾಯತರ ಓಟ್ ಬ್ಯಾಂಕ್ ಸೆಳೆಯಲು ಯತ್ನಿಸಿದ್ದರು. ಆದ್ರೆ ರಾಜಾಹುಲಿಯಾಗಿ ಪ್ರಚಾರದ ಅಖಾಡಕ್ಕೆ ಜಂಟಿಯಾಗಿ ಡಿಸಿಎಂ ಲಕ್ಷ್ಮಣ ಸವದಿ ಜೊತೆ ಇಳಿದಿದ್ದ ಸಿಎಂ ಯಡಿಯೂರಪ್ಪಗೆ ಯಾವುದೇ ಫಲ ನೀಡಿಲ್ಲ.

Published On - 6:04 pm, Thu, 24 October 19