ನಮ್ಮ ಹಾಲು ನಮ್ಮ ಹಕ್ಕು: ವಿದೇಶಿ ಹಾಲು ಬೇಡ ಎಂದಿದ್ದೇಕೆ ಕೋಲಾರದ ರೈತರು?
ಕೋಲಾರ: ನಮ್ಮ ಹಾಲು ನಮ್ಮ ಹಕ್ಕು, ವಿದೇಶಿ ಹಾಲು ಬೇಡವೇ ಬೇಡ ಎಂದು ಕೋಲಾರದ ಹಾಲು ಉತ್ಪಾದಕರು ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ಪ್ರಾದೇಶಿಕ ಸಮಗ್ರ ಆರ್ಥಿಕ ಪಾಲುದಾರಿಕೆ (RCEP- Regional Comprehensive Economic Partnership) ಯೋಜನೆಯಡಿ ಮುಕ್ತ ವ್ಯಾಪಾರ ಮಾರುಕಟ್ಟೆ ವ್ಯಾಪ್ತಿಗೆ ಹೈನೋದ್ಯಮ ಸೇರಿಸುತ್ತಿರುವುದಕ್ಕೆ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆರ್ಸಿಇಪಿ ಅಡಿ ಹೈನೋದ್ಯಮವನ್ನು ಸೇರಿಸದಂತೆ ಆಗ್ರಹಿಸಿ, ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಅತಿ ಹೆಚ್ಚು ಹಾಲು […]
ಕೋಲಾರ: ನಮ್ಮ ಹಾಲು ನಮ್ಮ ಹಕ್ಕು, ವಿದೇಶಿ ಹಾಲು ಬೇಡವೇ ಬೇಡ ಎಂದು ಕೋಲಾರದ ಹಾಲು ಉತ್ಪಾದಕರು ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದ್ದಾರೆ.
ಪ್ರಾದೇಶಿಕ ಸಮಗ್ರ ಆರ್ಥಿಕ ಪಾಲುದಾರಿಕೆ (RCEP- Regional Comprehensive Economic Partnership) ಯೋಜನೆಯಡಿ ಮುಕ್ತ ವ್ಯಾಪಾರ ಮಾರುಕಟ್ಟೆ ವ್ಯಾಪ್ತಿಗೆ ಹೈನೋದ್ಯಮ ಸೇರಿಸುತ್ತಿರುವುದಕ್ಕೆ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆರ್ಸಿಇಪಿ ಅಡಿ ಹೈನೋದ್ಯಮವನ್ನು ಸೇರಿಸದಂತೆ ಆಗ್ರಹಿಸಿ, ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.
ಅತಿ ಹೆಚ್ಚು ಹಾಲು ಉತ್ಪಾದಿಸುವ ಕೋಲಾರ ಜಿಲ್ಲೆಯಲ್ಲಿ ವಿದೇಶಿ ಹಾಲುತ್ಪನ್ನ ಏಕೆ?: ಕೋಲಾರ ನಗರದಲ್ಲಿ ಸೀಮೆ ಹಸು, ಎತ್ತಿನ ಬಂಡಿ ಮತ್ತು ತರಕಾರಿ ಸಮೇತ ರಸ್ತೆ ತಡೆದು ಪ್ರತಿಭಟನೆ ನಡೆಸಿ ರೈತ ಕುಲಕ್ಕೆ ಆರ್ಸಿಇಪಿ ಒಪ್ಪಂದ ಮಾರಕ ಎಂದು ಘೋಷಣೆ ಕೂಗಿದ್ದಾರೆ. ವಿದೇಶಿ ಹಾಲು ಉತ್ಪನ್ನಗಳು ಬೇಡವೇ ಬೇಡ. ಜಿಲ್ಲೆಯಲ್ಲಿ ಅತಿ ಹೆಚ್ಚು ರೈತರು ಹೈನುಗಾರಿಕೆಯನ್ನು ನಂಬಿ ಜೀವನ ನಡೆಸುತ್ತಿದ್ದಾರೆ. ಹೀಗಾಗಿ ಆರ್ಸಿಇಪಿ ಅಡಿ ಹೈನುಗಾರಿಕೆ ತರದಂತೆ ಆಗ್ರಹಿಸಿ ರೈತರು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
Published On - 4:04 pm, Thu, 24 October 19