ಲಾಕ್‌ಡೌನ್​ನಲ್ಲಿ ಭಾರಿ ಸಡಿಲಿಕೆ: ತಜ್ಞರು ತೀವ್ರ ಅಸಮಾಧಾನ, ಪ್ರಶ್ನೆಗಳ ಸುರಿಮಳೆ..

|

Updated on: Apr 18, 2020 | 5:15 PM

ಬೆಂಗಳೂರು: ರಾಜ್ಯ ಸರ್ಕಾರದ ಲಾಕ್‌ಡೌನ್ ಸಡಿಲಿಕೆಗೆ ತಜ್ಞರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಲಾಕ್‌ಡೌನ್ ಸಡಿಲಿಕೆ ಮಾಡಿರೋದು ಹೊಳೆಯಲ್ಲಿ ಹುಣಸೇ ಹಣ್ಣು ತೊಳದಂತೆ ಆಗಿದೆ. 25 ದಿನಗಳ ಲಾಕ್‌ಡೌನ್ ಪರಿಣಾಮ ಕೊರೊನಾ ನಿಯಂತ್ರಣಕ್ಕೆ ಬರುವ ಹಂತದಲ್ಲಿತ್ತು. ಈಗ ಲಾಕ್‌ಡೌನ್ ಸಡಿಲಿಕೆ ಮಾಡಿರೋದು ಇಷ್ಟು ದಿನದ ಲಾಕ್‌ಡೌನ್‌ ಡೆಡ್ಲಿ ವೇಸ್ಟ್ ಮಾಡಿದಂತಾಗಿದೆ. 9 ಜಿಲ್ಲೆಗಳಲ್ಲಿ ಒಂದೇ ಒಂದು ಪ್ರಕರಣವೂ ಇಲ್ಲ ಅಂತ ನೆಮ್ಮದಿಯಿಂದ ಇದ್ವಿ. ಈಗ ಲಾಕ್‌ಡೌನ್ ಸಡಿಲಿಕೆ ಇಡೀ ರಾಜ್ಯಕ್ಕೆ ಕೊರೊನಾ ಹೆಮ್ಮಾರಿ ಹಬ್ಬಬಹುದು ಅನ್ನೋ ಆತಂಕ ವ್ಯಕ್ತಪಡಿಸಿದ್ದಾರೆ. […]

ಲಾಕ್‌ಡೌನ್​ನಲ್ಲಿ ಭಾರಿ ಸಡಿಲಿಕೆ: ತಜ್ಞರು ತೀವ್ರ ಅಸಮಾಧಾನ, ಪ್ರಶ್ನೆಗಳ ಸುರಿಮಳೆ..
Follow us on

ಬೆಂಗಳೂರು: ರಾಜ್ಯ ಸರ್ಕಾರದ ಲಾಕ್‌ಡೌನ್ ಸಡಿಲಿಕೆಗೆ ತಜ್ಞರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಲಾಕ್‌ಡೌನ್ ಸಡಿಲಿಕೆ ಮಾಡಿರೋದು ಹೊಳೆಯಲ್ಲಿ ಹುಣಸೇ ಹಣ್ಣು ತೊಳದಂತೆ ಆಗಿದೆ. 25 ದಿನಗಳ ಲಾಕ್‌ಡೌನ್ ಪರಿಣಾಮ ಕೊರೊನಾ ನಿಯಂತ್ರಣಕ್ಕೆ ಬರುವ ಹಂತದಲ್ಲಿತ್ತು. ಈಗ ಲಾಕ್‌ಡೌನ್ ಸಡಿಲಿಕೆ ಮಾಡಿರೋದು ಇಷ್ಟು ದಿನದ ಲಾಕ್‌ಡೌನ್‌ ಡೆಡ್ಲಿ ವೇಸ್ಟ್ ಮಾಡಿದಂತಾಗಿದೆ. 9 ಜಿಲ್ಲೆಗಳಲ್ಲಿ ಒಂದೇ ಒಂದು ಪ್ರಕರಣವೂ ಇಲ್ಲ ಅಂತ ನೆಮ್ಮದಿಯಿಂದ ಇದ್ವಿ. ಈಗ ಲಾಕ್‌ಡೌನ್ ಸಡಿಲಿಕೆ ಇಡೀ ರಾಜ್ಯಕ್ಕೆ ಕೊರೊನಾ ಹೆಮ್ಮಾರಿ ಹಬ್ಬಬಹುದು ಅನ್ನೋ ಆತಂಕ ವ್ಯಕ್ತಪಡಿಸಿದ್ದಾರೆ.

ಸರ್ಕಾರಕ್ಕೆ ಇನ್ನೂ 2 ದಿನಗಳ ಸಮಯವಿದೆ, ಲಾಕ್‌ಡೌನ್ ಸಡಿಲಿಕೆ ವಾಪಸ್ ಪಡೆಯಿರಿ ಎಂದು ಸರ್ಕಾರವೆ ನೇಮಿಸಿದ್ದ ತಜ್ಞರ ಸಮಿತಿಯ ಸದಸ್ಯರು ಹೀಗೆ ಅಸಮಾಧಾನ ತೋಡಿಕೊಂಡಿದ್ದಾರೆ.

ಯಾವ ಆಧಾರದಲ್ಲಿ ಲಾಕ್‌ಡೌನ್‌ ನಿಯಮ ಸಡಿಲಿಕೆ..?
ನಿಯಮ ಸಡಿಲಿಸುವ ಮುನ್ನ ಸಂಪೂರ್ಣ ಅಧ್ಯಯನ ನಡೆದಿದ್ಯಾ..?
ಕೇಂದ್ರದ ಸೂಚನೆಗೂ ಮುನ್ನವೇ ನಿಯಮ ಸಡಿಲಿಸಿದ್ಯಾಕೆ..?
ಇಷ್ಟು ಅವಸರದಲ್ಲಿ 3 ಜಿಲ್ಲೆಗಳಿಗೆ ತಿರುಗಾಡಲು ಅನುಮತಿ ಏಕೆ..?
ಬೆಂಗಳೂರು, ಬೆಂಗಳೂರು ಗ್ರಾ. ರಾಮನಗರಕ್ಕೆ ತಿರುಗಾಡಲು ಅನುಮತಿ ಏಕೆ..?
ಬೆಂಗಳೂರು ಕಂಪ್ಲೀಟ್ ರೆಡ್‌ ಜೋನ್‌ನಲ್ಲಿರುವಾಗಲೇ ಈ ನಿರ್ಧಾರವೇಕೆ..?
ಲಾಕ್‌ಡೌನ್‌ ಇದ್ರೂ ಬೆಂಗಳೂರಿನಲ್ಲಿ ಬೈಕ್ ಸಂಚಾರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ಯಾಕೆ..?
50 ಲಕ್ಷ ಬೈಕ್‌ಗಳು ಬೆಂಗಳೂರಿನ ರಸ್ತೆಗಿಳಿದ್ರೆ ನಿಯಂತ್ರಿಸೋದು ಹೇಗೆ…?
ಪಾಸ್ ಇದ್ದಾಗಲೇ ಪೊಲೀಸರಿಗೆ ಬೈಕ್‌ ಸವಾರರನ್ನ ನಿಯಂತ್ರಿಸೋದು ಕಷ್ಟವಾಗಿತ್ತು
ಈಗ ಪಾಸ್ ಇಲ್ಲದೇ ಬೈಕ್ ಸವಾರರು ರಸ್ತೆಗಿಳಿದ್ರೆ ಬೆಂಗಳೂರು ಗತಿಯೇನು..?
ಜಿಲ್ಲೆಗಳ ಒಳಗಡೆ ತಿರುಗಾಡಲು ಅನುಮತಿ ಕೊಟ್ಟಿದ್ಯಾಕೆ..?
ಗ್ರಾಮೀಣ ಭಾಗಕ್ಕೂ ಕೊರೊನಾ ನುಗ್ಗುತ್ತಿರುವಾಗ ನಿರ್ಧಾರ ಎಷ್ಟು ಸರಿ..?
ಗ್ರಾಮ-ಗ್ರಾಮಗಳು ಕೊರೊನಾ ಪೀಡಿತ ಆದ್ರೆ ರಾಜ್ಯವನ್ನ ಕಾಪಾಡೋಱರು..?
ರಸ್ತೆಗಳಲ್ಲಿ ಜನ ಸಂಚಾರ ಶುರು ಮಾಡಿದ್ರೆ ಕೊರೊನಾ ನಿಯಂತ್ರಣ ಹೇಗೆ ಸಾಧ್ಯ?
ಸಂತೆ, ಮಾರ್ಕೆಟ್, ವ್ಯಾಪಾರ ವಹಿವಾಟಿಗೆ ಜನ ಗುಂಪು ಸೇರಿದ್ರೆ ಕೇಳೋಱರು?
ಪರಿಸ್ಥಿತಿ ಪೊಲೀಸರ ನಿಯಂತ್ರಣಕ್ಕೂ ಸಿಗದಿದ್ರೆ ಸರ್ಕಾರ ಮುಂದೇನ್ ಮಾಡುತ್ತೆ?
ಱಂಡಮ್ ಸ್ಯಾಂಪಲ್ ಸಂಗ್ರಹಿಸಿ ಪರೀಕ್ಷೆಯೇ ಮಾಡಿಲ್ಲ
ಗ್ರೀನ್ ಜೋನ್‌ ಜಿಲ್ಲೆಗಳಲ್ಲಿ ಇನ್ನೂ ಕೊವಿಡ್ ಪರೀಕ್ಷೆಯೇ ನಡೆಸಿಲ್ಲ
ಪರೀಕ್ಷೆ ನಡೆಸಿಲ್ಲ, ವರದಿಯೂ ಬಂದಿಲ್ಲ ಈ ಮಧ್ಯೆ ಸಂಚಾರಕ್ಕೆ ಅವಕಾಶ ಯಾಕೆ…?
ನಿನ್ನೆಯಷ್ಟೇ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸಿಎಸ್ ಪತ್ರ ಬರೆದಿದ್ದರು
ಱಂಡಮ್ ಸ್ಯಾಂಪಲ್ ಪಡೆದು ಕೊವಿಡ್ ಪರೀಕ್ಷೆಗೆ ಆದೇಶಿಸಿದ್ದರು
ಏ. 18, 19 ಮತ್ತು 20 ರಂದು ಸ್ಯಾಂಪಲ್ ಪಡೆದು ಪರೀಕ್ಷೆ ನಡೆಸಬೇಕಿತ್ತು
ಆದೇಶ ಮಾಡಿ ಒಂದೇ ದಿನದೊಳಗೆ ಲಾಕ್‌ಡೌನ್ ಸಡಿಲಿಕೆ ಮಾಡಿದ್ಯಾಕೆ…?
ಗ್ರಾಮ-ಗ್ರಾಮದಲ್ಲೂ ನೂರಾರು ಕೇಸ್‌ ಪತ್ತೆಯಾದ್ರೆ ಚಿಕಿತ್ಸೆ ಎಲ್ಲಿ..?
ಕೊರೊನಾ ಪಾಸಿಟಿವ್‌ ವ್ಯಕ್ತಿಗಳ ಐಸೋಲೇಷನ್‌ಗೆ ಜಾಗ ಎಲ್ಲಿ..?
ಈ ಬಗ್ಗೆ ರಾಜ್ಯ ಸರ್ಕಾರ ಕಿಂಚಿತ್ತಾದ್ರೂ ಆಲೋಚನೆ ಮಾಡಿದ್ಯಾ..?
ರಾಜ್ಯದಲ್ಲಿ ಕೊರೊನಾ ಟೆಸ್ಟಿಂಗ್‌ ಕಿಟ್‌ಗಳ ಬಗ್ಗೆ ಕ್ಲಾರಿಟಿ ಇಲ್ಲ
ವೆಂಟಿಲೇಟರ್‌ ತರಿಸ್ತೀನಿ ಎಂದಿದ್ದ ಸರ್ಕಾರ ಪಕ್ಕಾ ಮಾಹಿತಿ ನೀಡ್ತಿಲ್ಲ
ಜಿಲ್ಲಾಸ್ಪತ್ರೆಗಳಲ್ಲಿ ಕೊರೊನಾ ಬೆಡ್‌ ಹೆಚ್ಚಳದ ಬಗ್ಗೆ ಮಾಹಿತಿ ಇಲ್ಲ
ಹಳ್ಳಿಗಳಿಗೆ ಕೊರೊನಾ ಹರಡಿದ್ರೆ ನಿಯಂತ್ರಣದ ಬಗ್ಗೆ ಮಾರ್ಗಸೂಚಿಯಿಲ್ಲ
ರೆಡ್‌ ಜೋನ್‌ನಲ್ಲಿರುವ ಲಾಕ್‌ಡೌನ್ ಸಡಿಲಿಕೆಯಿಂದ ಬೆಂಗಳೂರು ನರಳುತ್ತಾ…?
ಲಕ್ಷಾಂತರ ಬೈಕ್‌, ಮೂರುವರೆ ಲಕ್ಷಕ್ಕೂ ಅಧಿಕ ಐಟಿ ಉದ್ಯೋಗಿಗಳು
ಇವರೆಲ್ಲಾ ಸಿಲಿಕಾನ್ ಸಿಟಿ ರಸ್ತೆಗಿಳಿದ್ರೆ ಗತಿಯೇನು..?
ಬೆಂಗಳೂರಿನಲ್ಲಿವೆ 42 ಸಾವಿರ ಐಟಿ-ಬಿಟಿ ಕಂಪನಿಗಳು
ಏಕಾಏಕಿ ಎಲ್ಲವೂ ಸ್ಟಾರ್ಟ್ ಆದ್ರೆ ಕೊವಿಡ್ ನಿಯಂತ್ರಣ ಸಾಧ್ಯನಾ…?
ಮೈಸೂರಿನ ಜುಬಿಲೆಂಟ್ ಕಂಪನಿ ನೌಕರರ ಪ್ರಕರಣ ಕಣ್ಮುಂದೆಯೇ ಇದೆ
ಆದ್ರೂ ಸರ್ಕಾರ ಲಾಕ್‌ಡೌನ್ ಸಡಿಲಿಕೆ ಮಾಡಿದ್ಯಾಕೆ…?
ಮೊನ್ನೆ 36, ನಿನ್ನೆ 44 ಕೊರೊನಾ ಪಾಸಿಟಿವ್‌ ಕೇಸ್‌ಗಳು ಬಂದಿವೆ
ಇವತ್ತು ಬೆಳಗ್ಗೆಯ ವರದಿಯಲ್ಲೇ 12 ಕೇಸ್‌ಗಳು ಹೊರಬಿದ್ದಿವೆ
ಸಂಜೆಯ ಮತ್ತೊಂದು ಹೆಲ್ತ್‌ ಬುಲೆಟಿನ್‌ ಬರೋದು ಬಾಕಿಯಿದೆ
ಸಂಜೆಯ ವರದಿಯಲ್ಲಿ ಇನ್ನಷ್ಟು ಪಾಸಿಟಿವ್‌ ಕೇಸ್‌ ಬಂದ್ರೆ ಹೇಗೆ..?
ಯಾವ ರಾಜ್ಯವೂ ತೆಗೆದುಕೊಳ್ಳದ ನಿರ್ಧಾರ ಸಿಎಂ ತೆಗೆದುಕೊಂಡಿದ್ದೇಕೆ..?
ಕೇಂದ್ರದಿಂದಲೇ ಕರ್ನಾಟಕ ಸಿಎಂಗೆ ಬಂದಿದೆಯಾ ನಿರ್ದೇಶನ..?
ಅಥವಾ ಸಿಎಂ ಅವಸರಕ್ಕೆ ಬಿದ್ದು ಇಂತಹ ನಿರ್ಧಾರ ಕೈಗೊಂಡ್ರಾ..?
ತಬ್ಲೀಗ್‌ ತಳಮಳ ರಾಜ್ಯವನ್ನೇ ಆವರಿಸುತ್ತಿರುವಾಗ ಈ ನಿರ್ಧಾರ ಬೇಕಿತ್ತಾ..?
ನಿಜಾಮುದ್ದೀನ್ ನಂಜಿಗೆ ದೇಶವೇ ನಡುಗುತ್ತಿರುವಾಗ ಇದು ಬೇಕಿತ್ತಾ..?
ಜುಬಿಲೆಂಟ್ ಜೇಡರಬಲೆಯಲ್ಲಿ ಸಿಲುಕಿರುವಾಗ ಈ ತೀರ್ಮಾನ ಬೇಕಿತ್ತಾ..?

Published On - 5:00 pm, Sat, 18 April 20