ಶೇಕಡ 33ರಷ್ಟು ಐಟಿಬಿಟಿ ಕಂಪನಿಗಳಲ್ಲಿ ಕೆಲ್ಸಕ್ಕೆ ಅವಕಾಶ, ಬೆಂಗಳೂರಿಗೆ ವಾಪಾಸಾಗಲು ಒನ್ ಸೈಡ್ ಪಾಸ್

ಬೆಂಗಳೂರು: ಅಯ್ಯೋ.. ಆಗ್ತಿಲ್ಲ ಗುರೂ.. ಕೂಂತಲ್ಲಿ ಕೂರಂಗಿಲ್ಲ.. ನಿಂತಲ್ಲಿ ನಿಲ್ಲಂಗಿಲ್ಲ.. ಮನೆಯಲ್ಲಿ ಇರೋಕೆ ಆಗ್ತಾನೆ ಇಲ್ಲ. ಟೈಂ ಅಂತೂ ಮುಂದೆ ಸಾಗ್ತಾನೆ ಇಲ್ಲ. ವರ್ಕ್​ಫ್ರಮ್​ ಹೋಮ್ ವಾರ್​​​​ನಲ್ಲಿ ಸಿಲುಕಿ ಟೆಕ್ಕಿಗಳಂತೂ ಚಕ್ಕರ್ ಹೊಡೀತಿದ್ದಾರೆ. ಕೊರೊನಾ ಎಂಟ್ರಿಗೆ ಸಿಲಿಕಾನ್​​ ಸಿಟಿಯಲ್ಲಿದ್ದ ಸಾಫ್ಟ್​ವೇರ್​​​, ಹಾರ್ಡ್​​ವೇರ್, ಐಟಿ ಸೆಕ್ಟರ್ ಕಂಪನಿಗಳಲ್ಲಿ ಕೆಲಸ ಮಾಡ್ತಿದ್ದೋರು ತಮ್ಮೂರಿನತ್ತ ಹೆಜ್ಜೆ ಹಾಕಿದ್ದೇ ಹಾಕಿದ್ದು. ಮಾಲ್​, ಫ್ರೆಂಡ್ಸ್.. ಪಬ್​​ ಅಂತ ಬ್ಯುಸಿಯಾಗಿರುತ್ತಿದ್ದ ಐಟಿ ಉದ್ಯೋಗಿಗಳು ಲಾಕ್​​ಡೌನ್​ ಸೆರೆಮನೆವಾಸಕ್ಕೆ ಮುಕ್ತಿಯಾವಾಗಪ್ಪ ಅಂತಿದ್ರು. ವರ್ಕ್​​ಫ್ರಮ್​ ಹೋಮ್​ ಟೆನ್ಷನ್​ಗೆ ಸಿಲುಕಿದ್ದೋರಿಗೆ ರಾಜ್ಯ […]

ಶೇಕಡ 33ರಷ್ಟು ಐಟಿಬಿಟಿ ಕಂಪನಿಗಳಲ್ಲಿ ಕೆಲ್ಸಕ್ಕೆ ಅವಕಾಶ, ಬೆಂಗಳೂರಿಗೆ ವಾಪಾಸಾಗಲು ಒನ್ ಸೈಡ್ ಪಾಸ್
Follow us
ಸಾಧು ಶ್ರೀನಾಥ್​
|

Updated on: Apr 19, 2020 | 8:02 AM

ಬೆಂಗಳೂರು: ಅಯ್ಯೋ.. ಆಗ್ತಿಲ್ಲ ಗುರೂ.. ಕೂಂತಲ್ಲಿ ಕೂರಂಗಿಲ್ಲ.. ನಿಂತಲ್ಲಿ ನಿಲ್ಲಂಗಿಲ್ಲ.. ಮನೆಯಲ್ಲಿ ಇರೋಕೆ ಆಗ್ತಾನೆ ಇಲ್ಲ. ಟೈಂ ಅಂತೂ ಮುಂದೆ ಸಾಗ್ತಾನೆ ಇಲ್ಲ. ವರ್ಕ್​ಫ್ರಮ್​ ಹೋಮ್ ವಾರ್​​​​ನಲ್ಲಿ ಸಿಲುಕಿ ಟೆಕ್ಕಿಗಳಂತೂ ಚಕ್ಕರ್ ಹೊಡೀತಿದ್ದಾರೆ. ಕೊರೊನಾ ಎಂಟ್ರಿಗೆ ಸಿಲಿಕಾನ್​​ ಸಿಟಿಯಲ್ಲಿದ್ದ ಸಾಫ್ಟ್​ವೇರ್​​​, ಹಾರ್ಡ್​​ವೇರ್, ಐಟಿ ಸೆಕ್ಟರ್ ಕಂಪನಿಗಳಲ್ಲಿ ಕೆಲಸ ಮಾಡ್ತಿದ್ದೋರು ತಮ್ಮೂರಿನತ್ತ ಹೆಜ್ಜೆ ಹಾಕಿದ್ದೇ ಹಾಕಿದ್ದು.

ಮಾಲ್​, ಫ್ರೆಂಡ್ಸ್.. ಪಬ್​​ ಅಂತ ಬ್ಯುಸಿಯಾಗಿರುತ್ತಿದ್ದ ಐಟಿ ಉದ್ಯೋಗಿಗಳು ಲಾಕ್​​ಡೌನ್​ ಸೆರೆಮನೆವಾಸಕ್ಕೆ ಮುಕ್ತಿಯಾವಾಗಪ್ಪ ಅಂತಿದ್ರು. ವರ್ಕ್​​ಫ್ರಮ್​ ಹೋಮ್​ ಟೆನ್ಷನ್​ಗೆ ಸಿಲುಕಿದ್ದೋರಿಗೆ ರಾಜ್ಯ ಸರ್ಕಾರ ಗಿಫ್ಟ್ ನೀಡಿದೆ. ಏಪ್ರಿಲ್​ 20ರ ನಂತರ ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ರಾಜ್ಯ ಸರ್ಕಾರ ಶೇಕಡ 33ರಷ್ಟು ಐಟಿ-ಬಿಟಿ ಕಂಪನಿಗಳಲ್ಲಿ ಕೆಲ್ಸ ನಿರ್ವಹಿಸಲು ಅವಕಾಶ ಕಲ್ಪಿಸಿದೆ. ಆದ್ರೀಗ, ಊರು ಸೇರಿದ್ದ ಉದ್ಯೋಗಿಗಳು ಬೆಂಗಳೂರಿಗೆ ಮರಳಬೇಕು. ಬಸ್​ ಬೇರೆ ಇಲ್ಲ, ಕಾರು ಬೈಕ್​ಗಳನ್ನ ತಂದ್ರೆ ಪೊಲೀಸ್ರು ಕಾಟ. ಬೆಂಗಳೂರಿಗೆ ಹೇಗಪ್ಪ ಬರೋದು ಎಂಬ ತಲೆನೋವಲ್ಲಿದ್ದಾರೆ.

ಬೆಂಗಳೂರಿಗೆ ವಾಪಸ್ ಆಗೋರಿಗೆ ಒನ್​​ ವೇ ಪಾಸ್​! ಐಟಿ ಕಂಪನಿಯಲ್ಲಿ ಕೆಲಸ ಮಾಡೋರು ಒಂದ್ಕಡೆ ಖುಷಿ ಜೊತೆ ಟೆನ್ಷನ್​​​ನಲ್ಲಿದ್ರೂ ಇದಕ್ಕೂ ಸರ್ಕಾರ ಸೆಲ್ಯೂಷನ್ ನೀಡಿದೆ. ಐಟಿ ನೌಕಕರು ಬೆಂಗಳೂರಿಗೆ ವಾಪಸ್​ ಆಗೋಕೆ ಒನ್ ಸೈಡ್ ಪಾಸ್ ವಿತರಿಸೋಕೆ ಪ್ಲ್ಯಾನ್ ಮಾಡಿದೆ. ಹಾಗಿದ್ರೆ, ಒನ್​ ಸೈಡ್ ಪಾಸ್​ ಅಂದ್ರೇನು? ಇದು ಎಲ್ಲಿ ಸಿಗುತ್ತೆ? ಏನೇನ್ ರೂಲ್ಸ್ ಇರುತ್ತೆ ಅನ್ನೋದನ್ನ ನೋಡೋದಾದ್ರೆ.

ಏನಿದು ಒನ್ ಸೈಡ್ ಪಾಸ್? ಐಟಿ-ಬಿಟಿ ಕಪನಿಗಳಲ್ಲಿ ಕರ್ತವ್ಯ ನಿರ್ವಹಿಸುವ ನೌಕರರಿಗೆ ಪಾಸ್ ವಿತರಿಸಲಾಗುತ್ತೆ. ಅಂತರ್​​​​ ಜಿಲ್ಲಾ ಪ್ರಯಾಣ ನಿಷೇಧದ ಹಿನ್ನೆಲೆಯಲ್ಲಿ ಪಾಸ್ ವಿತರಣೆ ಮಾಡಲಾಗುತ್ತದೆ. ಐಟಿ ನೌಕರರು ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪಾಸ್ ಪಡೀಬೋದಾಗಿದೆ. ಅದ್ರಲ್ಲೂ ಕೇವಲ 1 ಬಾರಿ ಮಾತ್ರ ಬೆಂಗಳೂರಿಗೆ ವಾಪಸ್​​ ಆಗಲು ಪಾಸ್ ಬಳಕೆ ಮಾಡ್ಬೋದಾಗಿದೆ. ಈ ಪಾಸ್ ಮೂಲಕ ಬೆಂಗಳೂರಿನಿಂದ ಬೇರೆಡೆ ಅಥವಾ ಅಂತರ್​ ರಾಜ್ಯ ಜಿಲ್ಲೆಗಳಿಗೆ ವಾಪಸ್ ಹೋಗೋಕೆ ಆಗಲ್ಲ. ಪಾಸ್ ಪಡೆದವರು ತಮ್ಮ ಸ್ವಂತ ಪ್ರಯಾಣದ ವ್ಯವಸ್ಥೆ ಮಾಡಿಕೊಳ್ಳಬೇಕಾಗಿದ್ದು, ಈ ಮೂಲಕ ಬೆಂಗಳೂರಿಗೆ ಬರ್ಬೋದಾಗಿದೆ.

ಒಟ್ನಲ್ಲಿ ರಾಜ್ಯದಲ್ಲಿ ಕೊರೊನಾ ಕ್ರೌರ್ಯ ಹೆಚ್ಚಾಗ್ತನೇ ಇದೆ.. ಆದ್ರೆ ಏಪ್ರಿಲ್ 20ರ ಬಳಿಕ ಐಟಿ-ಬಿಟಿ ಕಂಪನಿಗಳಿಗೆ ರಾಜ್ಯ ಸರ್ಕಾರ ವಿನಾಯಿತಿ ನೀಡಿರೋದು ಎಲ್ಲರ ನಿದ್ದೆಗೆಡಿಸಿದೆ. ಹಳ್ಳಿ ಹಳ್ಳಿಯಿಂದ ಪಾಸ್​ ಪಡೆದು ಬೆಂಗಳೂರಿಗೆ ಸಾವಿರಾರು ವಾಹನಗಳು ಬಂದ್ರೆ ಸಂಚಾರ ದಟ್ಟಣೆ ಆಗೋದು ಫಿಕ್ಸ್.. ಬೇಕಾಬಿಟ್ಟಿ ಓಡಾಡೋರನ್ನೇ ಕಂಟ್ರೋಲ್ ಮಾಡೋಕೆ ಪೊಲೀಸ್ರು ಒದ್ದಾಡ್ತಿದ್ದಾರೆ. ಆದ್ರೀಗ ಮುಂದೇನ್ ಅನಾಹುತವಾಗುತ್ತೋ ಅನ್ನೋದು ಎಲ್ರಿಗೂ ಟೆನ್ಷನ್ ಶುರುವಾಗಿದೆ. ದ್ವಿಚಕ್ರ ವಾಹನಗಳ ಓಡಾಟಕ್ಕೆ ಅವಕಾಶ ಕೊಟ್ಟು ಯೂಟರ್ನ್ ಹೊಡೆದಿರೋ ಸರ್ಕಾರ ಈ ಒನ್​​ ವೇ ಪಾಸ್​​ ವಿಚಾರದಲ್ಲಿ ಏನ್​ ಮಾಡುತ್ತೆ ಕಾದು ನೋಡ್ಬೇಕು.

ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ