ಕ್ವಾರಂಟೈನ್ ಉಲ್ಲಂಘಿಸಿ ಓಡಾಡುತ್ತಿದ್ದವರಿಗೆ ಬುದ್ಧಿ ಹೇಳಿದ ಯೋಧನ ಕುಟುಂಬಸ್ಥರ ಮೇಲೆ ಹಲ್ಲೆ!
ಬಾಗಲಕೋಟೆ: ಹೋಂ ಕ್ವಾರಂಟೈನ್ ಉಲ್ಲಂಘಿಸಿ ಗ್ರಾಮದಲ್ಲಿ ಓಡಾಟ ನಡೆಸುತ್ತಿದ್ದ ಹಿನ್ನೆಲೆಯಲ್ಲಿ ಬುದ್ಧಿ ಹೇಳಿದ ಯೋಧನ ಕುಟುಂಬಸ್ಥರ ಮೇಲೆ ಹಲ್ಲೆಗೆ ಯತ್ನಿಸಿರುವ ಘಟನೆ ಬಾಗಲಕೋಟೆ ಜಿಲ್ಲೆ ಅಮೀನಗಡ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಉಡುಪಿಯಿಂದ ಗ್ರಾಮಕ್ಕೆ ವಾಪಸಾಗಿದ್ದ ಹಿನ್ನೆಲೆಯಲ್ಲಿ ಹನಮಂತ, ಲಿಂಬಣ್ಣ, ಅಶೋಕ, ಮೇಘರಾಜ, ರುಕ್ಮವ್ವ, ಸಕರವ್ವ ಎಂಬುವವರು ಹೋಂ ಕ್ವಾರಂಟೈನ್ನಲ್ಲಿ ಇರಬೇಕಿತ್ತು. ಆದರೆ ಇವರು ಆದೇಶ ಉಲ್ಲಂಘಿಸಿ ಮನೆಯಿಂದ ಆಚೆ ಓಡಾಡುತ್ತಿದ್ದರು. ಹೀಗಾಗಿ ಹೊರಗಡೆ ತಿರುಗಾಡದಂತೆ ಬುದ್ಧಿ ಹೇಳಿದ್ದಕ್ಕೆ ಯೋಧನ ತಂದೆ, ತಾಯಿ, ಅಜ್ಜಿಯ ಮೇಲೆ ಹಲ್ಲೆಗೆ ಪ್ರಯತ್ನಿಸಿದ್ದಾರೆ. […]
ಬಾಗಲಕೋಟೆ: ಹೋಂ ಕ್ವಾರಂಟೈನ್ ಉಲ್ಲಂಘಿಸಿ ಗ್ರಾಮದಲ್ಲಿ ಓಡಾಟ ನಡೆಸುತ್ತಿದ್ದ ಹಿನ್ನೆಲೆಯಲ್ಲಿ ಬುದ್ಧಿ ಹೇಳಿದ ಯೋಧನ ಕುಟುಂಬಸ್ಥರ ಮೇಲೆ ಹಲ್ಲೆಗೆ ಯತ್ನಿಸಿರುವ ಘಟನೆ ಬಾಗಲಕೋಟೆ ಜಿಲ್ಲೆ ಅಮೀನಗಡ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಉಡುಪಿಯಿಂದ ಗ್ರಾಮಕ್ಕೆ ವಾಪಸಾಗಿದ್ದ ಹಿನ್ನೆಲೆಯಲ್ಲಿ ಹನಮಂತ, ಲಿಂಬಣ್ಣ, ಅಶೋಕ, ಮೇಘರಾಜ, ರುಕ್ಮವ್ವ, ಸಕರವ್ವ ಎಂಬುವವರು ಹೋಂ ಕ್ವಾರಂಟೈನ್ನಲ್ಲಿ ಇರಬೇಕಿತ್ತು. ಆದರೆ ಇವರು ಆದೇಶ ಉಲ್ಲಂಘಿಸಿ ಮನೆಯಿಂದ ಆಚೆ ಓಡಾಡುತ್ತಿದ್ದರು. ಹೀಗಾಗಿ ಹೊರಗಡೆ ತಿರುಗಾಡದಂತೆ ಬುದ್ಧಿ ಹೇಳಿದ್ದಕ್ಕೆ ಯೋಧನ ತಂದೆ, ತಾಯಿ, ಅಜ್ಜಿಯ ಮೇಲೆ ಹಲ್ಲೆಗೆ ಪ್ರಯತ್ನಿಸಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸಿ ಧಮ್ಕಿ ಹಾಕಿರುವ ಆರೋಪ ಕೇಳಿ ಬಂದಿದೆ. ಅಲ್ಲದೆ ಇವರ ನೋವಿಗೆ ಪೊಲೀಸರು ಸ್ಪಂದಿಸ್ತಿಲ್ಲವೆಂದು ಯೋಧನ ಕುಟುಂಬದ ಅಳಲನ್ನು ತೋಡಿಕೊಂಡಿದೆ.