ಹೆಚ್ಚುತ್ತಲೇ ಇದೆ ಸೋಂಕಿತರ ಸಂಖ್ಯೆ! ರಾಜ್ಯದ ಕಂಟೇನ್ಮೆಂಟ್ ಜೋನ್​ಗಳಾವುವು?

ಹೆಚ್ಚುತ್ತಲೇ ಇದೆ ಸೋಂಕಿತರ ಸಂಖ್ಯೆ! ರಾಜ್ಯದ ಕಂಟೇನ್ಮೆಂಟ್ ಜೋನ್​ಗಳಾವುವು?

ಬೆಂಗಳೂರು: ದೇಶದಿಂದ ದೇಶಕ್ಕೆ.. ನಗರದಿಂದ ನಗರಕ್ಕೆ.. ಹಳ್ಳಿಯಿಂದ ಹಳ್ಳಿಗೆ. ಒಬ್ಬರಿಂದ ಮತ್ತೊಂಬ್ಬರಿಗೆ.. ಇವರಿಂದ ಅವರಿಗೆ.. ಅವರಿಂದ ಇವರಿಗೆ.. ಎಲ್ಲಿಂದ ಎಲ್ಲಿಗೋ.. ಅಬ್ಬಾಬ್ಬ.. ಕೊರೊನಾ ಅನ್ನೋ ಹೆಮ್ಮಾರಿಯ ನಂಟು ಭೇದಿಸೋಕೆ ಎಷ್ಟೇ ಸರ್ಕಸ್ ಮಾಡಿದ್ರೂ.. ಏನೇ ದಾಳ ಉರುಳಿಸಿದ್ರೂ ವರ್ಕೌಟ್ ಆಗ್ತಾನೆ ಇಲ್ಲ. ಹೆಮ್ಮಾರಿ ಅಟ್ಟಹಾಸಕ್ಕೆ ಜನ ಜೀವಂತ ನರಕ ಅನುಭವಿಸುತ್ತಿದ್ದಾರೆ. ಕ್ರೂರಿ ರಣಕೇಕೆಗೆ ಜನ ಕಂಗೆಟ್ಟು ಹೋಗಿದ್ದಾರೆ. ಕರ್ನಾಟಕದಲ್ಲಿ ಹೆಚ್ಚುತ್ತಲೇ ಇದೆ ಸೋಂಕಿತರ ಸಂಖ್ಯೆ! ಕೊರೊನಾ ಆರ್ಭಟ.. ಇವತ್ತು ಕಮ್ಮಿಯಾಗುತ್ತೆ.. ನಾಳೆ ಕಮ್ಮಿಯಾಗುತ್ತೆ ಅಂತ ನೋಡಿದ್ರೆ,ಕಮ್ಮಿಯಾಗೋ ಲಕ್ಷಣನೇ […]

sadhu srinath

|

Apr 19, 2020 | 7:22 AM

ಬೆಂಗಳೂರು: ದೇಶದಿಂದ ದೇಶಕ್ಕೆ.. ನಗರದಿಂದ ನಗರಕ್ಕೆ.. ಹಳ್ಳಿಯಿಂದ ಹಳ್ಳಿಗೆ. ಒಬ್ಬರಿಂದ ಮತ್ತೊಂಬ್ಬರಿಗೆ.. ಇವರಿಂದ ಅವರಿಗೆ.. ಅವರಿಂದ ಇವರಿಗೆ.. ಎಲ್ಲಿಂದ ಎಲ್ಲಿಗೋ.. ಅಬ್ಬಾಬ್ಬ.. ಕೊರೊನಾ ಅನ್ನೋ ಹೆಮ್ಮಾರಿಯ ನಂಟು ಭೇದಿಸೋಕೆ ಎಷ್ಟೇ ಸರ್ಕಸ್ ಮಾಡಿದ್ರೂ.. ಏನೇ ದಾಳ ಉರುಳಿಸಿದ್ರೂ ವರ್ಕೌಟ್ ಆಗ್ತಾನೆ ಇಲ್ಲ. ಹೆಮ್ಮಾರಿ ಅಟ್ಟಹಾಸಕ್ಕೆ ಜನ ಜೀವಂತ ನರಕ ಅನುಭವಿಸುತ್ತಿದ್ದಾರೆ. ಕ್ರೂರಿ ರಣಕೇಕೆಗೆ ಜನ ಕಂಗೆಟ್ಟು ಹೋಗಿದ್ದಾರೆ.

ಕರ್ನಾಟಕದಲ್ಲಿ ಹೆಚ್ಚುತ್ತಲೇ ಇದೆ ಸೋಂಕಿತರ ಸಂಖ್ಯೆ! ಕೊರೊನಾ ಆರ್ಭಟ.. ಇವತ್ತು ಕಮ್ಮಿಯಾಗುತ್ತೆ.. ನಾಳೆ ಕಮ್ಮಿಯಾಗುತ್ತೆ ಅಂತ ನೋಡಿದ್ರೆ,ಕಮ್ಮಿಯಾಗೋ ಲಕ್ಷಣನೇ ಕಾಣ್ತಾ ಇಲ್ಲ. ಅಷ್ಟರ ಮಟ್ಟಿಗೆ ರಾಜ್ಯದಲ್ಲಿ ಕೊರೊನಾ ರಣಕೇಕೆ ಹಾಕುತ್ತಾ ಅಟ್ಟಹಾಸ ಮೆರೆಯುತ್ತಿದೆ. ಅದರಂತೆ ರಾಜ್ಯದಲ್ಲಿ ಬರೋಬ್ಬರಿ 384ಜನರ ದೇಹದೊಳಗೆ ಕೊರೊನಾ ಹೊಕ್ಕಿದ್ದು, ಕೊರೊನಾಕ್ಕೆ ಬಲಿಯಾದವರ ಸಂಖ್ಯೆ 14ಕ್ಕೆ ಏರಿಕೆಯಾಗಿದೆ. ಹಾಗಿದ್ರೆ ರಾಜ್ಯದಲ್ಲಿ ಕ್ರೂರಿ ಎಲ್ಲೆಲ್ಲಿ ಅಟ್ಟಹಾಸ ಮೆರೆದಿದೆ ಅನ್ನೋದನ್ನ ನೋಡೋದಾದ್ರೆ.

ಹೆಮ್ಮಾರಿ ಅಟ್ಟಹಾಸ!

ಕೊರೊನಾ ಆರ್ಭಟ ರಾಜ್ಯದ ಸಾಕಷ್ಟು ಜಿಲ್ಲೆಯಲ್ಲಿ ಹೆಚ್ಚಾಗಿದೆ. ಹೀಗಾಗಿ ಹೆಚ್ಚು ಸೋಂಕಿತರು ಇರುವ ಜಿಲ್ಲೆ ಯಲ್ಲಿ ಕಂಟೇನ್ಮೆಂಟ್ ಜೋನ್‌ಗಳನ್ನು ಮಾಡಲಾಗಿದೆ. ಕಂಟೇನ್ಮೆಂಟ್ ಪ್ರದೇಶವನ್ನ ಸಂಪೂರ್ಣ ‌ಲಾಕ್ ಮಾಡಲಾಗಿದ್ದು, ‌ಜನರ ಓಡಾಡಕ್ಕೆ ಬ್ರೇಕ್ ‌ಹಾಕಲಾಗಿದೆ.

ಮೈಸೂರಿನ ಕಂಟೇನ್ಮೆಂಟ್ ಜೋನ್ : ಮೈಸೂರಿನಲ್ಲಿ ಇದುವರೆಗೂ 10 ಬಡಾವಣೆಗಳನ್ನು ಕಂಟೇನ್ಮೆಂಟ್‌ ಮಾಡಲಾಗಿದೆ. ವಿಜಯನಗರ 2ನೇ ಹಂತ, ವಿಜಯನಗರ ಮೊದಲ ಹಂತ, ನಜರ್‌ಬಾದ್, ಜನತಾನಗರ, ಕುವೆಂಪುನಗರ, ಜೆ ಪಿ ನಗರ, ಗೋಕುಲಂ, ಜಯಲಕ್ಷ್ಮೀಪುರಂ, ಶ್ರೀರಾಂಪುರ ಎರಡನೇ ಹಂತ, ಸರ್ದಾರ್ ವಲ್ಲಭಬಾಯಿ‌ ಪಟೇಲ್ ನಗರವನ್ನ ಕಂಟೆೇನ್ಮೆಂಟ್ ಜೋನ್ ಮಾಡಲಾಗಿದೆ.

ಬೆಳಗಾವಿ ಕಂಟೇನ್ಮೆಂಟ್ ಜೋನ್: ಬೆಳಗಾವಿಯಲ್ಲಿ ಒಟ್ಟು ಏಳು ಪ್ರದೇಶವನ್ನ ಈಗಾಗಲೇ ಕಂಟೇನ್ಮೆಂಟ್ ಜೋನ್ ಮಾಡಲಾಗಿದೆ. ಬೆಳಗಾವಿ ನಗರದ ಕ್ಯಾಂಪ್ ಪ್ರದೇಶ, ಸಂಗಮೇಶ್ವರ ನಗರ, ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ, ಬೆಳಗುಂದಿ, ಯಳ್ಳೂರು, ರಾಯಬಾಗ ತಾಲೂಕಿನ ಕುಡಚಿ,ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣವನ್ನ ಸದ್ಯ ಕಂಟೇನ್ಮೆಂಟ್ ಝೋನ್ ಎಂದು ಗುರುತಿಸಲಾಗಿದೆ.

ಬೀದರ್‌ನ ಕಂಟೇನ್ಮೆಂಟ್ ಜೋನ್: ಬೀದರ್ ಜಿಲ್ಲೆಯಲ್ಲಿ ‌ಕಂಟೇನ್ಮೆಂಟ್ ಜೋನ್ ‌ಎಂದು‌ ಬೀದರ್ ಓಲ್ಡ್ ‌ಸಿಟಿಯನ್ನ ಗುರುತಿಸಲಾಗಿದೆ. ಜಿಲ್ಲೆಯಲ್ಲಿ 14 ಜನ ಸೋಂಕಿತರ ಫೈಕಿ ಈ ಒಂದೇ ಏರಿಯಾದಲ್ಲಿ 12 ಜನ ಸೋಂಕಿತರಿದ್ದಾರೆ.

ಕಲಬುರಗಿ ಕಂಟೆೇನ್ಮೆಂಟ್ ಜೋನ್: ಕಲಬುರಗಿ ಜಿಲ್ಲೆಯಲ್ಲಿ ಸಂತ್ರಸವಾಡಿ, ಮೊಮಮಿನಪುರ್, ಖಮರ್ ಕಾಲೋನಿ, ಜಿ ಆರ್ ನಗರ್, ವಾಡಿ ಪಟ್ಟಣ, ಶಹಬಾದ್ ಪಟ್ಟಣ, ಕವಲಗಾ ಕೆ ಗ್ರಾಮ ಸೇರಿ 7 ಪ್ರದೇಶವನ್ನ ಕಂಟೇನ್ಮೆಂಟ್ ಜೋನ್‌ ಎಂದು ಗುರುತಿಸಲಾಗಿದೆ.

ಬಾಗಲಕೋಟೆ ಕಂಟೇನ್ಮೆಂಟ್ ಜೋನ್: ಬಾಗಲಕೋಟೆ ಜಿಲ್ಲೆಯಲ್ಲಿ ಹಳೇ ಬಾಗಲಕೋಟೆಯ ಒಂಬತ್ತು ವಾರ್ಡ್ ಸಂಪೂರ್ಣ ಕಂಟೇನ್ಮೆಂಟ್‌ ಜೋನ್‌ನಲ್ಲಿದೆ. ಹಾಗೇ ಮುಧೋಳ ನಗರದ ಸಾಯಿನಗರ, ಮುಧೋಳ ಪೊಲೀಸ್ ಠಾಣಾ ವ್ಯಾಪ್ತಿ ಪ್ರದೇಶವನ್ನ ಕಂಟೇನ್ಮೆಂಟ್ ಜೋನ್ ಎಂದು ಗುರುತಿಸಲಾಗಿದೆ. ಹು-ಧಾ ಕಂಟೇನ್ಮೆಂಟ್ ಜೋನ್! ಹುಬ್ಬಳ್ಳಿಯ ಮುಲ್ಲಾ ಓಣಿಯನ್ನು ಕಂಟೇನ್ಮೆಂಟ್ ಝೋನ್ ಅಂತಾ‌ ಗುರುತಿಸಲಾಗಿದೆ

ದಕ್ಷಿಣ ಕನ್ನಡ ಕಂಟೆೇನ್ಮೆಂಟ್ ಜೋನ್! ದಕ್ಷಿಣಕನ್ನಡ ಜಿಲ್ಲೆಯಲ್ಲಿ 6 ಕಂಟೇನ್ಮೆಂಟ್‌ ಜೋನ್‌ಗಳನ್ನು ಜಿಲ್ಲಾಡಳಿತ ಗುರುತಿಸಿದೆ. ಬಂಟ್ವಾಳ ತಾಲೂಕಿನ ಸಜಿಪನಡು, ತುಂಬೆ ಗ್ರಾಮ, ಬೆಳ್ತಂಗಡಿ ತಾಲೂಕಿನ ಕರಾಯ ಗ್ರಾಮ, ಪುತ್ತೂರು ತಾಲೂಕಿನ ಸಂಪ್ಯ, ಸುಳ್ಯ ತಾಲೂಕಿನ ಅಜ್ಜಾವರ, ಮಂಗಳೂರಿನ ತಾಲೂಕಿನ ತೊಕ್ಕೊಟ್ಟು ಸ್ಮಾರ್ಟ್ ಪ್ಲಾನೆಟ್ ಪ್ರದೇಶವನ್ನ ಕಂಟೆೇನ್ಮೆಂಟ್ ಜೋನ್ ಎಂದು ಗುರುತಿಸಲಾಗಿದೆ.

ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಬಾಲಕಿ ಸಾವು: ರಾಯಚೂರು ಜಿಲ್ಲಾಸ್ಪತ್ರೆಯಲ್ಲಿ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ 5 ವರ್ಷದ ಬಾಲಕಿ ಮೃತಪಟ್ಟಿದ್ದಾಳೆ. ಯಾದಗಿರಿ ಜಿಲ್ಲೆಯ ಶಹಾಪುರ ಮೂಲದ ಬಾಲಕಿಯನ್ನ ಉಸಿರಾಟದ ಸಮಸ್ಯೆ ಹಿನ್ನೆಲೆ ಚಿಕಿತ್ಸೆಗಾಗಿ ರಾಯಚೂರಿನ ರಿಮ್ಸ್​ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ಬಾಲಕಿ ಸಾವನ್ನಪ್ಪಿದ್ದು, ಮೃತ ಬಾಲಕಿಯ ರಕ್ತದ ಮಾದರಿ ಲ್ಯಾಬ್​​ಗೆ ರವಾನೆ ಮಾಡಲಾಗಿದೆ. ವರದಿಗಾಗಿ ಜಿಲ್ಲಾಡಳಿತ ಕಾಯುತ್ತಿದೆ.

ಬಾಗಲಕೋಟೆಯಲ್ಲಿ ಭಯ ಹುಟ್ಟಿಸಿದ ಹೆಮ್ಮಾರಿ ಕೊರೊನಾ! ಬಾಗಲಕೋಟೆಯಲ್ಲಿ ನಿನ್ನೆ ಸಂಜೆ ಐವರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಜನರಲ್ಲಿ ಭಯ ಹುಟ್ಟಿಸಿದೆ. ಐವರು ಸೋಂಕಿತರ ಪೈಕಿ ಮೂವರು ಮುಧೋಳದ ಪೊಲೀಸ್‌ ಪೇದೆಗಳಾಗಿದ್ದಾರೆ. ಈ ಮೂವರು ಪೇದೆಗಳಲ್ಲಿ ಒರ್ವ ಮುಧೋಳ ಸಿಪಿಐ ವಾಹನದ ಚಾಲಕ, ಮತ್ತೋರ್ವ ಮುಧೋಳ ವೃತ್ತ ಪೊಲೀಸ್​ ನಿರೀಕ್ಷಕರ ಕಚೇರಿಯ ರೈಟರ್ ಇನ್ನೋರ್ವ ಹೈವೆ ಪೆಟ್ರೋಲಿಂಗ್ ವಾಹನದ ಚಾಲಕನಾಗಿರುವ ಪೇದೆಯಾಗಿದ್ದಾನೆ. ಈ ಮೂರು ಜನ ಪೇದೆಗಳಿಗೆ ಮುಧೋಳ ಠಾಣೆ ಪೇದೆ ಅದ್ರೆ 263ನೇ ಸೋಂಕಿತನಿಂದ ವೈರಸ್ ತಗುಲಿದೆ. ಸೋಂಕಿತ 263ನೇ ವ್ಯಕ್ತಿಗೆ ತಬ್ಲೀಗ್​ ಸಂಪರ್ಕದಿಂದ ವೈರಸ್ ತಗುಲಿದೆ.

ಬ್ಯಾಂಕ್ ಸೆಕ್ಯೂರಿಟಿ ಗಾರ್ಡ್‌ಗೆ ಕೊರೊನಾ, ಹೆಚ್ಚಿದ ಆತಂಕ: ಜಮಖಂಡಿಯ SBI ಬ್ಯಾಂಕ್​ನ ಸೆಕ್ಯುರಿಟಿ ಗಾರ್ಡ್​ಗೆ 263ನೇ ಸೋಂಕಿತನಾಗಿರುವ ಮುಧೋಳ ಠಾಣೆ ಪೇದೆಯಿಂದಲೇ ವೈರಸ್ ತಗುಲಿದ್ದು, ಮತ್ತಷ್ಟು ಆತಂಕ ಹೆಚ್ಚಿದೆ. ಹೀಗಾಗಿ SBI ಬ್ಯಾಂಕ್​ನ ಸಿಬ್ಬಂದಿ ಮಾಹಿತಿಯನ್ನ ಆರೋಗ್ಯ ಇಲಾಖೆ ಕಲೆ ಹಾಕುತ್ತಿದೆ. ಸೋಂಕಿತ ಸೆಕ್ಯುರಿಟಿ ಗಾರ್ಡ್ ಜತೆ ಸಂಪರ್ಕ ಹೊಂದಿರುವ ಬ್ಯಾಂಕ್‌ ಸಿಬ್ಬಂದಿಯ ಮಾಹಿತಿ ಕಲೆ ಹಾಕಲಾಗುತ್ತಿದ್ದು, ಸಿಬ್ಬಂದಿಯನ್ನ ಕ್ವಾರಂಟೈನ್​ನಲ್ಲಿಡುವುದಕ್ಕೆ ಆರೋಗ್ಯ ಇಲಾಖೆ ಮುಂದಾಗಿದೆ. ಅಷ್ಟೇ ಅಲ್ಲ ಅಗತ್ಯ ಬಿದ್ದರೆ ಬ್ಯಾಂಕ್‌ ಬಂದ್ ಮಾಡುವ ಸಾಧ್ಯತೆಯಿದೆ.

ಒಟ್ನಲ್ಲಿ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದ್ದು, ಯಾರಿಂದ ಯಾರಿಗೆ ಸೋಂಕು ತಗುಲುತ್ತಿದೆ ಅನ್ನೋದೆ ಗೊತ್ತಾಗುತ್ತಿಲ್ಲ. ಹೀಗಾಗಿ ಜನ ಯಾರ ಸಂಪರ್ಕಕ್ಕೂ ಹೋಗದೆ ಮನೆಯಲ್ಲೇ ಇದ್ದು ತಮ್ಮ ಜೀವವನ್ನ ಉಳಿಸಿಕೊಳ್ಳಬೇಕಿದೆ. ಈ ವಿಚಾರದಲ್ಲಿ ಸ್ವಲ್ಪ ಎಚ್ಚರ ತಪ್ಪಿದ್ರೆ ಸಂಕಷ್ಟ ಕಟ್ಟಿಟ್ಟ ಬುತ್ತಿ.

Follow us on

Related Stories

Most Read Stories

Click on your DTH Provider to Add TV9 Kannada