ಯಾವ ಕ್ಷೇತ್ರಗಳು ಕಾರ್ಯಗತವಾಗಲಿವೆ? ಸಿಎಂ ಯಡಿಯೂರಪ್ಪ ಸುದ್ದಿಗೋಷ್ಠಿ ಮುಖ್ಯಾಂಶಗಳು ಇಲ್ಲಿವೆ

ಯಾವ ಕ್ಷೇತ್ರಗಳು ಕಾರ್ಯಗತವಾಗಲಿವೆ? ಸಿಎಂ ಯಡಿಯೂರಪ್ಪ ಸುದ್ದಿಗೋಷ್ಠಿ ಮುಖ್ಯಾಂಶಗಳು ಇಲ್ಲಿವೆ
ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ

ಬೆಂಗಳೂರು: ಕೊರೊನಾ ವಿರುದ್ಧದ ಯುದ್ಧದಲ್ಲಿ ಲಾಕ್​ಡೌನ್ 2.0 ಜಾರಿಯಲ್ಲಿರುವಾಗ ಸೋಮವಾರದಿಂದ ರಾಜ್ಯದಲ್ಲಿ ಏನೆಲ್ಲ ಸೇವೆಗಳು ಇರುತ್ತವೆ. ಯಾವ ಕ್ಷೇತ್ರಗಳು ಕಾರ್ಯಗತವಾಗಬಹುದು ಎಂಬುದನ್ನು ಮುಖ್ಯಮಂತ್ರಿ ಯಡಿಯೂರಪ್ಪ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಮುಖ್ಯಾಂಶಗಳು ಹೀಗಿವೆ: ತರಾತುರಿಯ ಲಾಕ್‌ಡೌನ್‌ ಸಡಿಲಿಕೆ ಎಲ್ಲಾ ಜಿಲ್ಲೆಗೂ ಅನ್ವಯಿಸಲ್ಲ..! ನಿರ್ಬಂಧ ಸಡಿಲಿಕೆಯಾದ್ರೂ 8 ಜಿಲ್ಲೆಯ ಜನ ಮನೆಯಲ್ಲೇ ಇರಬೇಕು ಕಂಟೇನ್‌ಮೆಂಟ್‌ ಜೋನ್‌ನಲ್ಲಿರೋರಿಗೆ ಈ ವಿನಾಯಿತಿ ಸಿಗಲ್ಲ ಬೆಂಗಳೂರು ನಗರ, ಮೈಸೂರು, ಬೆಳಗಾವಿ, ದಕ್ಷಿಣ ಕನ್ನಡ, ಬೀದರ್‌ ಕಲಬುರಗಿ, ಬಾಗಲಕೋಟೆ, ಧಾರವಾಡದಲ್ಲಿ ಲಾಕ್‌ಡೌನ್‌ ಮುಂದುವರಿಕೆ ಬೆಂಗಳೂರಿನಲ್ಲಿ 30 ವಾರ್ಡ್‌ಗಳು […]

sadhu srinath

|

Apr 18, 2020 | 4:58 PM

ಬೆಂಗಳೂರು: ಕೊರೊನಾ ವಿರುದ್ಧದ ಯುದ್ಧದಲ್ಲಿ ಲಾಕ್​ಡೌನ್ 2.0 ಜಾರಿಯಲ್ಲಿರುವಾಗ ಸೋಮವಾರದಿಂದ ರಾಜ್ಯದಲ್ಲಿ ಏನೆಲ್ಲ ಸೇವೆಗಳು ಇರುತ್ತವೆ. ಯಾವ ಕ್ಷೇತ್ರಗಳು ಕಾರ್ಯಗತವಾಗಬಹುದು ಎಂಬುದನ್ನು ಮುಖ್ಯಮಂತ್ರಿ ಯಡಿಯೂರಪ್ಪ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಮುಖ್ಯಾಂಶಗಳು ಹೀಗಿವೆ:

ತರಾತುರಿಯ ಲಾಕ್‌ಡೌನ್‌ ಸಡಿಲಿಕೆ ಎಲ್ಲಾ ಜಿಲ್ಲೆಗೂ ಅನ್ವಯಿಸಲ್ಲ..!

ನಿರ್ಬಂಧ ಸಡಿಲಿಕೆಯಾದ್ರೂ 8 ಜಿಲ್ಲೆಯ ಜನ ಮನೆಯಲ್ಲೇ ಇರಬೇಕು

ಕಂಟೇನ್‌ಮೆಂಟ್‌ ಜೋನ್‌ನಲ್ಲಿರೋರಿಗೆ ಈ ವಿನಾಯಿತಿ ಸಿಗಲ್ಲ

ಬೆಂಗಳೂರು ನಗರ, ಮೈಸೂರು, ಬೆಳಗಾವಿ, ದಕ್ಷಿಣ ಕನ್ನಡ, ಬೀದರ್‌

ಕಲಬುರಗಿ, ಬಾಗಲಕೋಟೆ, ಧಾರವಾಡದಲ್ಲಿ ಲಾಕ್‌ಡೌನ್‌ ಮುಂದುವರಿಕೆ

ಬೆಂಗಳೂರಿನಲ್ಲಿ 30 ವಾರ್ಡ್‌ಗಳು ಕಂಟೇನ್ಮೆಂಟ್‌ ಜೋನ್‌ಗಳಾಗಿ ಫಿಕ್ಸ್ ಆಗಿವೆ ಬೆಂಗಳೂರಿನಲ್ಲಿ ಒಟ್ಟು ೩೨ ಕಂಟೇನ್ಮೆಂಟ್ ರಚಿಸಲಾಗಿದೆ

ಉಳಿದ ಎಂಟು ಜಿಲ್ಲೆಗಳ ಹಾಟ್‌ಸ್ಪಾಟ್ ಗಳು ಮುಂದುವರಿಯುತ್ತದೆ

ಮದ್ಯ ಮಾರಾಟ ಮೇ ೩ರ ನಂತರ ಯೋಚಿಸುತ್ತೇವೆ

ಕಟ್ಟಡ ಕಾರ್ಮಿಕರಿಗೆ ಅವಕಾಶ ನೀಡಲಾಗುತ್ತದೆ

ಕಂಟೇನ್ಮೆಂಟ್‌ ಜೋನ್‌ಗಳಾಗಿ ಫಿಕ್ಸ್ ಆಗಿರುವ ವಾರ್ಡ್‌ಗಳಿಗೆ ವಿನಾಯಿತಿ ಇಲ್ಲ

ಲಾಕ್‌ಡೌನ್‌ ರೂಲ್ಸ್‌ನಲ್ಲಿ ಈ 30 ವಾರ್ಡ್‌ಗಳಿಗೆ ಯಾವುದೇ ವಿನಾಯಿತಿ ಇಲ್ಲ

ಕೇಂದ್ರ ಸರ್ಕಾರ ಜಿಲ್ಲೆಗಳನ್ನ 3 ಭಾಗಗಳಾಗಿ ವಿಂಗಡಿಸಿದೆ

ರೆಡ್‌ ಜೋನ್‌ ಜಿಲ್ಲೆಗಳಲ್ಲಿ ಲಾಕ್‌ಡೌನ್‌ ಕಟ್ಟುನಿಟ್ಟಿನ ಜಾರಿ

ರೆಡ್‌ ಜೋನ್‌ ಜಿಲ್ಲೆಗಳಲ್ಲಿ ಹೆಚ್ಚಿನ ಪಾಸಿಟಿವ್ ಕೇಸ್‌ ಪತ್ತೆ

ರೆಡ್‌ ಜೋನ್‌ ಜಿಲ್ಲೆಗಳಲ್ಲಿ 14 ದಿನ ಹೊಸ ಕೇಸ್‌ ಪತ್ತೆಯಾಗಬಾರದು

ಹೊಸ ಕೇಸ್‌ ಪತ್ತೆಯಾಗದಿದ್ರೆ ಕಂಟೇನ್ಮೆಂಟ್‌ ಕಾರ್ಯತಂತ್ರ ಯಶಸ್ವಿ

ಬಳಿಕ 14 ದಿನಗಳ ಕಾಲ ಹೊಸ ಪಾಸಿಟಿವ್‌ ಪ್ರಕರಣ ಪತ್ತೆಯಾಗಬಾರದು.

28 ದಿನ ಹೊಸ ಕೇಸ್‌ ಪತ್ತೆಯಾಗದಿದ್ರೆ ಯೆಲ್ಲೋ ಜೋನ್‌ಗೆ ಸೇರ್ಪಡೆ

ಇದು ಕೇಂದ್ರ ಸರ್ಕಾರದ ಆರೋಗ್ಯ ಇಲಾಖೆಯ ಮಾರ್ಗಸೂಚಿ

ರೆಡ್‌ ಜೋನ್‌ ಜಿಲ್ಲೆಗಳಿಗೆ ಲಾಕ್‌ಡೌನ್‌ನಿಂದ ವಿನಾಯಿತಿ ನೀಡುವಂತಿಲ್ಲ

ಮೋದಿ ಕೂಡ ತಮ್ಮ ಭಾಷಣದಲ್ಲಿ ಇದನ್ನೇ ಸ್ಪಷ್ಟವಾಗಿ ಹೇಳಿದ್ದಾರೆ

Follow us on

Related Stories

Most Read Stories

Click on your DTH Provider to Add TV9 Kannada