ಸಾಮಾಜಿಕ ಅಂತರ ಕಾಪಾಡಿಕೊಳ್ಳದೆ ಜನರ ಸೇವೆಗಿಳಿದ ಮಾಜಿ ಸಚಿವರು, ಜನರ ಆಕ್ರೋಶ
ಹೊಸಕೋಟೆ: ಹಂತಕ ಕೊರೊನಾ ವೈರೆಸ್ ದೇಶದಲ್ಲಿ ಆತಂಕ ಸೃಷ್ಟಿಸಿದೆ. ಕೊರೊನಾಗೆ ಜನ ಮೃತಪಟ್ತಿದ್ದಾರೆ. ದಿನೇ ದಿನೇ ತನ್ನ ಅಟ್ಟಹಾಸ ಮೆರೆಯುತ್ತಿದೆ. ಜನ ಸಂಕಷ್ಟಕ್ಕೆ ಈಡಾಗಿದ್ದಾರೆ. ಹೀಗಾಗಿ ಇಂತವರ ಸಹಾಯಕ್ಕಾಗಿ ಮುಂದಾಗಿರುವ ಎಂಟಿಬಿ ನಾಗರಾಜ್ ಸಾಮಾಜಿಕ ಅಂತರ ಕಾಪಾಡದೇ ಜನರಿಗೆ ಹಣ್ಣು ಹಂಪಲು ವಿತರಿಸಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕು ಬೈಲನರಸಾಪುರದಲ್ಲಿ ನಾಲ್ವರಿಗೆ ಸೋಂಕು ಇದ್ದರೂ ನಿರ್ಲಕ್ಷ್ಯ ತೋರಲಾಗಿದೆ. ಕೊರೊನಾ ಪ್ರಕರಣಗಳಿರುವ ಪ್ರದೇಶದಲ್ಲಿ ಮಾಜಿ ಸಚಿವ ಎಂಟಿಬಿ ನಾಗರಾಜ್ ನಿರ್ಲಕ್ಷ್ಯ ತೋರಿಸಿದ್ದಾರೆ. ಗುಂಪು ಗುಂಪಾಗಿ ಮನೆಗಳಿಗೆ ತೆರಳಿ […]
ಹೊಸಕೋಟೆ: ಹಂತಕ ಕೊರೊನಾ ವೈರೆಸ್ ದೇಶದಲ್ಲಿ ಆತಂಕ ಸೃಷ್ಟಿಸಿದೆ. ಕೊರೊನಾಗೆ ಜನ ಮೃತಪಟ್ತಿದ್ದಾರೆ. ದಿನೇ ದಿನೇ ತನ್ನ ಅಟ್ಟಹಾಸ ಮೆರೆಯುತ್ತಿದೆ. ಜನ ಸಂಕಷ್ಟಕ್ಕೆ ಈಡಾಗಿದ್ದಾರೆ. ಹೀಗಾಗಿ ಇಂತವರ ಸಹಾಯಕ್ಕಾಗಿ ಮುಂದಾಗಿರುವ ಎಂಟಿಬಿ ನಾಗರಾಜ್ ಸಾಮಾಜಿಕ ಅಂತರ ಕಾಪಾಡದೇ ಜನರಿಗೆ ಹಣ್ಣು ಹಂಪಲು ವಿತರಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕು ಬೈಲನರಸಾಪುರದಲ್ಲಿ ನಾಲ್ವರಿಗೆ ಸೋಂಕು ಇದ್ದರೂ ನಿರ್ಲಕ್ಷ್ಯ ತೋರಲಾಗಿದೆ. ಕೊರೊನಾ ಪ್ರಕರಣಗಳಿರುವ ಪ್ರದೇಶದಲ್ಲಿ ಮಾಜಿ ಸಚಿವ ಎಂಟಿಬಿ ನಾಗರಾಜ್ ನಿರ್ಲಕ್ಷ್ಯ ತೋರಿಸಿದ್ದಾರೆ. ಗುಂಪು ಗುಂಪಾಗಿ ಮನೆಗಳಿಗೆ ತೆರಳಿ ದಿನಸಿ ಕಿಟ್ ವಿತರಣೆ ಮಾಡಿ ಬೇಜವಾಬ್ದಾರಿತನದಿಂದ ವರ್ತಿಸಿದ್ದಾರೆ. ತುತ್ತು ಅನ್ನಕ್ಕು ಪರದಾಡುತ್ತಿರುವ ಸಮಯದಲ್ಲಿ ಇಂತಹ ಸೇವೆ ಶ್ಲಾಘನೀಯ ಆದರೆ ಸಾಮಾಜಿಕ ಅಂತರ ಕಾಪಾಡಿಕೊಳ್ಳದಿರುವುದು ಜನರ ಆಕ್ರೋಶಕ್ಕೆ ಎಡೆ ಮಾಡಿದೆ.