ನನಗೆ ಸಂಪುಟ ದರ್ಜೆಯ ಸ್ಥಾನಮಾನ ಬೇಡ, ದಯವಿಟ್ಟು ಹಿಂಪಡೆಯಿರಿ: ಬಿ ಎಸ್ ಯಡಿಯೂರಪ್ಪ

| Updated By: guruganesh bhat

Updated on: Aug 08, 2021 | 2:44 PM

ನಿನ್ನೆಯಷ್ಟೇ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪಗೆ ಸಂಪುಟ ದರ್ಜೆಯ ಸ್ಥಾನಮಾನ ನೀಡುವಂತೆ ಸಿಎಂ ಬಸವರಾಜ ಬೊಮ್ಮಾಯಿ ಆದೇಶಿಸಿದ್ದರು.

ನನಗೆ ಸಂಪುಟ ದರ್ಜೆಯ ಸ್ಥಾನಮಾನ ಬೇಡ, ದಯವಿಟ್ಟು ಹಿಂಪಡೆಯಿರಿ: ಬಿ ಎಸ್ ಯಡಿಯೂರಪ್ಪ
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ
Follow us on

ಬೆಂಗಳೂರು: ನನಗೆ ನೀಡಿರುವ ಸಂಪುಟ ದರ್ಜೆ ಸ್ಥಾನಮಾನವನ್ನು ಹಿಂಪಡೆಯುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ನಿಕಟಪೂರ್ವ ಸಿಎಂ ಬಿ.ಎಸ್.ಯಡಿಯೂರಪ್ಪ ಪತ್ರ ಬರೆದಿದ್ದಾರೆ. ತಮಗೆ ಮಾಜಿ ಸಿಎಂಗೆ ನೀಡುವ ಸರ್ಕಾರಿ ಸೌಲಭ್ಯ ಮಾತ್ರ ನೀಡಿ ಎಂದು ಪತ್ರದಲ್ಲಿ ಬಿ. ಎಸ್.ಯಡಿಯೂರಪ್ಪ (BS Yediyurappa) ವಿನಂತಿಸಿದ್ದಾರೆ. ನಿನ್ನೆಯಷ್ಟೇ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪಗೆ ಸಂಪುಟ ದರ್ಜೆಯ ಸ್ಥಾನಮಾನ ನೀಡುವಂತೆ ಸಿಎಂ ಬಸವರಾಜ ಬೊಮ್ಮಾಯಿ (CM Basavaraj Bommai) ಆದೇಶಿಸಿದ್ದರು.

ಬಸವರಾಜ ಬೊಮ್ಮಾಯಿ‌ ಸಿಎಂ ಅಗಿ ಇರುವವರೆಗೆ ಸಂಪುಟ ದರ್ಜೆಯ ಸಚಿವರ ಎಲ್ಲಾ ಸೌಲಭ್ಯ ನೀಡಲಾಗುವುದು ಎಂದು ಆದೇಶವನ್ನು ನಿನ್ನೆಯಷ್ಟೇ (ಆಗಸ್ಟ್ 7) ಪ್ರಕಟಿಸಲಾಗಿತ್ತು.  ಈ ಬಗ್ಗೆ ಕರ್ನಾಟಕ ರಾಜ್ಯ ಸರ್ಕಾರದಿಂದ ಅಧಿಸೂಚನೆ ಹೊರಡಿಸಲಾಗಿತ್ತು. ಬಿಎಸ್‌ವೈಗೆ ಸಂಪುಟ ದರ್ಜೆಯ ಸಚಿವರ ಎಲ್ಲಾ ಸೌಲಭ್ಯ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಅದರಂತೆ, ಬಸವರಾಜ ಬೊಮ್ಮಾಯಿ‌ ಮುಖ್ಯಮಂತ್ರಿ ಆಗಿ ಇರುವವರೆಗೆ ಬಿ.ಎಸ್. ಯಡಿಯೂರಪ್ಪಗೆ ಎಲ್ಲಾ ಸೌಲಭ್ಯ ಒದಗಿಸಲಾಗಿತ್ತು.

 

                                                                                 ಬಿ ಎಸ್ ಯಡಿಯೂರಪ್ಪ ಬರೆದ ಪತ್ರ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸಚಿವ ಸಂಪುಟ ರಚನೆಯಾಗಿದ್ದು, ನಿನ್ನೆ (ಆಗಸ್ಟ್ 7) ಸಚಿವರಿಗೆ ಖಾತೆ ಹಂಚಿಕೆಯಾಗಿದೆ. ಈ ಬಗ್ಗೆ ಅಧಿಕೃತ ಪಟ್ಟಿ ಹೊರಬಿದ್ದಿದ್ದು, ಯಾರು ಯಾರಿಗೆ ಯಾವ ಖಾತೆ ಎಂಬ ವಿವರ ಲಭ್ಯವಾಗಿದೆ. ಹಣಕಾಸು ಮತ್ತು ಬೆಂಗಳೂರು ಅಭಿವೃದ್ಧಿ ಖಾತೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತನ್ನಲ್ಲಿಯೇ ಉಳಿಸಿಕೊಂಡಿದ್ದಾರೆ. ಮೊದಲ ಬಾರಿಗೆ ಸಚಿವ ಸ್ಥಾನ ಅಲಂಕರಿಸಿದ ಆರಗ ಜ್ಞಾನೇಂದ್ರ ಅವರಿಗೆ ಗೃಹ ಖಾತೆ ಲಭಿಸಿದೆ. ಯಡಿಯೂರಪ್ಪ ಸರ್ಕಾರದಲ್ಲಿ ಸಚಿವರಾಗಿದ್ದ ಬಹುತೇಕರು ತಮ್ಮ ತಮ್ಮ ಖಾತೆಯನ್ನೇ ಉಳಿಸಿಕೊಂಡಿದ್ದಾರೆ.

ಇದನ್ನೂ ಓದಿ:   

School Opening: 9, 10, 12ನೇ ತರಗತಿಗಳಿಗೆ ಶಾಲಾ ಕಾಲೇಜುಗಳು ಆಗಸ್ಟ್‌ 23ರಿಂದ ಆರಂಭ: ಬಸವರಾಜ ಬೊಮ್ಮಾಯಿ

ಜೆಡಿಎಸ್​ ಜತೆ ಹೊಂದಾಣಿಕೆ ರಾಜಕೀಯ ಮಾಡಿದರೆ ಬಿಜೆಪಿ ಕಚೇರಿಯಲ್ಲಿ ಕಸ ಗುಡಿಸಿಕೊಂಡು ಇದ್ದುಬಿಡುತ್ತೇನೆ: ಶಾಸಕ ಪ್ರೀತಂಗೌಡ ಕಿಡಿಕಿಡಿ

(BS Yediyurappa denied I do not want the status of a cabinet rank facility)

Published On - 2:28 pm, Sun, 8 August 21