AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಾವಣಗೆರೆ: ಅನೈತಿಕ ಪೊಲೀಸ್ ಗಿರಿ; ಕೆಆರ್​ಎಸ್​ ಪಕ್ಷದ ಮೂರು ಕಾರ್ಯಕರ್ತರ ಬಂಧನ

ಎಚ್‌ಕೆಆರ್ ಸರ್ಕಲ್‌ನ ಮಾಲತೇಶ, ಶಶಿಕುಮಾರ ಹಾಗೂ ನಿಟುವಳ್ಳಿಯ ಅಭಿಷೇಕ್ ಬಂಧಿತರು. ನಿಟುವಳ್ಳಿ ಆರೋಗ್ಯ ಕೇಂದ್ರದ ಬಳಿ ಜುಲೈ 31 ರಂದು ಲಸಿಕೆ ಅಭಿಯಾನ ನಡೆಯುವ ವೇಳೆ ಆಸ್ಪತ್ರೆಯವರು ಭ್ರಷ್ಟರಿದ್ದಾರೆ ಒಳಗೆ ನುಗ್ಗಿ ನಾವು ಫೇಸ್‌ಬುಕ್‌ನಲ್ಲಿ ಲೈವ್ ಮಾಡುತ್ತೇವೆ ಎಂದು ಹೇಳಿ ವಿಡಿಯೋ ಮಾಡಿದ್ದರು.

ದಾವಣಗೆರೆ: ಅನೈತಿಕ ಪೊಲೀಸ್ ಗಿರಿ;  ಕೆಆರ್​ಎಸ್​ ಪಕ್ಷದ ಮೂರು ಕಾರ್ಯಕರ್ತರ ಬಂಧನ
ಅಭಿಷೇಕ್ , ಮಾಲತೇಶ ಹಾಗೂ ಶಶಿಕುಮಾರ
TV9 Web
| Updated By: preethi shettigar|

Updated on: Aug 08, 2021 | 2:06 PM

Share

ದಾವಣಗೆರೆ: ಜಿಲ್ಲೆಯ ನಿಟುವಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿ ಗಲಭೆಗೆ ಪ್ರಚೋದನೆ ನೀಡಿ ಅದನ್ನು ವಿಡಿಯೋ ಮಾಡಿ ಹಣಕ್ಕೆ ಬೇಡಿಕೆ ಇಟ್ಟು,ಅನೈತಿಕ ಪೊಲೀಸ್‌ಗಿರಿ ಮಾಡುತ್ತಿದ್ದ ಕೆಆರ್‌ಎಸ್‌ (ಕರ್ನಾಟಕ ರಾಷ್ಟ್ರೀಯ ಸಮಿತಿ) ಪಕ್ಷದ ಮೂವರು ಕಾರ್ಯಕರ್ತರನ್ನು ದಾವಣಗೆರೆ ಜಿಲ್ಲೆಯ ಕೆಟಿಜೆ ನಗರ ಪೊಲೀಸರು ಬಂಧಿಸಿದ್ದಾರೆ.

ಎಚ್‌ಕೆಆರ್ ಸರ್ಕಲ್‌ನ ಮಾಲತೇಶ, ಶಶಿಕುಮಾರ ಹಾಗೂ ನಿಟುವಳ್ಳಿಯ ಅಭಿಷೇಕ್ ಬಂಧಿತರು. ನಿಟುವಳ್ಳಿ ಆರೋಗ್ಯ ಕೇಂದ್ರದ ಬಳಿ ಜುಲೈ 31 ರಂದು ಲಸಿಕೆ ಅಭಿಯಾನ ನಡೆಯುವ ವೇಳೆ ಆಸ್ಪತ್ರೆಯವರು ಭ್ರಷ್ಟರಿದ್ದಾರೆ ಒಳಗೆ ನುಗ್ಗಿ ನಾವು ಫೇಸ್‌ಬುಕ್‌ನಲ್ಲಿ ಲೈವ್ ಮಾಡುತ್ತೇವೆ ಎಂದು ಹೇಳಿ ವಿಡಿಯೋ ಮಾಡಿದ್ದರು. ಅಲ್ಲದೆ ಗಲಭೆಗೆ ಪ್ರಚೋದನೆ ನೀಡಿದ್ದರು. ಹೀಗಾಗಿ ಈ ಮೂವರನ್ನು ಠಾಣೆಗೆ ಕರೆತಂದ ಪೊಲೀಸರು ಪ್ರಕರಣ ದಾಖಲಿಸಿ ತಹಶೀಲ್ದಾರ್‌ಗೆ ವರದಿ ನೀಡಿದ್ದು, ವರದಿ ವಿಚಾರಣೆಯ ಹಂತದಲ್ಲಿದೆ.

ಠಾಣೆಗೆ ಕರೆತಂದ ವಿಚಾರವನ್ನೇ ಮನಸ್ಸಿನಲ್ಲಿ ಇಟ್ಟುಕೊಂಡ ಆರೋಪಿಗಳು ಪೊಲೀಸ್ ಕಾನ್‌ಸ್ಟೆಬಲ್ ಒಬ್ಬರು ಠಾಣೆಗೆ ಬರುತ್ತಿದ್ದಾಗ ಅವರನ್ನು ತಡೆದು ಆರೋಗ್ಯ ಕೇಂದ್ರದ ಬಳಿ ಮಾಡಿದ ವಿಡಿಯೋವನ್ನು ತೋರಿಸಿ ಇದನ್ನು ಡಿಲಿಟ್ ಮಾಡಬೇಕು ಎಂದರೆ 30 ಸಾವಿರ ನೀಡಬೇಕು. ಇಲ್ಲದಿದ್ದರೆ ಮೇಲಾಧಿಕಾರಿಗಳಿಗೆ ನಿಮ್ಮ ವಿರುದ್ಧ ದೂರು ನೀಡುತ್ತೇವೆ ಎಂದು ಬೇಡಿಕೆ ಇಟ್ಟಿದ್ದಾರೆ. ಹೀಗಾಗಿ ಮತ್ತೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.

ಈ ಆರೋಪಿಗಳು ಕೆಎಸ್‌ಆರ್‌ಟಿಸಿ ನೌಕರರಿಗೂ ಕೂಡ ಬೆದರಿಕೆ ಒಡ್ಡಿದ್ದರು. ಭ್ರಷ್ಟಾಚಾರ ನಿರ್ಮೂಲನೆ ನೆಪದಲ್ಲಿ ಸಾರ್ವಜನಿಕರು ಹಾಗೂ ಸರ್ಕಾರಿ ನೌಕರರಿಗೆ ಬೇದರಿಕೆ ಹಾಕಿ ಹಣ ಮಾಡುತ್ತಿದ್ದ ಆರೋಪದಡಿಯಲ್ಲಿ, ಮೂವರನ್ನು ಬಂಧಿಸಿದ್ದಾರೆ. ಸದ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ತನಿಖೆಗಾಗಿ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಇದನ್ನೂ ಓದಿ: ಪಾಕ್​ನಲ್ಲಿ ಹಿಂದೂ ದೇಗುಲ ಧ್ವಂಸ ಪ್ರಕರಣ: ಪೊಲೀಸರಿಗೆ ಛೀಮಾರಿ ಹಾಕಿದ ಸುಪ್ರೀಂಕೋರ್ಟ್​ ಮುಖ್ಯ ನ್ಯಾಯಾಧೀಶ, 20 ಮಂದಿ ಬಂಧನ

ಬಸವನಗುಡಿ ಬಳಿಯ ಪಿಜ್ಜಾ ಶಾಪ್​ನಲ್ಲಿ ಪ್ರೇಮಿಸಲು ನಿರಾಕರಿಸಿದ ಯುವತಿ ಮೇಲೆ ಹಲ್ಲೆ; ಆರೋಪಿ ಮ್ಯಾನೇಜರ್ ಬಂಧನ