ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಲು BSY ಚಿಂತನೆ: ಜನಸ್ನೇಹಿ ಸರ್ಕಾರಕ್ಕೆ ಸ್ಪೆಷಲ್ ಸೆಲ್!
ಬೆಂಗಳೂರು: ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದು ಆರು ತಿಂಗಳ ಮೇಲಾಯ್ತು. ಆದ್ರೆ, ಇಷ್ಟ್ ದಿನಗಳಲ್ಲಿ ಸಿಎಂ ನೆಮ್ಮದಿಯಿಂದ ಇದ್ದಿದ್ದೇ ಕಡಿಮೆ. ಒಂದಿಲ್ಲೊಂದು ಟೆನ್ಷನ್ ಬಿಎಸ್ವೈರನ್ನು ಕಾಡ್ತಿತ್ತು. ಆದ್ರೀಗ ಆ ಎಲ್ಲಾ ಚಿಂತೆಗಳಿಗೂ ಬ್ರೇಕ್ ಬಿದ್ದಿದೆ. ಇನ್ಮುಂದೆ ಸರ್ಕಾರವನ್ನು ಜನರ ಬಳಿಗೆ ಕೊಂಡೊಯ್ಯಲು ಪ್ಲ್ಯಾನ್ ಮಾಡಿದ್ದಾರೆ. ‘ಜನಸ್ನೇಹಿ’ ಸರ್ಕಾರಕ್ಕೆ ‘ಸ್ಪೆಷಲ್ ಸೆಲ್’ ವರ್ಕೌಟ್! ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದು 6 ತಿಂಗಳು ಕಳೆದು ಹೋಯ್ತು. ಇಷ್ಟು ದಿನಗಳ ಕಾಲ ಸಚಿವ ಸಂಪುಟ ವಿಸ್ತರಣೆ, ಉಪಚುನಾವಣೆ, ಖಾತೆ […]
ಬೆಂಗಳೂರು: ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದು ಆರು ತಿಂಗಳ ಮೇಲಾಯ್ತು. ಆದ್ರೆ, ಇಷ್ಟ್ ದಿನಗಳಲ್ಲಿ ಸಿಎಂ ನೆಮ್ಮದಿಯಿಂದ ಇದ್ದಿದ್ದೇ ಕಡಿಮೆ. ಒಂದಿಲ್ಲೊಂದು ಟೆನ್ಷನ್ ಬಿಎಸ್ವೈರನ್ನು ಕಾಡ್ತಿತ್ತು. ಆದ್ರೀಗ ಆ ಎಲ್ಲಾ ಚಿಂತೆಗಳಿಗೂ ಬ್ರೇಕ್ ಬಿದ್ದಿದೆ. ಇನ್ಮುಂದೆ ಸರ್ಕಾರವನ್ನು ಜನರ ಬಳಿಗೆ ಕೊಂಡೊಯ್ಯಲು ಪ್ಲ್ಯಾನ್ ಮಾಡಿದ್ದಾರೆ.
‘ಜನಸ್ನೇಹಿ’ ಸರ್ಕಾರಕ್ಕೆ ‘ಸ್ಪೆಷಲ್ ಸೆಲ್’ ವರ್ಕೌಟ್! ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದು 6 ತಿಂಗಳು ಕಳೆದು ಹೋಯ್ತು. ಇಷ್ಟು ದಿನಗಳ ಕಾಲ ಸಚಿವ ಸಂಪುಟ ವಿಸ್ತರಣೆ, ಉಪಚುನಾವಣೆ, ಖಾತೆ ಹಂಚಿಕೆಯ ಗುಂಗಲ್ಲೇ ಸಿಎಂ ಬಿಎಸ್ವೈ ಬ್ಯುಸಿಯಾಗಿದ್ರು. ಆದ್ರೀಗ ಅಭಿವೃದ್ಧಿಯತ್ತ ಗಮನ ಹರಿಸಲು ಮುಂದಾಗಿದ್ದಾರೆ.
ಜನರ ಬಳಿಗೆ ಸರ್ಕಾರ ಕೊಂಡೊಯ್ಯಲು ಹೊಸ ಪ್ಲ್ಯಾನ್ ರೆಡಿಯಾಗಿದೆ. ಮತ್ತಷ್ಟು ಪರಿಣಾಮಕಾರಿಯಾಗಿ ಸರ್ಕಾರದ ಯೋಜನೆ ಜಾರಿಗೆ ಯಡಿಯೂರಪ್ಪ ಚಿಂತನೆ ನಡೆಸಿದ್ದು, ತಳಮಟ್ಟದ ಜನರಿಗೆ ಸರ್ಕಾರದ ಯೋಜನೆ ತಲುಪಿಸಲು ಸಜ್ಜಾಗಿದ್ದಾರೆ. ಆದ್ರೆ, ಅದಕ್ಕೂ ಮೊದಲು ಆಡಳಿತ ಯಂತ್ರವನ್ನು ಚುರುಕುಗೊಳಿಸಲು ತಂತ್ರ ರೆಡಿಯಾಗಿತ್ತಿದೆ.
‘ಸ್ಪೆಷಲ್’ ವರ್ಕೌಟ್: ರಾಜ್ಯದಲ್ಲಿರುವ ಅಧಿಕಾರಿಗಳನ್ನು ಚುರುಕುಗೊಳಿಸಲು ಹೊಸ ಪ್ಲ್ಯಾನ್ ಮಾಡಲಾಗುತ್ತಿದೆ. ಬಜೆಟ್ ಪೂರ್ವಭಾವಿ ಸಭೆಯ ವೇಳೆ ಸಿಕ್ಕ ಮಾಹಿತಿಯನ್ವಯ ಹೊಸ ಪ್ಲ್ಯಾನ್ಗೆ ಸಿದ್ಧತೆ ನಡೀತಿದೆ. ಸಿಎಂ ಕಚೇರಿಯ ಕಾರ್ಯಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ಮಾಡಲು ಚಿಂತನೆ ನಡೆದಿದ್ದು, ಈಗಾಗ್ಲೇ ಅಧಿಕಾರಿಗಳ ದೊಡ್ಡ ಪಡೆಯೊಂದಿಗೆ ವಿಶೇಷ ಕೋಶ ರಚನೆಗೆ ಸಿಎಂ ಯಡಿಯೂರಪ್ಪ ತಂತ್ರ ಹೆಣೆದಿದ್ದಾರೆ.
ಶೀಘ್ರದಲ್ಲೇ ಕಾರ್ಯಾಚರಣೆ ಮಾಡಲು ವಿಶೇಷ ಕೋಶದ ತಯಾರಿ ನಡೆಯಲಿದೆ. ಜತೆಗೆ ಬೆಂಗಳೂರಿನಲ್ಲಿ 10 ಕ್ಕೂ ಹೆಚ್ಚು ಅಧಿಕಾರಿಗಳ ವಿಶೇಷ ತಂಡ ರಚಿಸಲು ತೀರ್ಮಾನವನ್ನೂ ಮಾಡಲಾಗಿದೆ. ಮಹಾರಾಷ್ಟ್ರದಲ್ಲಿ ಜಾರಿಯಲ್ಲಿರುವ ಯೋಜನೆಯಂತೆ ವಿಶೇಷವಾದ ಘಟಕ ರಚನೆ ಮಾಡಲು ನಿರ್ಧರಿಸಲಾಗಿದೆ. ಈ ಪ್ಲ್ಯಾನ್ ಸಕ್ಸಸ್ ಆದ್ಮೇಲೆ ಜನರನ್ನು ತಲುಪಲು ಹೊಸ ಪ್ಲ್ಯಾನ್ ಕೂಡ ರೆಡಿಯಾಗಿದೆ. ಅವರಿಗೆ ಸರ್ಕಾರದ ಯೋಜನೆಗಳನ್ನು ತಲುಪಿಸಿ ಕಷ್ಟಗಳಿಗೆ ನೆರವಾಗಲು ವರ್ಕೌಟ್ ನಡೆಯಲಿದೆ.
ಜನರ ಬಳಿಗೆ ‘ಸರ್ಕಾರ’: ಮುಖ್ಯಮಂತ್ರಿಗಳ ಬಳಿಗೆ ಬರುವ ಜನರ ಅಹವಾಲುಗಳಿಗೆ ತಕ್ಷಣವೇ ಪರಿಹಾರ ಕಲ್ಪಿಸಲು ವಿಶೇಷ ಘಟಕ ರೂಪಿಸುವುದು ಸರ್ಕಾರದ ಉದ್ದೇಶವಾಗಿದೆ. ಸಿಎಂ ಜಿಲ್ಲಾ ಪ್ರವಾಸಗಳ ವೇಳೆ ಕೊಟ್ಟ ಮನವಿಗಳಿಗೆ ಇಲಾಖೆಗಳ ಜೊತೆಗೆ ಸಮನ್ವಯತೆ ಸಾಧಿಸುವುದು, ಅರ್ಜಿ ಕೊಟ್ಟ ವ್ಯಕ್ತಿ ಇಲ್ಲವೇ ಫಲಾನುಭವಿಗಳಿಗೆ ಹಿಂಬರಹ ನೀಡುವುದನ್ನು ಜಾರಿಗೊಳಿಸುವುದು, ಕೊಟ್ಟ ಮನವಿಗಳಿಗೆ ಪರಿಹಾರ ಸಿಗೋವೆರಗೂ ಅಧಿಕಾರಿಗಳ ಮಧ್ಯೆ ಸಮನ್ವಯತೆ ಇರಿಸೋ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿದೆ.
ವಿಧಾನಸೌಧದಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳ ತಂಡದಿಂದ ನಿರಂತರ ಕಾರ್ಯಾಚರಣೆ ನಡೆಯಲಿದ್ದು, ಸರ್ಕಾರದ ಯೋಜನೆಗಳು ಜನರಿಗೆ ತಲುಪುವಂತೆ ಮಾಡುವ ಜೊತೆಗೆ ನಿಗಾ ವಹಿಸುವುದು. ಸಹಾಯ ಕೇಳಿ ಬರುವ ಎಲ್ಲರಿಗೂ ಮಾರ್ಗದರ್ಶನ ಮಾಡುವುದು. ಸಿಎಂ ಮತ್ತು ಸಚಿವರಿಗೆ ಸೂಕ್ತ ರೀತಿಯ ಸಲಹೆ ಕೊಟ್ಟು ಕೆಲಸವಾಗುವಂತೆ ಮಾಡುವುದು. ಜನರ ಬಳಿಗೆ ತಲುಪಲು ಇನ್ನಷ್ಟು ಪರಿಣಾಮಕಾರಿಯಾಗಿ ಅಧಿಕಾರಿಗಳನ್ನು ಉತ್ತೇಜಿಸುವುದು ಮೊದಲಾದ ಕೆಲಸಗಳನ್ನು ಸ್ಪೆಷಲ್ ಸೆಲ್ ಮಾಡಲಿದೆ.
ಅಲ್ದೆ, ಸರ್ಕಾರ ಕೊಟ್ಟ ಯೋಜನೆಗಳು ಎಲ್ಲರಿಗೂ ತಲುಪುವಂತೆ ಮಾಡಲು ವಿಶೇಷ ನಿಗಾ ಘಟಕದ ಪ್ರಯತ್ನ ನಡೆಯಲಿದೆ. ಸದ್ಯಕ್ಕೆ ಸರ್ಕಾರದ ಮಟ್ಟದಲ್ಲಿ ಇರುವ ಈ ಚಿಂತನೆಯನ್ನು ಶೀಘ್ರದಲ್ಲೇ ಅನುಷ್ಠಾನಗೊಳಿಸಲು ತಯಾರಿ ನಡೆದಿದೆ. ಈ ಪ್ಲ್ಯಾನ್ ಸಕ್ಸಸ್ ಆಗಿದ್ದೇ ಆದಲ್ಲಿ ರಾಜ್ಯದ ಪ್ರತಿಯೊಬ್ಬರೂ ಬೆಂಗಳೂರಿಗೆ ಅಲೆದಾಡೋದಕ್ಕೆ ಬ್ರೇಕ್ ಬೀಳಲಿದೆ.
Published On - 11:52 am, Sun, 16 February 20