ಕರ್ನಾಟಕ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ದೆಹಲಿಗೆ ಭೇಟಿ ವೇಳೆ ನಾಯಕತ್ವ ಗೊಂದಲಕ್ಕೆ ಬ್ರೇಕ್ ಬೀಳಲಿದೆ ಎಂದು ನಂಬಲಾಗಿತ್ತು. ಆದ್ರೆ ಸಿಎಂ ಬದಲಾವಣೆ ವಿಚಾರ ಮತ್ತಷ್ಟು ಜಟಿಲಗೊಂಡಿದೆ. ವರಿಷ್ಠರನ್ನು ಭೇಟಿ ಮಾಡಿರುವ ಯಡಿಯೂರಪ್ಪ ರಾಜೀನಾಮೆ ನೀಡುವಂತೆ ನನಗೆ ಯಾರೂ ಸೂಚಿಸಿಲ್ಲ ಎಂದಿದ್ದಾರೆ.
ಯಾವಾಗ ಸಿಎಂ ಬಿ.ಎಸ್. ಯಡಿಯೂರಪ್ಪ (BS Yediyurappa) ವಿಶೇಷ ವಿಮಾನದ ಮೂಲಕ ದೆಹಲಿಗೆ ಪ್ರಯಾಣಿಸಿದರೋ ರಾಜ್ಯ ಬಿಜೆಪಿಯಲ್ಲಿ ಸಂಚಲನ ಸೃಷ್ಟಿಯಾಗಿತ್ತು. ದೆಹಲಿಯ ರಾಜಕೀಯ ವಲಯ ಕೂಡ ಬಿ.ಎಸ್. ಯಡಿಯೂರಪ್ಪರ ಭೇಟಿಯನ್ನು ವಿಶೇಷವಾಗಿ ಪರಿಗಣಿಸಿತ್ತು. ನಿನ್ನೆ ದೆಹಲಿಗೆ ಬರುತ್ತಿದಂತೆ ಸಂಜೆ ಪ್ರಧಾನಿ ಮೋದಿ ಭೇಟಿಯಾದ ಯಡಿಯೂರಪ್ಪ ಸುಮಾರು 15 ನಿಮಿಷಗಳ ಕಾಲ ಆಪ್ತವಾಗಿ ಚರ್ಚೆ ಮಾಡಿದ್ರು.
ಪ್ರಧಾನಿ ಭೇಟಿಯಾಗಿ ನಗುತ್ತಲೇ ಪೋಸ್ ಕೊಟ್ಟಿದ್ದ ಯಡಿಯೂರಪ್ಪನವರ ಬಗ್ಗೆ ಬೆಳಗ್ಗೆಯಾಗುತ್ತಲೇ ಶಾಕಿಂಗ್ ಸುದ್ದಿಗಳು ಹರಿದಾಡತೊಗಿದವು. ಯಡಿಯೂರಪ್ಪನವರು ಪ್ರಧಾನಿ ಮೋದಿಯವ್ರ ಬಳಿ ರಾಜೀನಾಮೆ ಪ್ರಸ್ತಾಪ ಮಾಡಿದ್ದಾರೆ. ರಾಜೀನಾಮೆ ಕೊಟ್ಟೇ ಬಿಡ್ತಾರೆ ಎಂದು ದೆಹಲಿಯಲ್ಲಿ ಚರ್ಚೆ ಆರಂಭವಾಗಿತು. ಬೆಳಗ್ಗೆ ಕರ್ನಾಟಕಭವನದಿಂದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಭೇಟಿಗೆ ತೆರಳುವ ಮುನ್ನ ರಾಜೀನಾಮೆ ನೀಡುವ ವದಂತಿ ಬಗ್ಗೆ ಸ್ಪಷ್ಟನೆ ನೀಡಿದ್ರು.
ರಾಜೀನಾಮೆ ನೀಡುವಂತೆ (Resignation) ಯಾವುದೇ ನಾಯಕರು ನನಗೆ ಸೂಚಿಸಿಲ್ಲ. ರಾಜೀನಾಮೆ ಪ್ರಶ್ನೆಯೇ ಉದ್ಭವಿಸುವುದಿಲ್ಲ. ರಾಜ್ಯದ ಅಭಿವೃದ್ಧಿಗೆ ದುಡಿಯುತ್ತೇನೆ ಎಂದು ಹೇಳಿ ರಾಜೀನಾಮೆ ವದಂತಿ ನಿರಾಕರಿಸಿದರು.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಭೇಟಿ ತೆರಳಿದ ಯಡಿಯೂರಪ್ಪ ಸುಮಾರು 30 ನಿಮಿಷಗಳ ಕಾಲ ನಡ್ಡಾ ಅವ್ರ ಜೊತೆ ಚರ್ಚೆ ನಡೆಸಿದ್ದಾರೆ. ಇನ್ನು ವಿಶೇಷ ಅಂದ್ರೆ ನಡ್ಡಾ ಭೇಟಿ ವೇಳೆ ವಿಜಯೇಂದ್ರ ಕೂಡ ಯಡಿಯೂರಪ್ಪ ಜೊತೆಗಿದ್ರು. ನಡ್ಡಾ ಭೇಟಿ ಬಳಿಕವೂ ರಾಜೀನಾಮೆ ನೀಡುವ ವದಂತಿ ಕುರಿತು ಬಿಎಸ್ ವೈ ಸ್ಪಷ್ಟವಾಗಿ ತಳ್ಳಿಹಾಕಿದ್ರು.
ನಡ್ಡಾ ಭೇಟಿ ಬಳಿಕ ರಕ್ಷಣ ಸಚಿವ ರಾಜನಾಥ್ ಸಿಂಗ್ ಅವ್ರನ್ನು ಯಡಿಯೂರಪ್ಪ ಭೇಟಿಯಾದ್ರು. ಭೇಟಿಯಾಗಿ ಖಾಸಗಿ ಹೋಟೆಲ್ ನಲ್ಲಿ ಉಪಹಾರ ಸೇವಿಸಿ ಬೆಂಗಳೂರು ಕಡೆ ಮುಖ ಮಾಡಿದ್ರು. ಕಾರು ಏರಿ ವಿಮಾನ ನಿಲ್ದಾಣದ ಕಡೆ ಹೊರಟಿದ್ರು. ಇನ್ನೇನು ವಿಮಾನ ನಿಲ್ದಾಣ ತಲುಪಬೇಕು ಅನ್ನುವಷ್ಟರಲ್ಲಿ ಗೃಹ ಸಚಿವ ಅಮಿತ್ ಶಾ ಅವ್ರ ಕರೆ ಬಂದಿದೆ.
ವಾಪಾಸ್ ಬಂದು ನನ್ನ ಭೇಟಿಯಾಗಿ ಹೋಗಿ ಎಂದು ಸೂಚನೆ ನೀಡಿದ್ದಾರೆ. ಸಿಎಂ ಕಾರು ವಾಪಾಸ್ ಅಮಿತ್ ಶಾ ನಿವಾಸತ್ತ ಯು ಟರ್ನ್ ತೆಗೆದುಕೊಂಡು ಅಮಿತ್ ಶಾ ಅವರನ್ನು ಭೇಟಿಯಾಗಿದ್ರು. ಸುಮಾರು 20 ನಿಮಿಗಳ ಕಾಲ ಸಿಎಂ ಅಮಿತ್ ಶಾ ಅವ್ರ ಜೊತೆ ಮಾತುಕತೆ ನಡೆಸಿದ್ದಾರೆ. ಅಮಿತ್ ಶಾ (Amit Shah) ಭೇಟಿ ಬಳಿಕವೂ ರಾಜೀನಾಮೆ ನೀಡುವ ವದಂತಿಯನ್ನು ನಿರಾಕರಿಸಿದ್ದಾರೆ.
ಯಡಿಯೂರಪ್ಪ ದೆಹಲಿ ಭೇಟಿ ಹಿಂದೆಂದಿಗಿಂತಾ ವಿಶೇಷವಾಗಿತ್ತು. ಆರು ತಿಂಗಳ ಬಳಿಕ ದೆಹಲಿಗೆ ಬಂದಿದ್ದ ಯಡಿಯೂರಪ್ಪನವರ ದೆಹಲಿ ಭೇಟಿ ಕುತೂಹಲ ಹೆಚ್ಚಿಸಿತ್ತು. ಸಿಎಂ ಪರ ಹಾಗೂ ವಿರೋಧಿ ಬಣ ಯಡಿಯೂರಪ್ಪ ನಡೆಯ ಕ್ಷಣಕ್ಷಣದ ಮಾಹಿತಿ ಪಡೆದುಕೊಳ್ಳುತ್ತಿದ್ದರು. ಸಿಎಂ ಆಪ್ತ ಬಣ ಯಡಿಯೂರಪ್ಪ ಯಾವುದೇ ಕಾರಣಕ್ಕೂ ರಾಜೀನಾಮೆ ನೀಡುವುದಿಲ್ಲ ಎನ್ನುವ ವಿಶ್ವಾಸದಲ್ಲಿದ್ದರೆ, ವಿರೋಧಿ ಬಣ ಯಡಿಯೂರಪ್ಪ ರಾಜೀನಾಮೆ ಸನ್ನಿಹಿತವಾಗಿದೆ ಎಂದು ವ್ಯಾಖ್ಯಾನಿಸುತ್ತಿದ್ದಾರೆ. ಯಡಿಯೂರಪ್ಪನವರ ದೆಹಲಿ ಭೇಟಿ ಬಳಿಕವೂ ಸ್ಪಷ್ಟತೆ ಸಿಗದೇ ಗೊಂದಲ ಮುಂದುವರೆದಿದೆ.
– ಹರೀಶ್, ಟಿವಿ ನೈನ್, ನವದೆಹಲಿ
ರಾಜೀನಾಮೆ ನೀಡುವ ಪ್ರಶ್ನೆ ಇಲ್ಲ; ಮತ್ತೆ ಆಗಸ್ಟ್ ಮೊದಲ ವಾರದಲ್ಲಿ ದೆಹಲಿಗೆ ಬರುತ್ತೇನೆ – ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ
(BS Yediyurappa resignation episode intensifies after amit shah calls him to his house in delhi)