ಪೊಲೀಸ್ ಠಾಣೆ ಮೇಟ್ಟಿಲೇರಿದ ತಾಯಿ, ಮಗಳ ಜಗಳ; ನಾ ಸತ್ರೂ ತಾಯಿಯ ಜೊತೆ ಇರಲ್ಲ ಅಂತಿರುವ ಮಗಳು
ನಾಡಿದ್ದು ಎಸ್‌ಎಸ್ಎಲ್‌ಸಿ ಪರೀಕ್ಷೆ ಬರೆಯಬೇಕಿದ್ದ ಬಾಲಕಿಯೇ ತಾಯಿಯ ವಿರುದ್ಧ ಹೀಗೆ ರಂಪಾಟ ಮಾಡುತ್ತಿದ್ದಾಳೆ. ಕಳೆದ 3 ತಿಂಗಳಿಂದ ಮನೆಬಿಟ್ಟು ಚಿಕ್ಕಮ್ಮನ ಮನೆಯಲ್ಲಿದ್ದ ಬಾಲಕಿ ಈಗಲೂ ತಾಯಿಯ ವಿರುದ್ಧ ಮಾತನಾಡಿದ್ದಾಳೆ.
ಯಾದಗಿರಿ: ಇಲ್ಲಿ ಮನೆಯಲ್ಲಿ ಸಾಮಾನ್ಯವಾಗಿ ನಡೆಯಬಹುದಾದ ತಾಯಿ ಮಗಳ ಜಗಳವೊಂದು ಪೊಲೀಸ್ ಠಾಣೆ ಮೆಟ್ಟಿಲೇರಿದೆ. ನಗರದ ಶಹಾಪುರ ಪೊಲೀಸ್ ಠಾಣೆಯವರೆಗೂ ಸಾಗಿರುವ ಜಗಳ, ತಾಯಿ- ಮಗಳ ಹೈಡ್ರಾಮಾ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಮಗಳು ಈ ಮೊದಲೇ, ಹೆತ್ತ ತಾಯಿ ಕೊಲೆ ಮಾಡ್ತಾಳೆ ಎಂದು ಆರೋಪಿಸಿ ಮನೆಬಿಟ್ಟು ಬಂದಿದ್ದಳು. ಇದೀಗಲೂ ಮಗಳು ತಾನು ಸತ್ರೂ ತಾಯಿಯ ಜೊತೆ ಇರಲ್ಲ ಎಂದು ಹೇಳುತ್ತಿದ್ದಾಳೆ.
ಹಾಗಂತ ಮಗಳು ಬಹಳ ದೊಡ್ಡವಳೇನೂ ಅಲ್ಲ. ನಾಡಿದ್ದು ಎಸ್‌ಎಸ್ಎಲ್‌ಸಿ ಪರೀಕ್ಷೆ ಬರೆಯಬೇಕಿದ್ದ ಬಾಲಕಿಯೇ ತಾಯಿಯ ವಿರುದ್ಧ ಹೀಗೆ ರಂಪಾಟ ಮಾಡುತ್ತಿದ್ದಾಳೆ. ಕಳೆದ 3 ತಿಂಗಳಿಂದ ಮನೆಬಿಟ್ಟು ಚಿಕ್ಕಮ್ಮನ ಮನೆಯಲ್ಲಿದ್ದ ಬಾಲಕಿ ಈಗಲೂ ತಾಯಿಯ ವಿರುದ್ಧ ಮಾತನಾಡಿದ್ದಾಳೆ. ನಾ ಸತ್ತರೂ ತಾಯಿ ಜೊತೆ ಇರಲ್ಲ ಎಂದು ಹಠ ಹಿಡಿದಿದ್ದಾಳೆ.
ತಾಯಿ, ಮಗಳ ಮಧ್ಯೆ ಜಗಳದಿಂದ ಬೇಸತ್ತಿದ್ದ ಪೊಲೀಸರು, ಬಾಲಕಿಯನ್ನು ಬಾಲ ಮಂದಿರಕ್ಕೆ ಸೇರಿಸಿದ್ದರು. ಬಳಿಕ ಮಗಳನ್ನ ಮನೆಗೆ ಕರೆದುಕೊಂಡು ಹೋಗಲು ಅಧಿಕಾರಿಗಳ ಮುಂದೆ ತಾಯಿ ಕಣ್ಣೀರು ಹಾಕಿದ್ದಳು. ಪೊಲೀಸ್ ಠಾಣೆಯಲ್ಲೇ ತಾಯಿ ಸರೋಜಾ ಕಣ್ಣೀರು ಹಾಕಿ ಅಳಲು ತೋಡಿಕೊಂಡಿದ್ದಳು. ಶಹಾಪುರ ತಾಲೂಕಿನ ಬಸವಂತಪುರ ಗ್ರಾಮದ ನಿವಾಸಿ ತಾಯಿ ಮಗಳ ನಡುವೆ ಹೀಗೆ ಹೈಡ್ರಾಮಾ ಏರ್ಪಟ್ಟಿದೆ.
ನನ್ನ ಮನೆಗೆ ಕರೆದುಕೊಂಡು ಹೋಗಿ ಆಸ್ತಿ ಮಾರಾಟ ಮಾಡ್ತಾಳೆ. ಜಮೀನು ಮಾರಿ ನನಗೆ ಕೊಲೆ ಮಾಡ್ತಾಳೆ ಎಂದು ಪುತ್ರಿ ಆರೋಪ ಮಾಡಿದ್ದಾಳೆ. 12 ಎಕರೆ ಜಮೀನು ಹೊಂದಿರುವ ಬಾಲಕಿ ತಾಯಿ ಸರೋಜಾ ಬಳಿಕ ಮಗಳನ್ನು ಕೊಲೆ ಮಾಡ್ತಾಳೆ ಎಂದು ಆರೋಪಿಸಿದ್ದಾಳೆ. ಆದರೆ, ಪುತ್ರಿ, ಗಂಡು ಮಕ್ಕಳಿಬ್ಬರನ್ನು ಪೋಷಿಸ್ತಿರುವ ವಿಧವೆ ಸರೋಜಾ ಹೀಗೆ ಮಗಳನ್ನು ಕೊಲೆ ಮಾಡೋದು ಯಾಕೆ? ಮಗಳು ಆ ರೀತಿ ಹೇಳಿಕೆ ಕೊಟ್ಟಿರುವುದು ಯಾಕೆ ಎಂದು ಇನ್ನಷ್ಟೇ ತಿಳಿಯಬೇಕಿದೆ.
ಇದನ್ನೂ ಓದಿ: ಯಾದಗಿರಿಯಲ್ಲಿ ಕಲುಷಿತ ನೀರು ಸೇವಿಸಿ 40ಕ್ಕೂ ಹೆಚ್ಚು ಜನ ಅಸ್ವಸ್ಥ
ಯಾದಗಿರಿಯಲ್ಲಿ ಡಿಸೇಲ್ ಕಳವು; 30 ಮೀಟರ್ ದೂರದಿಂದಲೇ 5 ಸಾವಿರ ಲೀಟರ್ ಡಿಸೇಲ್ ಕಳ್ಳತನ