ಯಾದಗಿರಿಯಲ್ಲಿ ಕಲುಷಿತ ನೀರು ಸೇವಿಸಿ 40ಕ್ಕೂ ಹೆಚ್ಚು ಜನ ಅಸ್ವಸ್ಥ
ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸಂಪೂರ್ಣ ಹಾಳಾಗಿ ಹೋಗಿದೆ. ಈ ಕಾರಣಕ್ಕೆ ಗ್ರಾಮಸ್ಥರಿಗೆ ಬಾವಿ ನೀರೆ ಗತಿಯಾಗಿದೆ. ಬಾವಿಯ ನೀರು ನಲ್ಲಿ ಮೂಲಕ ಗ್ರಾಮಸ್ಥರ ಮನೆಗಳಿಗೆ ತಲುಪುತ್ತವೆ. ಆದರೆ ಚರಂಡಿ ನೀರು ಬಾವಿಗೆ ಸೇರುವುದರಿಂದ ಅದೆ ನೀರು ನಲ್ಲಿ ಮೂಲಕ ಗ್ರಾಮಸ್ಥರಿಗೆ ಸರಬರಾಜು ಆಗುತ್ತಿದೆ.
ಯಾದಗಿರಿ: ಜಿಲ್ಲೆಯ ಸುರಪುರ ತಾಲೂಕಿನ ಯಾಳಗಿ ಗ್ರಾಮಸ್ಥರು ಕಲುಷಿತ ನೀರು ಸೇವಿಸಿ ಅಸ್ವಸ್ಥರಾಗಿದ್ದಾರೆ. ನೀರು ಸೇವಿಸಿದ 40ಕ್ಕೂ ಹೆಚ್ಚು ಜನ ಅಸ್ವಸ್ಥರಾಗಿದ್ದು, ವಾಂತಿ ಭೇದಿ ಶುರುವಾಗಿದೆ. ಸದ್ಯ ಗ್ರಾಮಸ್ಥರು ಕೆಂಭಾವಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚರಂಡಿ ನೀರು ಕುಡಿಯುವ ನೀರಿನ ಬಾವಿಗೆ ಸೇರುತ್ತಿದೆ. ಅದೇ ನೀರು ಗ್ರಾಮಸ್ಥರಿಗೆ ನಲ್ಲಿ ಮೂಲಕ ಸರಬರಾಜು ಆಗುತ್ತಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ರೀತಿ ಸಮಸ್ಯೆಯಾಗಿದೆ ಅಂತ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚರಂಡಿ ನೀರು ಗ್ರಾಮಕ್ಕೆ ಸರಬರಾಜು ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸಂಪೂರ್ಣ ಹಾಳಾಗಿ ಹೋಗಿದೆ. ಈ ಕಾರಣಕ್ಕೆ ಗ್ರಾಮಸ್ಥರಿಗೆ ಬಾವಿ ನೀರೆ ಗತಿಯಾಗಿದೆ. ಬಾವಿಯ ನೀರು ನಲ್ಲಿ ಮೂಲಕ ಗ್ರಾಮಸ್ಥರ ಮನೆಗಳಿಗೆ ತಲುಪುತ್ತವೆ. ಆದರೆ ಚರಂಡಿ ನೀರು ಬಾವಿಗೆ ಸೇರುವುದರಿಂದ ಅದೆ ನೀರು ನಲ್ಲಿ ಮೂಲಕ ಗ್ರಾಮಸ್ಥರಿಗೆ ಸರಬರಾಜು ಆಗುತ್ತಿದೆ. ಇದರಿಂದ ಜನ ಕೊಳಚೆ ನೀರು ಕುಡಿದು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಗ್ರಾಮಸ್ಥರ ಆಕ್ರೋಶ ಕಳೆದ ನಾಲ್ಕೈದು ದಿನಗಳಿಂದ ಗ್ರಾಮಸ್ಥರು ಅನಾರೋಗ್ಯಕ್ಕೆ ತುತ್ತಾಗಿ ಒದ್ದಾಡಿದರೂ ನೀರಿನ ವ್ಯವಸ್ಥೆ ಮಾಡುವುದ್ದಕ್ಕೆ ಅಧಿಕಾರಿಗಳು ಮುಂದಾಗಿಲ್ಲ ಅಂತ ಗ್ರಾಮದ ಚಂದಪ್ಪ ಬೆಕ್ಕಿನಾಳ್ ಎಂಬುವವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗ್ರಾಮಕ್ಕೆ ಡಿಎಚ್ಒ ಭೇಟಿ ಪರಿಶೀಲನೆ ಯಾದಗಿರಿ ಡಿಎಚ್ಒ ಡಾ.ಇಂದುಮತಿ ಕಾಮಶೆಟ್ಟಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಸ್ವಸ್ಥಗೊಂಡು ಆಸ್ಪತ್ರೆಗೆ ಸೇರಿದ್ದವರ ಆರೋಗ್ಯ ವಿಚಾರಿಸಿ ಇದಕ್ಕೆ ಕಾರಣ ಕಲುಷಿತ ನೀರು ಅಂತ ಹೇಳಿದ್ದಾರೆ.
ಇದನ್ನೂ ಓದಿ
ಕುಟಂಬದ ಐದು ತಲೆಮಾರುಗಳನ್ನು ಕಂಡ ವೃದ್ಧೆ; ಯುವಕರನ್ನು ನಾಚಿಸುವಂತಿದೆ 92 ವರ್ಷದ ಅಜ್ಜಿಯ ಉತ್ಸಾಹ
(More than 40 people become ill after consuming contaminated water in yadgir)