AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೆಟ್ರೋದಲ್ಲಿ ಕೊವಿಡ್ ನಿಯಮ ಉಲ್ಲಂಘಿಸಿದವರ ವಿರುದ್ದ ಬಿಎಂಆರ್ಸಿಎಲ್ ದಂಡಾಸ್ತ್ರ ಪ್ರಯೋಗ: ನಿತ್ಯ ಎಷ್ಟೆಷ್ಟು ದಂಡ ಸಂಗ್ರಹ?

ಮೆಟ್ರೋ ರೈಲಿನಲ್ಲಿ ಫೇಸ್ ಮಾಸ್ಕ್, ದೈಹಿಕ ಅಂತರ ಕಡ್ಡಾಯವಾಗಿ ಪಾಲಿಸಬೇಕು. ಮೆಟ್ರೋ ನಿಲ್ದಾಣ ಹಾಗೂ ಮೆಟ್ರೋ ರೈಲಿನಲ್ಲಿ ಸರಿಯಾಗಿ ಮಾಸ್ಕ್ ಧರಿಸದಿದ್ದರೆ, ನಿಯಮ ಉಲ್ಲಂಘಿಸುವವರಿಗೆ 250 ರೂಪಾಯಿ ದಂಡ ವಿಧಿಸಲಾಗುತ್ತಿದೆ.

ಮೆಟ್ರೋದಲ್ಲಿ ಕೊವಿಡ್ ನಿಯಮ ಉಲ್ಲಂಘಿಸಿದವರ ವಿರುದ್ದ ಬಿಎಂಆರ್ಸಿಎಲ್ ದಂಡಾಸ್ತ್ರ ಪ್ರಯೋಗ: ನಿತ್ಯ ಎಷ್ಟೆಷ್ಟು ದಂಡ ಸಂಗ್ರಹ?
ಬೆಂಗಳೂರು ಮೆಟ್ರೋ (ಸಂಗ್ರಹ ಚಿತ್ರ)
Follow us
TV9 Web
| Updated By: ಆಯೇಷಾ ಬಾನು

Updated on: Jul 12, 2021 | 10:43 AM

ಬೆಂಗಳೂರು: ಕೊರೊನಾ ಅನ್ಲಾಕ್ ಆಗಿದ್ದಿನಿಂದ ಸದ್ಯ ಸಿಲಿಕಾನ್ ಸಿಟಿಯಲ್ಲಿ ಮೆಟ್ರೋ ಸಂಚಾರ ಶುರುವಾಗಿದೆ. ಎಂದಿನಂತೆ ಜನ ಪ್ರಯಾಣ ಶುರು ಮಾಡಿದ್ದಾರೆ. ಆದ್ರೆ ಮೆಟ್ರೋ ರೈಲಿನಲ್ಲಿ ಕೊವಿಡ್ ನಿಯಮ ಉಲ್ಲಂಘನೆಯಾಗುತ್ತಿರುವ ಬಗ್ಗೆ ಅನೇಕ ದೂರುಗಳು ಬಂದಿದ್ದವು. ಹೀಗಾಗಿ ದಂಡ ವಿಧಿಸಲು ಬಿಎಂಆರ್ಸಿಎಲ್ ಮುಂದಾಗಿತ್ತು. ಮೆಟ್ರೋದಲ್ಲಿ ಕೊರೊನಾ ನಿಯಮ ಉಲ್ಲಂಘಿಸಿದ್ರೆ ಭಾರಿ ದಂಡ ವಿಧಿಸಲಾಗುತ್ತಿತ್ತು. ಸದ್ಯ ಕಳೆದ ಒಂದು ವಾರದಿಂದ ಸುಮಾರು ₹1,77,250 ದಂಡ ವಸೂಲಿ ಆಗಿದೆ.

ಮೆಟ್ರೋ ರೈಲಿನಲ್ಲಿ ಫೇಸ್ ಮಾಸ್ಕ್, ದೈಹಿಕ ಅಂತರ ಕಡ್ಡಾಯವಾಗಿ ಪಾಲಿಸಬೇಕು. ಮೆಟ್ರೋ ನಿಲ್ದಾಣ ಹಾಗೂ ಮೆಟ್ರೋ ರೈಲಿನಲ್ಲಿ ಸರಿಯಾಗಿ ಮಾಸ್ಕ್ ಧರಿಸದಿದ್ದರೆ, ನಿಯಮ ಉಲ್ಲಂಘಿಸುವವರಿಗೆ 250 ರೂಪಾಯಿ ದಂಡ ವಿಧಿಸಲಾಗುತ್ತಿದೆ. ಕಳೆದ 1 ವಾರದಲ್ಲಿ ಪ್ರಯಾಣಿಕರಿಂದ ₹1,77,250 ದಂಡ ವಸೂಲಿ ಮಾಡಲಾಗಿದೆ. ಪ್ರಯಾಣಿಕರ ಮೇಲೆ BMRCL ದಂಡಾಸ್ತ್ರ ಪ್ರಯೋಗ ಮಾಡುತ್ತಿದೆ.

ನಿಯಮ ಉಲ್ಲಂಘಿಸುವರ ಮೇಲೆ ನಿಗಾವಹಿಸಲು ವಿಶೇಷ ತಂಡ ರಚನೆ ಮಾಡಲಾಗಿದೆ. ಕಳೆದ ಒಂದು ವಾರದಿಂದ ಪ್ರಯಾಣಿಕರ ಮೇಲೆ ನಮ್ಮ ಮೆಟ್ರೋ ದಂಡಾಸ್ತ್ರ ಪ್ರಯೋಗ ಮಾಡಿದೆ. ಮೆಟ್ರೋದಲ್ಲಿ ಶೇ 100 ರಷ್ಟು ಪ್ರಯಾಣಿಕರಿಗೆ ಅನುಮತಿ ನೀಡಿದ ಬಳಿಕ ದಂಡಾಸ್ತ್ರ ಪ್ರಯೋಗ ಶುರುವಾಗಿದೆ. ಒಂದು ವಾರದಲ್ಲಿ ಕೊವಿಡ್ ರೂಲ್ಸ್ ಉಲ್ಲಂಘನೆ ಮಾಡಿದ ಪ್ರಯಾಣಿಕರಿಂದ 1 ಲಕ್ಷ 77 ಸಾವಿರದ 250 ರೂ ವಸೂಲಿಯಾಗಿದೆ.

ನಮ್ಮ ಮೆಟ್ರೋದಲ್ಲಿ ನಿತ್ಯ ಎಷ್ಟೆಷ್ಟು ದಂಡ ಸಂಗ್ರಹ 05/07/2021 – 20,950/- ರೂ 06/07/2021 – 25,950/- ರೂ 07/07/2021 – 28,350/- ರೂ 08/07/2021 – 33,550/- ರೂ 09/07/2021 – 36,850/- ರೂ 10/07/2021 – 31,600/- ರೂ ಒಟ್ಟು ವಸೂಲಾದ ದಂಡದ ಮೊತ್ತ – 1,77,250/- ರೂ

(BMRCL start collecting fine for violating corona rules in namma metro)

ಇದನ್ನೂ ಓದಿ: Namma Metro: ಇಂದಿನಿಂದ ಮೆಟ್ರೋದಲ್ಲಿ ಶೇ.100ರಷ್ಟು ಪ್ರಯಾಣಿಕರಿಗೆ ಅವಕಾಶ; ಆದರೆ, ರೈಲು ಹತ್ತುವ ಮುನ್ನ ಈ ಅಂಶಗಳು ನೆನಪಿನಲ್ಲಿರಲಿ