AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Namma Metro: ಇಂದಿನಿಂದ ಮೆಟ್ರೋದಲ್ಲಿ ಶೇ.100ರಷ್ಟು ಪ್ರಯಾಣಿಕರಿಗೆ ಅವಕಾಶ; ಆದರೆ, ರೈಲು ಹತ್ತುವ ಮುನ್ನ ಈ ಅಂಶಗಳು ನೆನಪಿನಲ್ಲಿರಲಿ

Bengaluru Metro Timings: ವಾರದ ಏಳು ದಿನಗಳಲ್ಲೂ ಬೆಳಗ್ಗೆ 7ರಿಂದ ರಾತ್ರಿ 8ರವರೆಗೆ ಮೆಟ್ರೋ ರೈಲುಗಳ ಸಂಚಾರ ಇರಲಿದೆ. ಹಸಿರು, ನೇರಳೆ ಎರಡೂ ಮಾರ್ಗದಲ್ಲಿ ರಾತ್ರಿ 8ರವರೆಗೆ ಸೇವೆ ಒದಗಿಸುವುದಾಗಿ ಬಿಎಂಆರ್​ಸಿಎಲ್​ (BMRCL) ಮಾಹಿತಿ ನೀಡಿದೆ.

Namma Metro: ಇಂದಿನಿಂದ ಮೆಟ್ರೋದಲ್ಲಿ ಶೇ.100ರಷ್ಟು ಪ್ರಯಾಣಿಕರಿಗೆ ಅವಕಾಶ; ಆದರೆ, ರೈಲು ಹತ್ತುವ ಮುನ್ನ ಈ ಅಂಶಗಳು ನೆನಪಿನಲ್ಲಿರಲಿ
ನಮ್ಮ ಮೆಟ್ರೋ (ಸಾಂಕೇತಿಕ ಚಿತ್ರ)
TV9 Web
| Edited By: |

Updated on: Jul 05, 2021 | 7:15 AM

Share

ಬೆಂಗಳೂರು: ಕೊರೊನಾ ಲಾಕ್​ಡೌನ್​ ಸಡಿಲಗೊಂಡು ಅನ್​ಲಾಕ್​ 3.0 ಜಾರಿಯಾಗುತ್ತಿರುವ ಕಾರಣ, ನಮ್ಮ ಮೆಟ್ರೋ ಸಂಚಾರಕ್ಕೆ ವಾರಪೂರ್ತಿ ಅವಕಾಶ ಕಲ್ಪಿಸಲಾಗಿದೆ. ಎರಡನೇ ಅಲೆ ಕಾರಣದಿಂದ ವ್ಯತ್ಯಯಗೊಂಡು ನಿಗದಿತ ವೇಳೆಯಲ್ಲಿ ಆರಂಭಗೊಂಡಿದ್ದ ನಮ್ಮ ಮೆಟ್ರೋ ಸಂಚಾರದ ಅವಧಿಯನ್ನು ಕಳೆದವಾರವಷ್ಟೇ ಕೊಂಚ ವಿಸ್ತರಿಸಲಾಗಿತ್ತು. ಅದನ್ನೀಗ ಮತ್ತೊಮ್ಮೆ ಸಡಿಲಿಸಲಾಗಿದ್ದು ವಾರದ ಏಳು ದಿನಗಳಲ್ಲೂ ಬೆಳಗ್ಗೆ 7ರಿಂದ ರಾತ್ರಿ 8ರವರೆಗೆ ಮೆಟ್ರೋ ರೈಲುಗಳ ಸಂಚಾರ ಇರಲಿದೆ. ಹಸಿರು, ನೇರಳೆ ಎರಡೂ ಮಾರ್ಗದಲ್ಲಿ ರಾತ್ರಿ 8ರವರೆಗೆ ಸೇವೆ ಒದಗಿಸುವುದಾಗಿ ಬಿಎಂಆರ್​ಸಿಎಲ್​ (BMRCL) ಮಾಹಿತಿ ನೀಡಿದೆ.

ಜುಲೈ 1 ರಿಂದ ನಮ್ಮ ಮೆಟ್ರೋ ಸೋಮವಾರದಿಂದ ಶುಕ್ರವಾರದವರೆಗೆ ಸಂಚಾರ ಮಾಡಲಿದೆ ಎಂದು ಬಿಎಂಆರ್​ಸಿಎಲ್​ ಕಳೆದ ವಾರ ತಿಳಿಸಿತ್ತು. ಆದರೆ, ಈಗ ಅನ್​ಲಾಕ್​ ಹಿನ್ನೆಲೆ ವಾರಾಂತ್ಯದಲ್ಲೂ ಅವಕಾಶ ಕಲ್ಪಿಸಲಾಗಿದ್ದು, ಶನಿವಾರ, ಭಾನುವಾರ ಸಹ ಇತರೆ ದಿನಗಳಂತೆಯೇ ಬೆಳಗ್ಗೆ 7ರಿಂದ ರಾತ್ರಿ 8 ಗಂಟೆವರೆಗೆ ಪ್ರಯಾಣಿಕರು ಮೆಟ್ರೋ ಅನುಕೂಲ ಪಡೆಯಬಹುದಾಗಿದೆ. ಜತೆಗೆ, ಜನದಟ್ಟಣೆ ಅವಧಿಯಲ್ಲಿ 5 ನಿಮಿಷಕ್ಕೊಂದು ರೈಲು ಸಂಚಾರ ಮಾಡಲಿದೆ ಎಂದು ಬಿಎಂಆರ್​ಸಿಎಲ್ ಹೇಳಿರುವುದರಿಂದ ಮೆಟ್ರೋ ಪಯಣವನ್ನೇ ನೆಚ್ಚಿಕೊಂಡವರು ನಿರಾಳರಾಗಿದ್ದಾರೆ.

ಈ ಹಿಂದೆ ಮೊದಲ ಹಂತದ ಅನ್​ಲಾಕ್​ ಆಗುತ್ತಿದ್ದಂತೆ ಬೆಳಗ್ಗೆ 7 ರಿಂದ 11 ಮತ್ತು ಮಧ್ಯಾಹ್ನ 3 ರಿಂದ 6 ಗಂಟೆಯವರೆಗೆ ಮಾತ್ರ ನಮ್ಮ ಮೆಟ್ರೋ ಸಂಚಾರಕ್ಕೆ ಅವಕಾಶ ನೀಡಲಾಗಿತ್ತು. ನಂತರ ಆ ಅವಧಿಯನ್ನು ಸೋಮವಾರದಿಂದ ಶುಕ್ರವಾರದ ತನಕ ಬೆಳಗ್ಗೆ 7ರಿಂದ ಸಂಜೆ 6 ಗಂಟೆವರೆಗೆ ವಿಸ್ತರಿಸಲಾಗಿತ್ತು. ಇದೀಗ ವಾರದ ಎಲ್ಲಾ ದಿನಗಳಲ್ಲೂ ಬೆಳಗ್ಗೆ 7ರಿಂದ ರಾತ್ರಿ 8 ಗಂಟೆವರೆಗೆ ಅವಕಾಶ ನೀಡಲಾಗಿದೆ. ಜನದಟ್ಟಣೆ ಅವಧಿಯಲ್ಲಿ 5 ನಿಮಿಷಕ್ಕೊಂದರಂತೆ ಸಂಚರಿಸಲಿರುವ ರೈಲು, ಉಳಿದ ಸಂದರ್ಭದಲ್ಲಿ 15 ನಿಮಿಷ ಅಂತರದಲ್ಲಿ ಓಡಾಡಲಿದೆ. ಶೇ.100ರಷ್ಟು ಪ್ರಯಾಣಿಕರಿಗೆ ಅವಕಾಶ ನೀಡಲಾಗಿದ್ದರೂ ಮಾಸ್ಕ್​ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು, ಕೊರೊನಾ ನಿಯಮಾವಳಿಗಳ ಪಾಲನೆಯಾಗುವಂತೆ ನೋಡಿಕೊಳ್ಳುವುದು ಕಡ್ಡಾಯ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜುಲೈ 1ರಿಂದಲೇ ನಮ್ಮ ಮೆಟ್ರೋದ ಎಲ್ಲ ಸ್ಟೇಷನ್​ಗಳಲ್ಲಿ ಟೋಕನ್ ನೀಡಲಾಗುತ್ತದೆ ಎಂದು ಬಿಎಂಆರ್​ಸಿಎಲ್​ (BMRCL) ಪ್ರಕಟಣೆಯಲ್ಲಿ ತಿಳಿಸಿತ್ತಾದ್ದರಿಂದ ಕಾರ್ಡ್​ ಇಲ್ಲದವರೂ ಟೋಕನ್​ ಪಡೆದು ಸಂಚರಿಸಬಹುದಾಗಿದೆ. ಈ ಹಿಂದೆ ಸುರಕ್ಷತೆ ದೃಷ್ಟಿಯಿಂದ ಮೆಟ್ರೋ ಕಾರ್ಡ್​ ಇದ್ದವರಿಗೆ ಮಾತ್ರ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಕಾರ್ಡ್​ ಹೊಂದಿದವರು ಆನ್​ಲೈನ್​ ಮೂಲಕವೇ ರಿಚಾರ್ಜ್​ ಮಾಡಿಸಿಕೊಂಡು ಮೆಟ್ರೋದಲ್ಲಿ ಪಯಣಿಸಬಹುದು ಎನ್ನಲಾಗಿತ್ತು. ಟೋಕನ್​ ವ್ಯವಸ್ಥೆಯನ್ನು ಸ್ಥಗಿತಗೊಳಿಸಲಾಗಿದ್ದ ಕಾರಣ ಕಾರ್ಡ್​ ಬಳಸದ ಅನೇಕ ಪ್ರಯಾಣಿಕರಿಗೆ ಅನಾನುಕೂಲವಾಗಿತ್ತು. ಆದರೆ, ಜುಲೈ 1ರಿಂದ ಟೋಕನ್​ ಖರೀದಿಸಿ ಪ್ರಯಾಣ ಮಾಡಲು ಬಿಎಂಆರ್​ಸಿಎಲ್​ ಅವಕಾಶ ನೀಡಿದೆ.

ನೆನಪಿನಲ್ಲಿಡಬೇಕಾದ ಅಂಶಗಳು: ಬೆಳಗ್ಗೆ 7 ರಿಂದ ರಾತ್ರಿ 8ರವರೆಗೆ ಮೆಟ್ರೋ ಸಂಚರಿಸಲಿದೆ ವಾರಪೂರ್ತಿ ನಮ್ಮ ಮೆಟ್ರೋ ಸಂಚಾರ ಕಾರ್ಡ್​ ಇಲ್ಲದವರು ಟೋಕನ್​ ಪಡೆದು ಪಯಣಿಸಬಹುದು ಮಾಸ್ಕ್​ ಧರಿಸುವುದು ಕಡ್ಡಾಯ ಶೇ.100ರಷ್ಟು ಪ್ರಯಾಣಿಕರಿಗೆ ಅವಕಾಶ ನೀಡಲಾಗಿದ್ದರೂ ಕೊರೊನಾ ನಿಯಮಾವಳಿ ಪಾಲಿಸುವುದು ಕಡ್ಡಾಯ ಜನ ದಟ್ಟಣೆ ಅವಧಿಯಲ್ಲಿ 5 ನಿಮಿಷಕ್ಕೊಂದು ರೈಲು, ಉಳಿದ ಸಮಯದಲ್ಲಿ 15 ನಿಮಿಷಕ್ಕೊಂದು ರೈಲು

ಇದನ್ನೂ ಓದಿ: Namma Metro: ಇಂದಿನಿಂದ ಟೋಕನ್​ ಪಡೆದು ಮೆಟ್ರೋದಲ್ಲಿ ಪ್ರಯಾಣಿಸಲು ಅವಕಾಶ; ವಾರದ ದಿನಗಳಲ್ಲಿ ಬೆಳಗ್ಗೆ 7 ರಿಂದ ಸಂಜೆ 6ರ ತನಕ ಸಂಚಾರ

Follow Us
ರವಿ ಬೆಳೆಗೆರೆ ಕಥೆಗೂ ಇದಕ್ಕೂ ಸಂಬಂಧವಿಲ್ಲ ಎಂದ ಓಂ ಪ್ರಕಾಶ್ ರಾವ್
ರವಿ ಬೆಳೆಗೆರೆ ಕಥೆಗೂ ಇದಕ್ಕೂ ಸಂಬಂಧವಿಲ್ಲ ಎಂದ ಓಂ ಪ್ರಕಾಶ್ ರಾವ್
ನಮ್ಮ ಉದ್ದೇಶ ಈಡೇರುವವರೆಗೆ ಇರಾನ್ ವಿರುದ್ಧದ ಕಾರ್ಯಾಚರಣೆ ನಿಲ್ಲುವುದಿಲ್ಲ
ನಮ್ಮ ಉದ್ದೇಶ ಈಡೇರುವವರೆಗೆ ಇರಾನ್ ವಿರುದ್ಧದ ಕಾರ್ಯಾಚರಣೆ ನಿಲ್ಲುವುದಿಲ್ಲ
ಇಂದು ಈ ರಾಶಿಯವರು ಅನುಮಾನಗಳಿಗೆ ಆಸ್ಪದ ನೀಡಬೇಡಿ
ಇಂದು ಈ ರಾಶಿಯವರು ಅನುಮಾನಗಳಿಗೆ ಆಸ್ಪದ ನೀಡಬೇಡಿ
ಇಂದು ಕೇತುಗ್ರಸ್ತ ಚಂದ್ರಗ್ರಹಣ ಏನೇನು ಮಾಡಬೇಕು ಗೊತ್ತಾ?
ಇಂದು ಕೇತುಗ್ರಸ್ತ ಚಂದ್ರಗ್ರಹಣ ಏನೇನು ಮಾಡಬೇಕು ಗೊತ್ತಾ?
‘ಜೂನ್, ಜುಲೈ ಒಳಗೆ ದರ್ಶನ್ ರಿಲೀಸ್’: ಭವಿಷ್ಯ ನುಡಿದ ಓಂ ಪ್ರಕಾಶ್ ರಾವ್
‘ಜೂನ್, ಜುಲೈ ಒಳಗೆ ದರ್ಶನ್ ರಿಲೀಸ್’: ಭವಿಷ್ಯ ನುಡಿದ ಓಂ ಪ್ರಕಾಶ್ ರಾವ್
ಅವಳಿ ಮಕ್ಕಳನ್ನ ಕೊಂದು ತಾಯಿ ಆತ್ಮಹತ್ಯೆಗೆ ಯತ್ನಿಸಿದ್ಯಾಕೆ?
ಅವಳಿ ಮಕ್ಕಳನ್ನ ಕೊಂದು ತಾಯಿ ಆತ್ಮಹತ್ಯೆಗೆ ಯತ್ನಿಸಿದ್ಯಾಕೆ?
‘ಭೀಮ ತೀರದಲ್ಲಿ’ ಸಿನಿಮಾ ಮರು ಬಿಡುಗಡೆ ಯಾಕೆ? ಕಾರಣ ತಿಳಿಸಿದ ಚಿತ್ರತಂಡ
‘ಭೀಮ ತೀರದಲ್ಲಿ’ ಸಿನಿಮಾ ಮರು ಬಿಡುಗಡೆ ಯಾಕೆ? ಕಾರಣ ತಿಳಿಸಿದ ಚಿತ್ರತಂಡ
ಸಚಿವರ ಬರ್ತ್​​ಡೇ: ಸರ್ಕಾರಿ ಶಾಲೆ ಮಕ್ಕಳಿಗೆ, ಪೋಷಕರಿಗೆ ವಿಮಾನಯಾನ ಭಾಗ್ಯ
ಸಚಿವರ ಬರ್ತ್​​ಡೇ: ಸರ್ಕಾರಿ ಶಾಲೆ ಮಕ್ಕಳಿಗೆ, ಪೋಷಕರಿಗೆ ವಿಮಾನಯಾನ ಭಾಗ್ಯ
ಬಹ್ರೇನ್​​ನ ಗಗನಚುಂಬಿ ಕಟ್ಟಡಗಳ ಮೇಲೆ ಇರಾನ್ ದಾಳಿ
ಬಹ್ರೇನ್​​ನ ಗಗನಚುಂಬಿ ಕಟ್ಟಡಗಳ ಮೇಲೆ ಇರಾನ್ ದಾಳಿ
ಸಚಿವ ಮಂಕಾಳು ವೈದ್ಯ ಮಾತಿಗೆ ಸಿಟ್ಟಾಗಿ ಸಭೆಯಿಂದ ಹೊರನಡೆದ ಸತೀಶ್ ಸೈಲ್
ಸಚಿವ ಮಂಕಾಳು ವೈದ್ಯ ಮಾತಿಗೆ ಸಿಟ್ಟಾಗಿ ಸಭೆಯಿಂದ ಹೊರನಡೆದ ಸತೀಶ್ ಸೈಲ್