ಕಲಬುರಗಿ ವಿಮಾನ ನಿಲ್ದಾಣ ಲೋಕಾರ್ಪಣೆ, 4 ದಶಕಗಳ ಕನಸಿಗೆ ಬಂತು ‘ರೆಕ್ಕೆ’ಪುಕ್ಕ
ಕಲಬುರಗಿ: ಕಲ್ಯಾಣ ಕರ್ನಾಟಕ ಜನರ ದಶಕಗಳ ಕನಸು ನನಸಾಗುವ ದಿನ ಬಂದೇ ಬಿಟ್ಟಿದೆ. ವಿಶಾಲ ಭೂಪ್ರದೇಶದಲ್ಲಿ ನಿರ್ಮಾಣಗೊಂಡಿರೋ ಕಲಬುರಗಿ ವಿಮಾನ ನಿಲ್ದಾಣ ಇಂದು ಲೋಕಾರ್ಪಣೆಗೊಳ್ಳಲಿದೆ. ಕಲಬುರಗಿ ತಾಲೂಕಿನ ಶ್ರೀನಿವಾಸ ಸರಡಗಿ ಗ್ರಾಮದ ಬಳಿ ನೂತನವಾಗಿ ನಿರ್ಮಾಣವಾಗಿರುವ ವಿಮಾನ ನಿಲ್ದಾಣ ಇಂದಿನಿಂದ ಕಾರ್ಯಾರಂಭ ಮಾಡಲಿದೆ. ಸ್ಟಾರ್ಏರ್ ಕಂಪನಿಯ ಮೊದಲ ವಿಮಾನ ಇಂದು ಬೆಂಗಳೂರಿನಿಂದ ಹೊರಟು ಕಲಬುರಗಿಯಲ್ಲಿ ಲ್ಯಾಂಡ್ ಆಗಲಿದೆ. ಪ್ರತಿದಿನ ಒಂದು ವಿಮಾನ ಕಲಬುರಗಿಯಿಂದ ಬೆಂಗಳೂರಿಗೆ, ಬೆಂಗಳೂರಿನಿಂದ ಕಲಬುರಗಿಗೆ ಹಾರಾಟ ನಡೆಸಲಿದೆ. ಅಡಿಗಲ್ಲು ಹಾಕಿದ್ದ ಯಡಿಯೂರಪ್ಪರಿಂದಲೇ ಉದ್ಘಾಟನೆ: ಹೌದು, […]
ಕಲಬುರಗಿ: ಕಲ್ಯಾಣ ಕರ್ನಾಟಕ ಜನರ ದಶಕಗಳ ಕನಸು ನನಸಾಗುವ ದಿನ ಬಂದೇ ಬಿಟ್ಟಿದೆ. ವಿಶಾಲ ಭೂಪ್ರದೇಶದಲ್ಲಿ ನಿರ್ಮಾಣಗೊಂಡಿರೋ ಕಲಬುರಗಿ ವಿಮಾನ ನಿಲ್ದಾಣ ಇಂದು ಲೋಕಾರ್ಪಣೆಗೊಳ್ಳಲಿದೆ. ಕಲಬುರಗಿ ತಾಲೂಕಿನ ಶ್ರೀನಿವಾಸ ಸರಡಗಿ ಗ್ರಾಮದ ಬಳಿ ನೂತನವಾಗಿ ನಿರ್ಮಾಣವಾಗಿರುವ ವಿಮಾನ ನಿಲ್ದಾಣ ಇಂದಿನಿಂದ ಕಾರ್ಯಾರಂಭ ಮಾಡಲಿದೆ.
ಸ್ಟಾರ್ಏರ್ ಕಂಪನಿಯ ಮೊದಲ ವಿಮಾನ ಇಂದು ಬೆಂಗಳೂರಿನಿಂದ ಹೊರಟು ಕಲಬುರಗಿಯಲ್ಲಿ ಲ್ಯಾಂಡ್ ಆಗಲಿದೆ. ಪ್ರತಿದಿನ ಒಂದು ವಿಮಾನ ಕಲಬುರಗಿಯಿಂದ ಬೆಂಗಳೂರಿಗೆ, ಬೆಂಗಳೂರಿನಿಂದ ಕಲಬುರಗಿಗೆ ಹಾರಾಟ ನಡೆಸಲಿದೆ.
ಅಡಿಗಲ್ಲು ಹಾಕಿದ್ದ ಯಡಿಯೂರಪ್ಪರಿಂದಲೇ ಉದ್ಘಾಟನೆ: ಹೌದು, ಕಲಬುರಗಿ ಏರ್ಪೋರ್ಟ್ ಕಾಮಗಾರಿಗೆ 2008ರಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಡಿಗಲ್ಲು ಹಾಕಿದ್ರು. ಇದೀಗ 11 ವರ್ಷಗಳ ಬಳಿಕ ಅವರೇ ವಿಮಾನ ನಿಲ್ದಾಣವನ್ನ ಉದ್ಘಾಟನೆ ಕೂಡ ಮಾಡ್ತಿದ್ದಾರೆ. ಬೆಂಗಳೂರಿನಿಂದ ಕಲಬುರಗಿಗೆ ವಿಮಾನದಲ್ಲಿ ಆಗಮಿಸಲಿರೋ ಸಿಎಂ ಮತ್ತು ಸಚಿವರು ಅದೇ ವಿಮಾನದಲ್ಲಿ ಬೆಂಗಳೂರಿಗೆ ಪ್ರಯಾಣ ಬೆಳೆಸಲಿದ್ದಾರೆ.
ಏರ್ಪೋರ್ಟ್ನ ವಿಶೇಷತೆಗಳು: ಕಲಬುರಗಿ ವಿಮಾನ ನಿಲ್ದಾಣವು ರಾಜ್ಯದ 6ನೇ ನಾಗರಿಕ ವಿಮಾನ ನಿಲ್ದಾಣವಾಗಿದ್ದು, ಕಲ್ಯಾಣ ಕರ್ನಾಟಕ ಭಾಗದ ಮೊದಲ ನಾಗರಿಕ ವಿಮಾನ ನಿಲ್ದಾಣವಾಗಿದೆ. ರಾಜ್ಯದ 2ನೇ ಅತಿ ಉದ್ದದ ರನ್ವೇ ಹೊಂದಿದ್ದು, ಇದರ ಉದ್ದ 3.25 ಕಿ.ಮೀ. ಇದೆ. ಈ ಏರ್ಪೋರ್ಟ್ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಪೂರಕವಾಗಿದೆ.
ವಿಮಾನ ನಿಲ್ದಾಣಕ್ಕೆ ಹೆಸರಿಡುವ ಬಗ್ಗೆ ತಿಕ್ಕಾಟ ಶುರುವಾಗಿದ್ದು, ನೃಪತುಂಗ, ಸಂತ ಸೇವಾಲಾಲ್, ಶರಣಬಸವೇಶ್ವರ, ಅಂಬೇಡ್ಕರ್ ಹೆಸರುಗಳು ಹರಿದಾಡ್ತಿವೆ. ಸದ್ಯ ಕಲಬುರಗಿಯಿಂದ ಬೆಂಗಳೂರು, ನವದೆಹಲಿ, ತಿರುಪತಿ ಹಾಗೂ ಮುಂಬೈಗೆ ತೆರಳಲು ಬೇಡಿಕೆ ಹೆಚ್ಚಿದೆ.
ಇನ್ನು ವಿಮಾನ ನಿಲ್ದಾಣಕ್ಕೆ ಭೂಮಿ ಕೊಟ್ಟ ರೈತರಿಗೆ ಸರಿಯಾದ ಪರಿಹಾರ ಸಿಕ್ಕಿಲ್ಲ ಅನ್ನೋ ಆರೋಪ ಇದೆ. ಜೊತೆಗೆ ವಿಮಾನ ನಿಲ್ದಾಣ ನಿರ್ಮಾಣದಲ್ಲಿ ಸಾಕಷ್ಟು ಶ್ರಮಹಾಕಿದ್ದ ಮಲ್ಲಿಕಾರ್ಜುನ ಖರ್ಗೆ ಉದ್ಘಾಟನೆ ವೇಳೆ ಕಡೆಗಣಿಸಲಾಗಿದೆ ಅನ್ನೋ ಮಾತುಗಳು ಕೇಳಿಬಂದಿವೆ.
Published On - 6:39 am, Fri, 22 November 19