ಸಹಾಯಧನ ಪಡೆಯಲು ಆಟೋ ಚಾಲಕರು ಏನು ಮಾಡಬೇಕು? ಇಲ್ಲಿದೆ ಮಾಹಿತಿ
ಬೆಂಗಳೂರು: ಕೊರೊನಾ ಲಾಕ್ಡೌನ್ನಿಂದ ಕಂಗಾಲಾಗಿರುವ ಆಟೋ, ಟ್ಯಾಕ್ಸಿ ಚಾಲಕರಿಗೆ ಸಹಾಯಧನ ವಿತರಣೆ ಸಂಬಂಧ ಸಾರಿಗೆ ಇಲಾಖೆ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಚಾಲನಾ ಅನುಜ್ಞಾಪತ್ರ, ಬ್ಯಾಡ್ಜ್ ಹೊಂದಿರುವ ಫಲಾನುಭವಿಗಳು ಮಾತ್ರ 5,000 ಸಹಾಯಧನ ಪಡೆಯಲು ಅರ್ಹರಾಗಿರುತ್ತಾರೆ. ಮಾರ್ಚ್ 1ಕ್ಕೆ ಚಾಲ್ತಿಯಲ್ಲಿರುವ ಅನುಜ್ಞಾ ಪತ್ರದ ವಿವರಗಳನ್ನು ನೀಡಬೇಕು. ಇದರ ಜೊತೆಗೆ ಆಧಾರ್ ಸಂಖ್ಯೆ, ಬ್ಯಾಂಕ್ ಖಾತೆ, ವಾಹನ ನೋಂದಣಿ ಸಂಖ್ಯೆ ಸೇರಿದಂತೆ ಅಗತ್ಯವಿರುವ ಎಲ್ಲಾ ಮಾಹಿತಿಗಳನ್ನು ಪೋರ್ಟಲ್ನಲ್ಲಿ ನಮೂದಿಸಬೇಕು. ಅಲ್ಲದೆ, ಕೊರೊನಾ ಸಂದರ್ಭದಲ್ಲಿ ಆದಾಯ ಕಳೆದುಕೊಂಡಿರುವ ಬಗ್ಗೆಯೂ ಸೆಲ್ಫ್ ಡಿಕ್ಲರೇಷನ್ […]
ಬೆಂಗಳೂರು: ಕೊರೊನಾ ಲಾಕ್ಡೌನ್ನಿಂದ ಕಂಗಾಲಾಗಿರುವ ಆಟೋ, ಟ್ಯಾಕ್ಸಿ ಚಾಲಕರಿಗೆ ಸಹಾಯಧನ ವಿತರಣೆ ಸಂಬಂಧ ಸಾರಿಗೆ ಇಲಾಖೆ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಚಾಲನಾ ಅನುಜ್ಞಾಪತ್ರ, ಬ್ಯಾಡ್ಜ್ ಹೊಂದಿರುವ ಫಲಾನುಭವಿಗಳು ಮಾತ್ರ 5,000 ಸಹಾಯಧನ ಪಡೆಯಲು ಅರ್ಹರಾಗಿರುತ್ತಾರೆ.
ಮಾರ್ಚ್ 1ಕ್ಕೆ ಚಾಲ್ತಿಯಲ್ಲಿರುವ ಅನುಜ್ಞಾ ಪತ್ರದ ವಿವರಗಳನ್ನು ನೀಡಬೇಕು. ಇದರ ಜೊತೆಗೆ ಆಧಾರ್ ಸಂಖ್ಯೆ, ಬ್ಯಾಂಕ್ ಖಾತೆ, ವಾಹನ ನೋಂದಣಿ ಸಂಖ್ಯೆ ಸೇರಿದಂತೆ ಅಗತ್ಯವಿರುವ ಎಲ್ಲಾ ಮಾಹಿತಿಗಳನ್ನು ಪೋರ್ಟಲ್ನಲ್ಲಿ ನಮೂದಿಸಬೇಕು. ಅಲ್ಲದೆ, ಕೊರೊನಾ ಸಂದರ್ಭದಲ್ಲಿ ಆದಾಯ ಕಳೆದುಕೊಂಡಿರುವ ಬಗ್ಗೆಯೂ ಸೆಲ್ಫ್ ಡಿಕ್ಲರೇಷನ್ ಕೊಡಬೇಕಾಗಿದೆ.
ಆಟೋ ಹಾಗೂ ಟ್ಯಾಕ್ಸಿ ಚಾಲಕರು ಸಹಾಯಧನ ಪಡೆಯಲು ಸೇವಾ ಸಿಂಧು ಌಪ್ ಮೂಲಕ ಅರ್ಜಿಗಳನ್ನು ಸಲ್ಲಿಸಬೇಕು. ಈಗಾಗಲೇ ಈ ಸಂಬಂಧ ಕರಡು ಮಾರ್ಗಸೂಚಿಯನ್ನು ಸಾರಿಗೆ ಇಲಾಖೆ ಸಿದ್ಧಪಡಿಸಿದ್ದು, ಇನ್ನಷ್ಟೇ ಸರ್ಕಾರದಿಂದ ಅಧಿಕೃತ ಆದೇಶ ಹೊರಬೀಳಬೇಕಿದೆ.
Published On - 7:07 pm, Fri, 8 May 20