ಬೆಂಗಳೂರು ಸಮೀಪವೇ ಏಕಾಏಕಿ ಮನೆಗೆ ನುಗ್ಗಿ ಮಗುವನ್ನು ಹೊತ್ತೊಯ್ದ ಚಿರತೆ!
ರಾಮನಗರ: ಮಾಗಡಿ ತಾಲೂಕಿನ ಕದರಯ್ಯನಪಾಳ್ಯ ಗ್ರಾಮದಲ್ಲಿ ಚಿರತೆ ಅಟ್ಟಹಾಸ ಮೆರೆದಿದ್ದು, ಮನೆಯಲ್ಲಿ ಮಲಗಿದ್ದ 3 ವರ್ಷದ ಮಗುವನ್ನು ಹೊತ್ತೊಯ್ದು ಕೊಂದು ತಿಂದಿದೆ. ಚಂದ್ರಣ್ಣ ಹಾಗೂ ಮಂಗಳಗೌರಮ್ಮ ದಂಪತಿಯ ಪುತ್ರ ಹೇಮಂತ್(3) ಚಿರತೆ ಅಟ್ಟಹಾಸಕ್ಕೆ ಬಲಿಯಾಗಿದ್ದಾನೆ. ಬೇಸಿಗೆ ಹಿನ್ನೆಲೆಯಲ್ಲಿ ಬಾಗಿಲು ತೆರೆದು ಸಮೀಪವೇ ಕುಟುಂಬಸ್ಥರು ಮಲಗಿದ್ದರು. ಬೆಳಗಿನ ಜಾವ 3 ಗಂಟೆ ಸುಮಾರಿಗೆ ಏಕಾಏಕಿ ಮನೆಗೆ ನುಗ್ಗಿದ ಚಿರತೆ ಮಗುವನ್ನು ಹೊತ್ತೊಯ್ದಿದೆ. ತಕ್ಷಣ ಎಚ್ಚರಗೊಂಡ ಕುಟುಂಬಸ್ಥರು ಮಗುವಿಗಾಗಿ ಹುಡುಕಾಟ ನಡೆಸಿದ್ದಾರೆ. ಮನೆಯ ಸಮೀಪವೇ ಹೇಮಂತ್ ಶವ ಪತ್ತೆಯಾಗಿದೆ. ತಡರಾತ್ರಿ […]
ರಾಮನಗರ: ಮಾಗಡಿ ತಾಲೂಕಿನ ಕದರಯ್ಯನಪಾಳ್ಯ ಗ್ರಾಮದಲ್ಲಿ ಚಿರತೆ ಅಟ್ಟಹಾಸ ಮೆರೆದಿದ್ದು, ಮನೆಯಲ್ಲಿ ಮಲಗಿದ್ದ 3 ವರ್ಷದ ಮಗುವನ್ನು ಹೊತ್ತೊಯ್ದು ಕೊಂದು ತಿಂದಿದೆ. ಚಂದ್ರಣ್ಣ ಹಾಗೂ ಮಂಗಳಗೌರಮ್ಮ ದಂಪತಿಯ ಪುತ್ರ ಹೇಮಂತ್(3) ಚಿರತೆ ಅಟ್ಟಹಾಸಕ್ಕೆ ಬಲಿಯಾಗಿದ್ದಾನೆ.
ಬೇಸಿಗೆ ಹಿನ್ನೆಲೆಯಲ್ಲಿ ಬಾಗಿಲು ತೆರೆದು ಸಮೀಪವೇ ಕುಟುಂಬಸ್ಥರು ಮಲಗಿದ್ದರು. ಬೆಳಗಿನ ಜಾವ 3 ಗಂಟೆ ಸುಮಾರಿಗೆ ಏಕಾಏಕಿ ಮನೆಗೆ ನುಗ್ಗಿದ ಚಿರತೆ ಮಗುವನ್ನು ಹೊತ್ತೊಯ್ದಿದೆ. ತಕ್ಷಣ ಎಚ್ಚರಗೊಂಡ ಕುಟುಂಬಸ್ಥರು ಮಗುವಿಗಾಗಿ ಹುಡುಕಾಟ ನಡೆಸಿದ್ದಾರೆ. ಮನೆಯ ಸಮೀಪವೇ ಹೇಮಂತ್ ಶವ ಪತ್ತೆಯಾಗಿದೆ.
ತಡರಾತ್ರಿ ಮಳೆ ಬಂದ ಕಾರಣ ಮನೆಯಲ್ಲಿ ವಿದ್ಯುತ್ ಇರಲಿಲ್ಲ. ಹಾಗಾಗಿ ಬಾಗಿಲು ತೆರೆದು ದಂಪತಿ ಮಲಗಿದ್ದರು. ಮಾಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Published On - 7:03 am, Sat, 9 May 20