ಬೆಂಗಳೂರು: ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ನ ಕರ್ನಾಟಕದ ಶ್ರೀರಾಮ ಮಂದಿರ ನಿರ್ಮಾಣ ನಿಧಿ ಸಮರ್ಪಣಾ ಅಭಿಯಾನ ಸಮಿತಿಗೆ ಚಾಮರಾಜನಗರ ಸೇವಾಭಾರತಿ ಶಾಲೆಯ ಅಧ್ಯಕ್ಷರಾದ ಮ. ವೆಂಕಟರಾಮು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯ ನಿವೃತ್ತ ನಿರ್ದೇಶಕರಾದ ಡಾ. ವಿಜಯಲಕ್ಷ್ಮಿದೇಶಮಾನೆ ಹಾಗೂ ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ವಿಶ್ರಾಂತ ಉಪಕುಲಪತಿಗಳಾದ ಮೀನಾ ಚಂದಾವರ್ಕರ್ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ವನವಾಸಿ ಕಲ್ಯಾಣ ಆಶ್ರಮ, ಕರ್ನಾಟಕದ ನಿರ್ವಾಹಕ ವಿಶ್ವಸ್ತರಾದ ನಾ. ತಿಪ್ಪೇಸ್ವಾಮಿ ಅವರಿಗೆ ಕಾರ್ಯದರ್ಶಿಯ ಜವಾಬ್ದಾರಿ ವಹಿಸಲಾಗಿದೆ.
ಸಹಕಾರ್ಯದರ್ಶಿಗಳಾಗಿ ಶಿವಮೊಗ್ಗದ ಟಿ. ಪಟ್ಟಾಭಿರಾಮ, ಕಲಬುರಗಿಯ ಕೃಷ್ಣ ಜೋಷಿ ಆಯ್ಕೆಯಾಗಿದ್ದಾರೆ. ನಿವೃತ್ತ ಐಆರ್‌ಎಸ್ ಅಧಿಕಾರಿ ಡಾ.ಪ್ರಕಾಶ್ ಜೆ.ಪಿ. ಸಮಿತಿಯ ಕೋಶಾಧ್ಯಕ್ಷರಾಗಿದ್ದಾರೆ.
ಸದಸ್ಯರು: ಕೆ.ರತ್ನಪ್ರಭಾ, ವಿ.ಆರ್.ಗೌರಿಶಂಕರ, ಮೂಲಚಂದ್ ನಹಾರ್, ಡಾ.ವಿಜಯಸಂಕೇಶ್ವರ, ಎಂ.ಆರ್.ಜಯರಾಮ್, ದೇವೇಂದ್ರಪ್ಪ ಮಾಳಗಿ, ಡಾ.ಸರ್ದಾರ್ ಬಲಬೀರ್ ಸಿಂಗ್, ಮಾನಂದಿ ಸುರೇಶ್, ಕಿಮ್ಮನೆ ಜಯರಾಮ್, ವಿವೇಕ್ ಆಳ್ವ, ಲಿಂಗರಾಜ್, ಡಾ.ಗಿರೀಶ್ ಮಾಸೂರಕರ್, ಡಾ.ಟಿ.ಎಸ್.ಸತ್ಯವತಿ, ಡಾ.ಮಲ್ಲಿಕಾರ್ಜುನ ಮುಕ್ಕಾ, ಡಾ.ಜೀವರಾಜ್ ಸೊರಕೆ, ಸತೀಶ ಯಚ್ಚರೆಡ್ಡಿ, ಡಿ.ಎನ್.ಪ್ರಹ್ಲಾದ್, ಜಯಂತ ಹುಂಬರವಾಡಿ, ಅಶೋಕ್, ಅರುಣಾ ಠಕಾರೆ.
ಉಡುಪಿ ಪೇಜಾವರ ಮಠಾಧೀಶ ವಿಶ್ವಪ್ರಸನ್ನತೀರ್ಥ ಶ್ರೀಪಾದರಿಗೆ ‘Y’ ಶ್ರೇಣಿಯ ಭದ್ರತೆ ನೀಡಿದ ರಾಜ್ಯ ಸರ್ಕಾರ