ಮಗಳಿಂದ ತಾಯಿಗೆ: ರಾಜಾಜಿನಗರದ ವೃದ್ಧೆಯ ಹೆಗಲೇರಿದ ‘ಬ್ರಿಟನ್ ಬೇತಾಳ’
ನಗರದಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ಕೊಂಚ ತಗ್ಗಿದ್ದರೂ ಬ್ರಿಟನ್ ಭೂತದ ಭೀತಿ ಮಾತ್ರ ತಲೆ ಮೇಲೆ ತೂಗುಗತ್ತಿಯಂತೆ ನೇತಾಡುತ್ತಿದೆ.
ಬೆಂಗಳೂರು: ನಗರದಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ಕೊಂಚ ತಗ್ಗಿದ್ದರೂ ಬ್ರಿಟನ್ ಭೂತದ ಭೀತಿ ಮಾತ್ರ ತಲೆ ಮೇಲೆ ತೂಗುಗತ್ತಿಯಂತೆ ನೇತಾಡುತ್ತಿದೆ.
ಇತ್ತ, ಬ್ರಿಟನ್ನಿಂದ ಬಂದಿದ್ದ ಮಹಿಳೆಯಿಂದ ಆಕೆ ತಾಯಿಗೆ ಹೊಸ ಕೊರೊನಾ ಪ್ರಭೇದ ತಗುಲಿರುವುದು ಪತ್ತೆಯಾಗಿದೆ. ಬ್ರಿಟನ್ನ ಹೊಸ B117 ಪ್ರಭೇದದ ಕೊರೊನಾ ತಗುಲಿರುವುದು ದೃಢವಾಗಿದೆ.
ಅಂದ ಹಾಗೆ, ಡಿ.19ರಂದು ಬ್ರಿಟನ್ನಿಂದ ಬೆಂಗಳೂರಿಗೆ ಬಂದಿದ್ದ 40 ವರ್ಷದ ಮಹಿಳೆಯಿಂದ ಆಕೆಯ ತಾಯಿಗೆ ಕೊರೊನಾ ರೂಪಾಂತರಿ ವೈರಸ್ ಹರಡಿರುವುದು ಪತ್ತೆಯಾಗಿದೆ. ವಂಶವಾಹಿ ಪರೀಕ್ಷೆಯಲ್ಲಿ ಇದು ಬ್ರಿಟನ್ ವೈರಸ್ ಎಂಬುದು ದೃಢವಾಗಿದ್ದು ಸದ್ಯ ರಾಜಾಜಿನಗರದ 73 ವರ್ಷದ ವೃದ್ಧೆಯಲ್ಲಿ ಸೋಂಕು ದೃಢವಾಗಿದೆ. ಇತ್ತ, ಬೊಮ್ಮನಹಳ್ಳಿಯ ವ್ಯಕ್ತಿಯೊಬ್ಬರಿಗೆ ಬ್ರಿಟನ್ ವೈರಸ್ ವಕ್ಕರಿಸಿರುವುದು ತಿಳಿದುಬಂದಿದೆ.
ಮಾರ್ಗಸೂಚಿ ಪಾಲಿಸದ ಶಾಲೆಗಳಿಗೆ ನೋಟಿಸ್: ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್