ಕೆನರಾ ಬ್ಯಾಂಕ್‌ನಿಂದ 50ಕ್ಕೂ ಹೆಚ್ಚು ರೈತರಿಗೆ ನೋಟಿಸ್; ಕೊರೊನಾ ಸಂಕಷ್ಟದಲ್ಲೂ ಸಾಲ ಮರುಪಾವತಿಗೆ ಸೂಚನೆ

|

Updated on: May 07, 2021 | 11:30 AM

Canara Bank Loan: ನನ್ನ ಮಗ ಸಾಲದಿಂದ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ. ಆತ್ಮಹತ್ಯೆಗೆ ಶರಣಾದ ಮಗನ ಸಾಲಕ್ಕೆ ವಯೋವೃದ್ಧ ತಂದೆ-ತಾಯಿಗೆ ನೋಟಿಸ್ ನೀಡುತ್ತಿದ್ದಾರೆ. ಹೀಗಾದ್ರೆ ನಾವು ಬದುಕೋದು ಹೇಗೆ ಎಂದು ರೈತ ಮಹಿಳೆ ಅಳಲು ತೋಡಿಕೊಂಡಿದ್ದಾರೆ. ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಹಲವಾರು ರೈತರು ಈ ವಿಷಯದಲ್ಲಿ ಸರ್ಕಾರ ಕೂಡಲೆ ಸ್ಪಂದಿಸಲಿ ಎಂದು ಆಗ್ರಹಿಸಿದ್ದಾರೆ.

ಕೆನರಾ ಬ್ಯಾಂಕ್‌ನಿಂದ 50ಕ್ಕೂ ಹೆಚ್ಚು ರೈತರಿಗೆ ನೋಟಿಸ್; ಕೊರೊನಾ ಸಂಕಷ್ಟದಲ್ಲೂ ಸಾಲ ಮರುಪಾವತಿಗೆ ಸೂಚನೆ
ಕೆನರಾ ಬ್ಯಾಂಕ್‌ನಿಂದ 50ಕ್ಕೂ ಹೆಚ್ಚು ರೈತರಿಗೆ ನೋಟಿಸ್; ಕೊರೊನಾ ಸಂಕಷ್ಟದಲ್ಲೂ ಸಾಲ ಮರುಪಾವತಿಗೆ ಸೂಚನೆ
Follow us on

ಹಾಸನ: ಜಿಲ್ಲೆಯ ಚನ್ನರಾಯಪಟ್ಟಣದ ಕೆನರಾ ಬ್ಯಾಂಕ್ ಶಾಖೆಯು ಸಾಲ ಮರುಪಾವತಿ ಮಾಡುವಂತೆ 50ಕ್ಕೂ ಹೆಚ್ಚು ರೈತರಿಗೆ ನೋಟಿಸ್ ನೀಡಿದೆ. ಚನ್ನರಾಯಪಟ್ಟಣದ ಕೆನರಾ ಬ್ಯಾಂಕ್ ಶಾಖೆ ವತಿಯಿಂದ ಅಧಿಕಾರಿಗಳು 50ಕ್ಕೂ ಹೆಚ್ಚು ರೈತರಿಗೆ ನೋಟಿಸ್ ನೀಡಿದ್ದಾರೆ. ಸಂಕಷ್ಟ ಕಾಲದಲ್ಲಿ ನೋಟಿಸ್ ನೀಡಿದರೆ ನಾವೇನು ಮಾಡಬೇಕು? ನೀವು ನೋಟಿಸ್ ನೀಡಿದರೆ ನಾವು ಬದುಕೋದು ಕಷ್ಟವಾಗುತ್ತೆ. ಸಾಲ ಮರುಪಾವತಿ ಮಾಡೋದು ಹೇಗೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.

ಕೊರೊನಾ ಕರ್ಫ್ಯೂ ನಡುವೆಯೂ ಸ್ಥಳೀಯ ಕೆನರಾ ಬ್ಯಾಂಕ್ ಶಾಖೆ ಸಿಬ್ಬಂದಿ ಸಾಲ ಮರುಪಾವತಿ ಮಾಡುವಂತೆ ರೈತರ ಮನೆ ಮನೆಗೆ ಬಂದು ನೋಟಿಸ್ ನೀಡುತ್ತಿದ್ದಾರೆ. ಮೊದಲೇ ಕೊರೋನಾ ಸಂಕಷ್ಟದಿಂದ ಸರಿಯಾಗಿ ಕೂಲಿ ಸಿಗುತ್ತಿಲ್ಲ. ಬೆಳೆದ ಬೆಳೆಗೆ ಸರಿಯಾಗಿ ಬೆಲೆ ಸಿಗುತ್ತಿಲ್ಲ. ಅಂಥದ್ದರಲ್ಲಿ ಸಾಲ ಮರುಪಾವತಿ ಮಾಡೋದು ಹೇಗೆ ಎಂದು ನೋಟಿಸ್ ಪಡೆದಿರುವ 50ಕ್ಕೂ ಹೆಚ್ಚು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.

ಚನ್ನರಾಯಪಟ್ಟಣದ ಕೆನರಾ ಬ್ಯಾಂಕ್ ಶಾಖೆಯಿಂದ ಸಾಲ ಮರುಪಾವತಿ ಮಾಡುವಂತೆ ರೈತರಿಗೆ ನೋಟಿಸ್

ದಯವಿಟ್ಟು ನಮ್ಮ ಸಾಲಮನ್ನಾ ಮಾಡಿ. ಬ್ಯಾಂಕ್‌ಗಳಿಗೆ ನೋಟಿಸ್ ನೀಡಿ ಕಿರುಕುಳ ನೀಡದಂತೆ ಎಚ್ಚರಿಕೆ ನೀಡಿ ಎಂದು ರೈತ ಮುಖಂಡರು ಆಗ್ರಹ ಮಾಡಿದ್ದಾರೆ. ನನ್ನ ಮಗ ಸಾಲದಿಂದ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ. ಆತ್ಮಹತ್ಯೆಗೆ ಶರಣಾದ ಮಗನ ಸಾಲಕ್ಕೆ ವಯೋವೃದ್ಧ ತಂದೆ-ತಾಯಿಗೆ ನೋಟಿಸ್ ನೀಡುತ್ತಿದ್ದಾರೆ. ಹೀಗಾದ್ರೆ ನಾವು ಬದುಕೋದು ಹೇಗೆ ಎಂದು ರೈತ ಮಹಿಳೆ ಅಳಲು ತೋಡಿಕೊಂಡಿದ್ದಾರೆ. ಚನ್ನರಾಯಪಟ್ಟಣ ತಾಲ್ಲೂಕಿನ ಹಲವಾರು ರೈತರು ಈ ವಿಷಯದಲ್ಲಿ ಸರ್ಕಾರ ಕೂಡಲೆ ಸ್ಪಂದಿಸಲಿ ಎಂದು ಆಗ್ರಹಿಸಿದ್ದಾರೆ.

ಮಗನ ಸಾಲಕ್ಕೆ ವಯೋವೃದ್ಧ ತಂದೆ-ತಾಯಿಗೆ ನೋಟಿಸ್

ಚನ್ನರಾಯಪಟ್ಟಣದ ಕೆನರಾ ಬ್ಯಾಂಕ್ ಶಾಖೆಯಿಂದ ಸಾಲ ಮರುಪಾವತಿ ಮಾಡುವಂತೆ ರೈತರಿಗೆ ರಿಜಿಸ್ಟರ್​ ಪೋಸ್ಟ್​ ಮೂಲಕ ನೋಟಿಸ್(canara bank channarayana pattana branch issue loan repayment notice to 50 farmers in middle of covid plight)