ಬಳ್ಳಾರಿಯ ವಿವಿಯಿಂದ ಕೊವಿಡ್ ಕೇರ್ ಸೆಂಟರ್; ಕೊರೊನಾ ಸೋಂಕಿತರ ನೆರವಿಗೆ ನಿಂತ ವಿಶ್ವವಿದ್ಯಾಲಯ

ಬಳ್ಳಾರಿ ನಗರ ಹೊರವಲಯದ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಸರ್ಕಾರಿ ಅತಿಥಿಗೃಹದಲ್ಲಿ 50 ಬೆಡ್​ಗಳುಳ್ಳ ಕೊವಿಡ್ ಕೇರ್ ಐಸೋಲೇಷನ್ ಕೇಂದ್ರವೊಂದನ್ನ ಆರಂಭಿಸಿದೆ. ವಿವಿಯ ಅತಿಥಿ ಗೃಹದಲ್ಲಿರುವ ಕೊವಿಡ್ ಕೇರ್ ಐಸೋಲೇಷನ್ ಕೇಂದ್ರದಲ್ಲಿ ಸುಸಜ್ಜಿತ ಬೆಡ್​ಗಳ ವ್ಯವಸ್ಥೆಯನ್ನ ಮಾಡಲಾಗಿದೆ.

ಬಳ್ಳಾರಿಯ ವಿವಿಯಿಂದ ಕೊವಿಡ್ ಕೇರ್ ಸೆಂಟರ್; ಕೊರೊನಾ ಸೋಂಕಿತರ ನೆರವಿಗೆ ನಿಂತ ವಿಶ್ವವಿದ್ಯಾಲಯ
ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ
Follow us
preethi shettigar
|

Updated on: May 07, 2021 | 12:45 PM

ಬಳ್ಳಾರಿ: ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದ್ದು, ಸೋಂಕಿತರ ಸಂಖ್ಯೆಯಲ್ಲಿ ಕೂಡ ಹೆಚ್ಚಳ ಉಂಟಾಗಿದೆ. ಇದರ ಜೊತೆಗೆ ಸಾವಿನ ಸಂಖ್ಯೆಯಲ್ಲಿ ಕೂಡ ಏರಿಕೆ ಕಂಡುಬಂದಿದ್ದು, ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಯಾಗಿದೆ. ಕೊರೊನಾ ತೀವ್ರತೆಯನ್ನು ಕಡಿಮೆ ಮಾಡುವಲ್ಲಿ ರಾಜ್ಯ ಸರ್ಕಾರ ಸಾಕಷ್ಟು ಪ್ರಯತ್ನಗಳನ್ನು ಪಡುತ್ತಿದ್ದರೂ ಬೆಡ್, ಆಕ್ಸಿಜನ್ ಕೊರತೆ ಕಾಡುತ್ತಿದೆ. ಇಂತಹ ಸಂದರ್ಭದಲ್ಲಿ ಸಂಘ-ಸಂಸ್ಥೆಗಳು, ಸಮಾಜ ಸೇವಕರು ಕೊವಿಡ್ ಸೋಂಕಿತರ ನೆರವಿಗೆ ಬಂದಿದ್ದಾರೆ. ಈ ನಡುವೆ ವಿಶ್ವವಿದ್ಯಾಲಯವೊಂದು ಕೊವಿಡ್ ಸೋಂಕಿತರ ನೆರವಿಗೆ ಧಾವಿಸಿದ್ದು, ಕೊವಿಡ್ ಕೇರ್ ಸೆಂಟರ್​ ಆರಂಭಿಸಿದೆ.

ಬಳ್ಳಾರಿ ನಗರ ಹೊರವಲಯದ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಸರ್ಕಾರಿ ಅತಿಥಿಗೃಹದಲ್ಲಿ 50 ಬೆಡ್​ಗಳುಳ್ಳ ಕೊವಿಡ್ ಕೇರ್ ಐಸೋಲೇಷನ್ ಕೇಂದ್ರವೊಂದನ್ನ ಆರಂಭಿಸಿದೆ. ವಿವಿಯ ಅತಿಥಿ ಗೃಹದಲ್ಲಿರುವ ಕೊವಿಡ್ ಕೇರ್ ಐಸೋಲೇಷನ್ ಕೇಂದ್ರದಲ್ಲಿ ಸುಸಜ್ಜಿತ ಬೆಡ್​ಗಳ ವ್ಯವಸ್ಥೆಯನ್ನ ಮಾಡಲಾಗಿದೆ. ಒಂದೊಂದು ಕೊಠಡಿಗಳಲ್ಲಿ ಎರಡು ಬೆಡ್​ಗಳ ವ್ಯವಸ್ಥೆಯನ್ನ ಮಾಡಲಾಗಿದೆ. ಶೌಚಗೃಹದ ವ್ಯವಸ್ಥೆಯೂ ಕೂಡ ಇದ್ದು, ಕೊವಿಡ್ ಸೋಂಕಿತರು ಹೋಮ್ ಐಸೋಲೇಷನ್​ನಲ್ಲಿರಲು ಅನಾನುಕೂಲ ಇದ್ದವರಿಗೆ ಮಾತ್ರ ಇಲ್ಲಿ ಇರಲು ಅವಕಾಶವನ್ನು ಮಾಡಲಾಗಿದೆ. ಜೈನ್ ಇಂಟರ್ ನ್ಯಾಷನಲ್ ಟ್ರೇಡ್ ಆರ್ಗನೈಸೇಷನ್ (ಜಿಐಟಿಒ) ಹಾಗೂ ಸೇವಾ ಭಾರತಿ ಸಹಯೋಗದಲ್ಲಿ ಈ ವ್ಯವಸ್ಥೆ ಮಾಡಲಾಗಿದೆ ಎಂದು ವಿಜಯನಗರ ಶ್ರೀಕೃಷ್ಣದೇವರಾಯ ವಿವಿ ಕುಲಪತಿ ಸಿದ್ದು ಪಿ.ಅಲಗೂರ ತಿಳಿಸಿದ್ದಾರೆ.

ಈ ಕೊವಿಡ್ ಕೇರ್ ಐಸೋಲೇಷನ್ ಕೇಂದ್ರಕ್ಕೆ ಬರುವ ಕೊವಿಡ್ ಸೋಂಕಿತರು ಜಿಲ್ಲಾಡಳಿತದ ಸೂಕ್ತ ಮಾರ್ಗ ಸೂಚಿಯ ಮೂಲಕವೇ ಬರಬೇಕು. ಇಲ್ಲಿ ದಿನದ 24 ಗಂಟೆಯೂ ಕೂಡ ನರ್ಸ್​ಗಳ ಸೌಲಭ್ಯ ಇರುತ್ತದೆ. ನುರಿತ ತಜ್ಞ ವೈದ್ಯರ ಸೇವೆಯೂ ಇರುತ್ತದೆ. ಇದಲ್ಲದೇ, ಯೋಗಾಭ್ಯಾಸ- ಧ್ಯಾನ ಹಾಗೂ ಪ್ರಾಣಾಯಾಮ, ಓದಲು ಪುಸ್ತಕದ ವ್ಯವಸ್ಥೆಯನ್ನ ಮಾಡಲಾಗಿದೆ. ವಿಎಸ್​ಕೆ ವಿವಿಯ ಐಸೋಲೇಷನ್​ನಲ್ಲಿರುವ ಕೊವಿಡ್ ಸೋಂಕಿತರಿಗೆ ಪಾಸಿಟಿವ್ ಎನರ್ಜಿ ನೀಡುವ ಮುಖೇನ ಕೊವಿಡ್ ಸೋಂಕಿನಿಂದ ಗುಣಮುಖರಾಗಲು ಅನುಕೂಲ ಮಾಡಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಹೆಚ್.ಎಲ್.ಜರ್ನಾಧನ್ ತಿಳಿಸಿದ್ದಾರೆ.

covid care centre

ಸರ್ಕಾರಿ ಅತಿಥಿಗೃಹದಲ್ಲಿ 50 ಬೆಡ್​ಗಳುಳ್ಳ ಕೊವಿಡ್ ಕೇರ್ ಐಸೋಲೇಷನ್

ಸಮಾಜ ಕಲ್ಯಾಣ ಹಾಸ್ಟಲ್​ಗಳನ್ನು ತಾತ್ಕಾಲಿಕ ಕೊವಿಡ್ ಕೇರ್‌‌ ಸೆಂಟರ್​ಗಳಾಗಿ ಪರಿವರ್ತನೆ ಚಿತ್ರದುರ್ಗ ನಗರದ ಬಿ.ವಿ.ಕೆ.ಎಸ್ ಲೇಔಟ್​ನ ಸಮಾಜ ಕಲ್ಯಾಣ‌ ಇಲಾಖೆಯ ಹಾಸ್ಟಲ್‌ನಲ್ಲಿ ಎ ಸಿಂಟಮ್ಸ್ ಇರುವ ಕೊವಿಡ್ ಪೀಡಿತರು ಮನೆಯಲ್ಲೇ ಇದ್ದು ಚಿಕಿತ್ಸೆ ಪಡೆಯಲು ಸರ್ಕಾರ ಸೂಚಿಸಿದೆ. ಆದರೆ, ನಿನ್ನೆಯಷ್ಟೇ ಚಿತ್ರದುರ್ಗದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿದ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು, ಜಿಲ್ಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಹಾಸ್ಟಲ್​ಗಳನ್ನು ಬಳಸಿಕೊಂಡು ಕೊವಿಡ್ ಕೇರ್ ಸೆಂಟರ್ ನಿರ್ಮಾಣ ಮಾಡಿ. ಕೊವಿಡ್ ಪೀಡತರಿಗೆ ಮನೆಯಲ್ಲಿರಲು ಬಿಡುವುದು ಬೇಡ. ಒಬ್ಬರಿಂದ ಮನೆ ಮಂದಿಗೆಲ್ಲಾ ಸೋಂಕು ಹರಡುತ್ತದೆ. ಕೆಲವೊಮ್ಮೆ ಅನೇಕರ ಜೀವಕ್ಕೆ ಹಾನಿ ಆಗುತ್ತದೆ. ಎ ಸಿಂಟಮ್ಸ್ ಇದ್ದರೂ ಸಹ ಮನೆಯಲ್ಲಿರಲು ಬಿಡದೆ ಈ ಮೊದಲಿನಂತೆ ಕೊವಿಡ್ ಕೇರ್ ಸೆಂಟರ್​ಗೆ ಶಿಫ್ಟ್ ಮಾಡಿ ಸೂಕ್ತ ಚಿಕಿತ್ಸೆಯ ವ್ಯವಸ್ಥೆ ಕಲ್ಪಿಸಿ ಎಂದು ಸೂಚನೆ ನೀಡಿದ್ದಾರೆ.

ಸಚಿವ ಶ್ರೀರಾಮುಲು ಆದೇಶ ಪಾಲಿಸಿದ ಅಧಿಕಾರಿಗಳು ಒಂದೇ ದಿನದಲ್ಲಿ ಕೊವಿಡ್ ಕೇರ್ ಸೆಂಟರ್ ನಿರ್ಮಾಣ ಮಾಡಿದ್ದಾರೆ. ನಗರದ ಬಿವಿಕೆಎಸ್ ಲೇಔಟ್​ನ ಹಾಸ್ಟಲ್​ನಲ್ಲಿ 80 ಬೆಡ್​ನ ಕೇರ್ ಸೆಂಟರ್ ನಿರ್ಮಾಣ ಆಗಿದೆ. ಅಂತೆಯೇ ಪ್ರತಿ ತಾಲೂಕಿನಲ್ಲಿ ಎರಡು ಕೊವಿಡ್ ಸೆಂಟರ್ ತೆರೆಯಲಾಗುತ್ತಿದೆ. ಕೊವಿಡ್ ಕೇರ್ ಸೆಂಟರ್​ಗೆ ಆರೋಗ್ಯ ಸಿಬ್ಬಂದಿ ನೇಮಿಸಿದ್ದು, ವೈದ್ಯರು ಭೇಟಿ‌ ನೀಡಲಿದ್ದಾರೆ. ಜನರು ಕೇರ್ ಸೆಂಟರ್​ಗಳ ಸದುಪಯೋಗ ಪಡೆದುಕೊಳ್ಳಬೇಕೆಂದು ಡಿಹೆಚ್ಓ ಡಾ.ಪಾಲಾಕ್ಷ ಮನವಿ ಮಾಡಿದ್ದಾರೆ.

ಸಚಿವೆ ಶಶಿಕಲಾ ಜೊಲ್ಲೆ ಕುಟುಂಬದಿಂದ ಕೊವಿಡ್ ಕೇರ್ ಸೆಂಟರ್ ಬೆಳಗಾವಿ ಜಿಲ್ಲೆಯಲ್ಲಿ ಸದ್ಯ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಇದರಿಂದ ಜನರಿಗೆ ಬೆಡ್​ಗಳು ಸಿಗುತ್ತಿಲ್ಲ. ಇದನ್ನು ಗಮನಿಸಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಮತ್ತು ಚಿಕ್ಕೋಡಿ ಸಂಸದ ಅಣ್ಣಾಸಾಹೇಬ್ ಕೊರೊನಾ ರೋಗಿಗಳಿಗೆ ಸಹಾಯ ಆಗುವ ಕೆಲಸಕ್ಕೆ ಮುಂದಾಗಿದ್ದಾರೆ. ಕಳೆದ ವರ್ಷ ಯಾವ ರೀತಿಯಾಗಿ ನಿಪ್ಪಾಣಿ ಕ್ಷೇತ್ರದ ಜನರನ್ನ ರಕ್ಷಣೆ ಮಾಡಿದ್ದರೋ ಅದೇ ಮಾದರಿಯಲ್ಲಿ ಕೊರೊನಾ ಎರಡನೇ ಅಲೆ ಅಬ್ಬರದಲ್ಲೂ ಮುಂದಾಗಿದ್ದಾರೆ.

ಖುದ್ದು ತಮ್ಮದೇ ಖರ್ಚಿನಲ್ಲಿ ಇದೀಗ ನಿಪ್ಪಾಣಿಯ ಶಿಕ್ಷಣ ಸಂಸ್ಥೆಯ ಕಟ್ಟಡದಲ್ಲಿ ಕೊವಿಡ್ ಕೇರ್ ಸೆಂಟರ್ ಆರಂಭಿಸಿದ್ದಾರೆ. ನಿಪ್ಪಾಣಿಯಲ್ಲಿ ನಮ್ಮ ಸಂಸ್ಥೆಯ ಸಿಬಿಎಎಸ್​ಸಿಯಲ್ಲಿ ಜೊಲ್ಲೆ ಉದ್ಯೋಗ ಸಮೂಹ, ಆಯುಷ್ಮಾನ್ ಭಾರತ್, ಸುವರ್ಣ ಕರ್ನಾಟಕ ಮತ್ತು ನಿಪ್ಪಾಣಿ ಪರಿಸರದಲ್ಲಿರುವ ಎಲ್ಲಾ ಖಾಸಗಿ ವೈದ್ಯರು ಹಾಗೂ ವಿವಿಧ ಸಂಸ್ಥೆಗಳ ಸಹಯೋಗದೊಂದಿಗೆ ಕರೊನಾ ರೋಗಿಗಳಿಗೆ ಚಿಕಿತ್ಸೆ ನೀಡುವ ಸಲುವಾಗಿ ನಿರ್ಮಿಸಲಾದ ಕೊವಿಡ್ ಆಸ್ಪತ್ರೆಯನ್ನು ಚಿಕ್ಕೋಡಿಯ ಚರಮೂರ್ತಿ ಮಠದ ಪ.ಪೂ.ಶ್ರೀ ಸಂಪಾದನ ಮಹಾಸ್ವಾಮಿಗಳು, ಚಿಂಚಣಿಯ ಸಿದ್ಧಸಂಸ್ಥಾನ ಮಠದ ಪ.ಪೂ.ಶ್ರೀ ಅಲ್ಲಮಪ್ರಭು ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಡಿಸಿಎಂ ಲಕ್ಷ್ಮಣ ಸವದಿ ಉದ್ಘಾಟಿಸಿದ್ದಾರೆ ಎಂದು ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದಾರೆ.

ಈ ಆಸ್ಪತ್ರೆಯು 16 ಮಾನಿಟರ್​ಗಳನ್ನೊಳಗೊಂಡ ಸುಸಜ್ಜಿತ ಕೇಂದ್ರೀಕೃತ ಆಕ್ಸಿಜನ್ ಇರುವ 24 ಬೆಡ್​ಗಳನ್ನೊಳಗೊಂಡಂತೆ, ಒಟ್ಟು 40 ಬೆಡ್​ಗಳನ್ನು ಹೊಂದಿದೆ. ಇಲ್ಲಿ ಸೊಂಕಿರಿಗೆ ಬೇಕಾಗುವ ಎಲ್ಲಾ ರೀತಿಯ ಚಿಕಿತ್ಸೆ, ಪೌಷ್ಟಿಕ ಆಹಾರ, ಅತ್ಯುತ್ತಮ ವಸತಿ, ಪೇಷೆಂಟ್ ಕಿಟ್, ಕುಡಿಯಲು ಹಾಗೂ ಸ್ನಾನಕ್ಕೆ ಬಿಸಿ ನೀರಿನ ವ್ಯವಸ್ಥೆಗಳನ್ನು ಜೊಲ್ಲೆ ಉದ್ಯೋಗ ಸಮೂಹದ ವತಿಯಿಂದ ಮಾಡಲಾಗಿದೆ. ಹಾಗೆಯೇ, ಇಲ್ಲಿ ಸುಮಾರು ಎಂಬತ್ತಕ್ಕೂ ಅಧಿಕ ಸಿಬ್ಬಂದಿಗಳು ಕೆಲಸ ಮಾಡುತ್ತಿದ್ದು ಸ್ಥಳೀಯ ಖಾಸಗಿ ಆಸ್ಪತ್ರೆ ವೈದ್ಯರು ಕೂಡ ಇದಕ್ಕೆ ಸಾಥ್ ನೀಡಿದ್ದಾರೆ.

ಇದನ್ನೂ ಓದಿ:

ಕೊರೊನಾ ಸೋಂಕಿತೆಗೆ ಸಹಜ ಹೆರಿಗೆ ಮಾಡಿಸಿದ ಹಾವೇರಿ ಆಸ್ಪತ್ರೆ ವೈದ್ಯರು; ಕೊವಿಡ್ ವಾರಿಯರ್ಸ್​ಗೆ ಸಾರ್ವಜನಿಕರಿಂದ ಮೆಚ್ಚುಗೆ

ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ