ಕೊರೊನಾ ಬಂದರೆ ಭಯ ಬೇಡ; ಡ್ಯಾನ್ಸ್ ಮಾಡಿ ವಿಡಿಯೋ ಹಂಚಿಕೊಳ್ಳಿ, ಖುಷಿಯಾಗಿರಿ ಎಂದು ಧೈರ್ಯ ತುಂಬಿದ ಸೋಂಕಿತ ಪೇದೆ

ಕೊರೊನಾ ಪಾಸಿಟಿವ್ ಬಂದರೆ ಭಯ ಪಡಬೇಡಿ ಚಿಲ್ ಆಗಿರಿ ಎಂದು ಸಾರುವಂತಹ ಆತ್ಮಸ್ಥೈರ್ಯಕ್ಕೆ ಮನೆಯಲ್ಲೆ ಡ್ಯಾನ್ಸ್ ಮಾಡಿದ್ದಾರೆ. ಸೋಂಕಿನಿಂದ ಭಯಭೀತರಾಗದೆ ಹೋಂ ಐಸೋಲೇಷನ್ ಆಗಿ ಕಾಲಹರಣಕ್ಕೆ ಡ್ಯಾನ್ಸ್ ಮಾಡುವಂತ ಸಂದೇಶ ರವಾನಿಸಿದ್ದಾರೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಕೊರೊನಾ ಬಂದರೆ ಭಯ ಬೇಡ; ಡ್ಯಾನ್ಸ್ ಮಾಡಿ ವಿಡಿಯೋ ಹಂಚಿಕೊಳ್ಳಿ, ಖುಷಿಯಾಗಿರಿ ಎಂದು ಧೈರ್ಯ ತುಂಬಿದ ಸೋಂಕಿತ ಪೇದೆ
ಧೈರ್ಯ ತುಂಬಿದ ಸೋಂಕಿತ ಪೇದೆ
Follow us
ಆಯೇಷಾ ಬಾನು
|

Updated on: May 07, 2021 | 11:57 AM

ಬೆಂಗಳೂರು: ಕೊರೊನಾ ಎರಡನೇ ಅಲೆಗೆ ಇಡೀ ಭಾರತ ಕುಸಿದುಕುಳಿತಿದೆ. ಅದರಲ್ಲೂ ರಾಜಧಾನಿ ಬೆಂಗಳೂರಿನಲ್ಲಿ ಸೋಂಕಿತರು ನರಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಆಸ್ಪತ್ರೆಗಳು ಫುಲ್ ಆಗಿವೆ. ಬೆಡ್, ಆಕ್ಸಿಜನ್ ಇಲ್ಲದೆ ಜನ ಸಾಯುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಕೊರೊನಾ ಸೋಂಕಿತರು ಆತ್ಮಸೈರ್ಯ ಕಳೆದುಕೊಳ್ಳುತ್ತಿದ್ದಾರೆ. ಕೊರೊನಾ ಬಂದರೆ ಮುಂದೆ ಸಾವು ಖಚಿತವೆಂಬಂತೆ ಭಾವಿಸುತ್ತಿದ್ದಾರೆ. ಇದರ ನಡುವೆ ಸೋಂಕಿತ ಪೇದೆ ಮನೆಯಿಂದಲೇ ಕುಳಿದು ಕುಪ್ಪಳಿಸುವ ಮೂಲಕ ಸೋಂಕಿತರಿಗೆ ಧೈರ್ಯ ತುಂಬುವ ಪ್ರಯತ್ನ ಪಟ್ಟಿದ್ದಾರೆ.

ಸದ್ಯ ನಮಗೆ ಕಷ್ಟದ ದಿನಗಳು ಎದುರಾಗಿವೆ. ಆದ್ರೆ ಇದು ಶಾಶ್ವತವಲ್ಲ. ಈಗ ಬಂದಿರುವ ಕಷ್ಟಗಳನ್ನು ಹಿಮ್ಮೆಟ್ಟಿಸಿ ಮುಂದೆ ನುಗ್ಗಬೇಕು. ದೇವನಹಳ್ಳಿ ಸಂಚಾರಿ ಪೊಲೀಸ್ ಸಿಬ್ಬಂದಿ ಕೊರೊನಾಗೆ ತುತ್ತಾಗಿದ್ದು ಕಳೆದ ಐದು ದಿನಗಳಿಂದ ಹೋಂ ಐಸೋಲೇಷನ್ ಆಗಿದ್ದಾರೆ. ಕೊರೊನಾ ಪಾಸಿಟಿವ್ ಬಂದರೆ ಭಯ ಪಡಬೇಡಿ, ಚಿಲ್ ಆಗಿರಿ ಎಂದು ಸಾರುತ್ತಾ ಆತ್ಮಸ್ಥೈರ್ಯಕ್ಕೆ ಮನೆಯಲ್ಲೆ ಡ್ಯಾನ್ಸ್ ಮಾಡಿದ್ದಾರೆ. ಸೋಂಕಿನಿಂದ ಭಯಭೀತರಾಗದೆ ಹೋಂ ಐಸೋಲೇಷನ್ ಆಗಿ… ಕಾಲಹರಣಕ್ಕೆ ಡ್ಯಾನ್ಸ್ ಮಾಡುವಂತ ಸಂದೇಶ ರವಾನಿಸಿದ್ದಾರೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸೋಂಕಿತ ಪೇದೆ ಮನೆಯಲ್ಲೇ ಚಿಕಿತ್ಸೆ ಪಡೆದುಕೊಂಡು ಮಗಳ ಜೊತೆ ಡ್ಯಾನ್ಸ್ ಮಾಡುವ ಮೂಲಕ ಸೋಂಕಿತರು ಭಯ ಪಡದೆ ಖುಷಿಯಾಗಿರುವಂತೆ ಸಲಹೆ ನೀಡಿದ್ದಾರೆ. ಮಗಳಿಗೆ ಕೊರೊನಾ ಬಂದಿದ್ದರೂ ಭಯದಿಂದ ಇರದಂತೆ, ಪ್ರತಿದಿನ ಡ್ಯಾನ್ಸ್ ಮಾಡಿ ಇತರರಿಗೆ ವಿಡಿಯೋ ರವಾನೆ ಮಾಡಿ ಆತ್ಮ ಸ್ಥೈರ್ಯ ಹೆಚ್ಚಿಸಿಕೊಳ್ಳಲು ಸಲಹೆ ನೀಡಿದ್ದಾರೆ. ಇದೀಗ ಪೊಲೀಸ್ ಸಿಬ್ಬಂದಿಯ ಸಂದೇಶದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಮೆಚ್ಚುಗೆಗೆ ಪಾತ್ರವಾಗಿದೆ.

ಇದನ್ನೂ ಓದಿ: ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಮತ್ತೆ 20 ಕೊರೊನಾ ಸೋಂಕಿತರು ಮೃತ; ನಿಲ್ಲದ ಸರಣಿ ಸಾವು