Karnataka Lockdown: ಕರ್ನಾಟಕ ಲಾಕ್​ಡೌನ್​; ಕೊರೊನಾ ತಡೆಗೆ ಮೇ 10ರಿಂದ 24ರವರೆಗೆ ಇನ್ನಷ್ಟು ಬಿಗಿ ಕ್ರಮ

Karnataka Lockdown News: ಲಾಕ್​ಡೌನ್​ ವೇಳೆಯಲ್ಲಿ ಬೆಳಗ್ಗೆ 6 ಗಂಟೆಯಿಂದ 10 ಗಂಟೆಯವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿದ್ದು, 10 ಗಂಟೆಯ ಬಳಿಕ ಯಾರೂ ಹೊರಗೆ ಓಡಾಡುವಂತಿಲ್ಲ ಎಂದು ಆದೇಶಿಸಲಾಗಿದೆ. ಅಗತ್ಯ ವಸ್ತುಗಳ ಸರಬರಾಜಿಗೆ ಗೂಡ್ಸ್ ವಾಹನಗಳ ಓಡಾಟ ಇರಲಿದ್ದು, ಆನ್‌ಲೈನ್ ಡೆಲಿವರಿ ಸರ್ವಿಸ್‌ಗೂ ಅವಕಾಶ ನೀಡಲಾಗಿದೆ.

Karnataka Lockdown: ಕರ್ನಾಟಕ ಲಾಕ್​ಡೌನ್​; ಕೊರೊನಾ ತಡೆಗೆ ಮೇ 10ರಿಂದ 24ರವರೆಗೆ ಇನ್ನಷ್ಟು ಬಿಗಿ ಕ್ರಮ
ಲಾಕ್​ಡೌನ್​


ಕರ್ನಾಟದಲ್ಲಿ ಕೊರೊನಾ ಎರಡನೇ ಅಲೆ ಅಬ್ಬರ ಹೆಚ್ಚಾಗಿರುವ ಕಾರಣ ಸೋಂಕು ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಸಂಪೂರ್ಣ ಲಾಕ್​ಡೌನ್​ ಮೊರೆ ಹೋಗಿದೆ. ಈ ಬಗ್ಗೆ ಅಧಿಕೃತ ಘೋಷಣೆ ಮಾಡಿರುವ ರಾಜ್ಯ ಸರ್ಕಾರ ಮೇ 10ರಿಂದ ಮೇ 24ರ ತನಕ ಲಾಕ್​ಡೌನ್​ ಮಾಡಲಾಗುವುದು ಎಂದು ತಿಳಿಸಿದೆ. ರಾಜ್ಯದಲ್ಲಿ ಸಾವು-ನೋವುಗಳನ್ನು ತಡೆಗಟ್ಟಬೇಕೆಂದರೆ ಲಾಕ್​ಡೌನ್​ ಮಾಡಲೇಬೇಕೆಂದು ತಜ್ಞರು ಕೂಡಾ ಮೇಲಿಂದ ಮೇಲೆ ಎಚ್ಚರಿಕೆ ನೀಡಿದ್ದು, ಇಂದು (ಮೇ 7) ಬೆಳಗ್ಗೆ ನಿಯಮಪಾಲನೆ ಬಗ್ಗೆ ಮಾತನಾಡಿದ್ದ ಮುಖ್ಯಮಂತ್ರಿಗಳು ಕಠಿಣ ನಿಯಮ ಜಾರಿಗೊಳಿಸುವ ಬಗ್ಗೆ ಸುಳಿವು ಬಿಟ್ಟುಕೊಟ್ಟಿದ್ದರು. ಇದೀಗ 14 ದಿನಗಳ ಕಾಲ ಸಂಪೂರ್ಣ ಲಾಕ್​ಡೌನ್​ ಘೋಷಿಸಲಾಗಿದೆ.

ಲಾಕ್​ಡೌನ್​ ವೇಳೆಯಲ್ಲಿ ಬೆಳಗ್ಗೆ 6 ಗಂಟೆಯಿಂದ 10 ಗಂಟೆಯವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿದ್ದು, 10 ಗಂಟೆಯ ಬಳಿಕ ಯಾರೂ ಹೊರಗೆ ಓಡಾಡುವಂತಿಲ್ಲ ಎಂದು ಆದೇಶಿಸಲಾಗಿದೆ. ಅಗತ್ಯ ವಸ್ತುಗಳ ಸರಬರಾಜಿಗೆ ಗೂಡ್ಸ್ ವಾಹನಗಳ ಓಡಾಟ ಇರಲಿದ್ದು, ಆನ್‌ಲೈನ್ ಡೆಲಿವರಿ ಸರ್ವಿಸ್‌ಗೂ ಅವಕಾಶ ನೀಡಲಾಗಿದೆ. 14 ದಿನಗಳ ಕಾಲ ರಾಜ್ಯದಲ್ಲಿ ಲಾಕ್‌ಡೌನ್ ಮಾಡಿರುವುದರಿಂದ ಪ್ಯಾಕೇಜ್, ನೆರವು ನೀಡುವ ಬಗ್ಗೆ ಹಂತ ಹಂತವಾಗಿ ತೀರ್ಮಾನ ಕೈಗೊಳ್ಳಲಾಗುವುದು ಎಂಬುದನ್ನೂ ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.

ಕೊರೊನಾ ಸೋಂಕಿತರ ಸಂಖ್ಯೆ ಹಾಗೂ ಮರಣ ಪ್ರಮಾಣ ಎರಡೂ ಏರುಗತಿಯಲ್ಲೇ ಸಾಗುತ್ತಿರುವುದರಿಂದ ಇಷ್ಟು ದಿನ ಲಾಕ್​ಡೌನ್​ ಬಗ್ಗೆ ಒಲವು ಹೊಂದಿರದಿದ್ದ ರಾಜ್ಯ ಸರ್ಕಾರ ಈಗ ಅನಿವಾರ್ಯವಾಗಿ ಆ ನಿರ್ಧಾರಕ್ಕೆ ಕೈ ಹಾಕಬೇಕಾಗಿದೆ.

ಮುಖ್ಯಮಂತ್ರಿ ಘೋಷಣೆಯ ಮುಖ್ಯ ಅಂಶಗಳು
– ಮೇ 10ರಿಂದ ರಾಜ್ಯಾದ್ಯಂತ ಸಂಪೂರ್ಣ ಲಾಕ್​ಡೌನ್ ಜಾರಿ
– ಬೆಂಗಳೂರಿನಲ್ಲಿ ಸಿಎಂ B.S.ಯಡಿಯೂರಪ್ಪ ಘೋಷಣೆ
– ಅಗತ್ಯ ವಸ್ತುಗಳ ಖರೀದಿಗೆ ಬೆಳಗ್ಗೆ 10ರವರೆಗೆ ಅವಕಾಶ
– ಹಣ್ಣು, ಮಾಂಸ, ತರಕಾರಿ ಅಂಗಡಿ ಓಪನ್ ಇರಲಿವೆ
– ಹಾಲಿನ ಅಂಗಡಿ ಬೆಳಗ್ಗೆಯಿಂದ ಸಂಜೆ 6ರವರೆಗೆ ಓಪನ್
– ತಳ್ಳುವಗಾಡಿಯಲ್ಲಿ ತರಕಾರಿ ಮಾರಾಟಕ್ಕೆ ಅವಕಾಶ
– ಸರ್ಕಾರಿ ಕಚೇರಿ ಭಾಗಶಃ ಕಾರ್ಯನಿರ್ವಹಣೆ
– ರಸ್ತೆ ಕಾಮಗಾರಿ, ನಿಗದಿತ ಕಟ್ಟಡ ನಿರ್ಮಾಣಕ್ಕೆ ಅವಕಾಶ
– ಕಾರ್ಮಿಕರನ್ನು ಬಳಸಿ ನಿರ್ಮಾಣ ಕಾರ್ಯಕ್ಕೆ ಅವಕಾಶ
– ವಿವಾಹ ಸಮಾರಂಭದಲ್ಲಿ ಕೇವಲ 50 ಜನರಿಗೆ ಅವಕಾಶ
– ಅತ್ಯವಶ್ಯಕ ವಸ್ತುಗಳ ಸಾಗಾಟಕ್ಕೆ ಅವಕಾಶ ಕಲ್ಪಿಸಲಾಗಿದೆ
– ಕಾರ್ಮಿಕರು ಬೆಂಗಳೂರು ತೊರೆಯಬಾರದು, ಭಯಪಡುವ ಅಗತ್ಯವಿಲ್ಲ
– ಕೈಗಾರಿಕಾ ಚಟುವಟಿಕೆಗೆ ನಿಷೇಧ ಹೇರಲಾಗಿದೆ
– ಒಬ್ಬ ವ್ಯಕ್ತಿಯನ್ನ ಕೂಡ ರಸ್ತೆಯಲ್ಲಿ ಓಡಾಡಲು ಬಿಡಲ್ಲ, ಜನರು ಹೇಗೆ ಸಹಕಾರ ಕೊಡ್ತಾರೆ ಅಂದ ಕೆಲವು ದಿನ ನೋಡ್ತೇವೆ
– ಇನ್ನೂ ಬಿಗಿ ಮಾಡಬೇಕು ಅನ್ನಿಸಿದರೆ ಮಾಡಲು ಸಿದ್ಧ
– ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡೋದು ಜನರ ಕರ್ತವ್ಯ

(Karnataka imposes full lockdown across the state from 10th May to 24th says government)

ಇದನ್ನೂ ಓದಿ: ಸರ್ಕಾರದ ವಿಫಲ ಕಾರ್ಯನೀತಿ, ಜನರ ಅಸಹಕಾರ: ಕೊರೊನಾ ಬೆಂಗಳೂರಿಗರನ್ನು ಹೇಗೆ ಕಾಡುತ್ತಿದೆ ನೋಡಿ, ಇಲ್ಲಿದೆ ಸಂಪೂರ್ಣ ವಿವರ

ಇದನ್ನೂ ಓದಿ: ಜನರ ಸಾವು ನೋವು ಆಗಬಾರದೆಂದರೆ ಲಾಕ್‌ಡೌನ್ ಬೇಕು: ಆರೋಗ್ಯ ಸಚಿವ ಡಾ.ಕೆ.ಸುಧಾಕರ್

Read Full Article

Click on your DTH Provider to Add TV9 Kannada