ಉಡುಪಿ: ಹೊಸ ವರ್ಷಕ್ಕೆ ಶುಭ ಕೋರಿ ರಸ್ತೆಯಲ್ಲಿ ಬರೆಯುತ್ತಿರುವ ವೇಳೆ ಅಪಘಾತ ಸಂಭವಿಸಿದ್ದು, ಇಬ್ಬರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಉಡುಪಿ ಜಿಲ್ಲೆಯ ಕಾರ್ಕಳದ ಮೀಯಾರು ಕಾಜರಬೈಲು ಬಳಿ ನಡೆದಿದೆ.
ಹ್ಯಾಪಿ ನ್ಯೂ ಇಯರ್ ಎಂದು ನಿನ್ನೆ ತಡರಾತ್ರಿ ರಸ್ತೆಯಲ್ಲಿ ಬರೆಯುವಾಗ, ಕಾಜರಬೈಲು ಬಳಿ ಈಕೋ ಕಾರು ಡಿಕ್ಕಿ ಹೊಡೆದು ಈ ದುರ್ಘಟನೆ ನಡೆದಿದ್ದು, ಬಾಗಲಕೋಟೆ ಮೂಲದ ಶರಣ್ (32), ಸಿದ್ದು(28) ಮೃತಪಟ್ಟಿದ್ದಾರೆ. ಮೃತರು ಜೆಸಿಬಿ, ಟಿಪ್ಪರ್ ಚಾಲಕರಾಗಿ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದ್ದು, ಸದ್ಯ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸ್ನೇಹಿತನ ಜತೆ ನ್ಯೂ ಇಯರ್ ಪಾರ್ಟಿಗೆ ತೆರಳಿದ್ದ ಯುವಕ ನಿಗೂಢ ಸಾವು
Published On - 11:32 am, Fri, 1 January 21