ಬಾಗಲಕೋಟೆ: ಗೆಳೆಯನ ಹುಟ್ಟುಹಬ್ಬ ಆಚರಿಸಿ ವಾಪಸ್​ ಬರುವಾಗ ರಸ್ತೆ ಅಪಘಾತ; ನಾಲ್ವರ ದುರ್ಮರಣ

ಗೆಳೆಯನ ಹುಟ್ಟು ಹಬ್ಬ ಮುಗಿಸಿ ಮನೆಗೆ ವಾಪಸ್​ ಹಿಂತಿರುಗುವಾಗ ಲಾರಿ ಹಿಂಬದಿಯಿಂದ ಬಂದು ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಮರಣ ಹೊಂದಿರುವ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.

ಬಾಗಲಕೋಟೆ: ಗೆಳೆಯನ ಹುಟ್ಟುಹಬ್ಬ ಆಚರಿಸಿ ವಾಪಸ್​ ಬರುವಾಗ ರಸ್ತೆ ಅಪಘಾತ; ನಾಲ್ವರ ದುರ್ಮರಣ
ಅಪಘಾತ

Updated on: Mar 29, 2021 | 10:22 AM

ಬಾಗಲಕೋಟೆ: ಗೆಳೆಯರ ಹುಟ್ಟುಹಬ್ಬ ಆಚರಿಸಿ ವಾಪಸ್​ ಬರುವಾಗ ಕಾರಿಗೆ ಹಿಂಬದಿಯಿಂದ ಲಾರಿ ಬಂದು ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ದುರ್ಮರಣ ಹೊಂದಿರುವ ಘಟನೆ ನಡೆದಿದೆ. ಬೇವಿನಮಟ್ಟಿ ಬಳಿ ದುರ್ಘಟನೆ ನಡೆದಿದ್ದು, ಕಾರಿನ ಚಾಲಕನಿಗೆ ಗಂಭೀರ ಗಾಯವಾಗಿದೆ. ಹತ್ತಿರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಐವರು ಕಾರಿನಲ್ಲಿ ಸ್ನೇಹಿತನ ಹುಟ್ಟುಹಬ್ಬ ಆಚರಿಸಲು ತೆರಳಿದ್ದರು. ಹಿಂಬರುವಾಗ ಬಾಗಲಕೋಟೆಯಿಂದ ಹುನಗುಂದ ಮಾರ್ಗವಾಗಿ ಹೊರಟಿದ್ದರು. ಹುನಗುಂದ ತಾಲ್ಲೂಕಿನ ಬೇವಿನಮಟ್ಟಿ ಕ್ರಾಸ್ ಬಳಿ ಹಿಂಬದಿಯಿಂದ ವೇಗವಾಗಿ ಬಂದ ಲಾರಿ ಕಾರಿಗೆ ಡಿಕ್ಕಿ ಹೊಡೆದಿದೆ. ಈ ಪರಿಣಾಮವಾಗಿ ಕಾರಿನಲ್ಲಿದ್ದ ಚಂದ್ರಶೇಖರ್(30), ಬಸವರಾಜ(32), ನವೀನ ಸಾಕಾ(40) ಹಾಗೂ ಚೆನ್ನಬಸವ ಅಂಜಿ(22) ಮರಣ ಹೊಂದಿದ್ದಾರೆ. ಕಾರಿನ ಚಾಲಕ ವಿಜಯ ಬಂಡಿಗೆ ಗಂಭೀರ ಗಾಯವಾಗಿದೆ. ಡಿಕ್ಕಿ ಹೊಡೆದ ಲಾರಿ ಚಾಲಕ ಲಾರಿ ಸಮೇತ ಪರಾರಿಯಾಗಿದ್ದಾನೆ.

ಗಾಯಾಳು ವಿಜಯ ಬಂಡಿ ಹಾಗೂ ಮರಣ ಹೊಂದಿದ ನಾಲ್ವರು ಇಳಿಕಲ್​ ನಗರದವರು ಎಂಬುದು ತಿಳಿದು ಬಂದಿದೆ. ಗಾಯಾಳುವನ್ನು ಜಿಲ್ಲೆಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹುನಗುಂದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಲಾರಿ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.

ಇದನ್ನೂ ಓದಿ: ಮಂಗಳೂರು ಮೈಸೂರಿನಲ್ಲಿ ಪ್ರತ್ಯೇಕ ಅಪಘಾತ.. ಕುಡಿದ ಮತ್ತಿನಲ್ಲಿ BSNLನ ನಿವೃತ್ತ ಉದ್ಯೋಗಿ ಮೇಲೆ ಕಾರು ಹತ್ತಿಸಿದ ಪಿಡಬ್ಲ್ಯುಡಿ ಎಇಇ

ದಾಮರದುರ್ಗಂ ಬಳಿ ಅಪಘಾತ; ಲಾರಿ, ಟೆಂಪೊ ನಡುವೆ ಡಿಕ್ಕಿಯಾಗಿ 8 ಜನರ ಸಾವು

Published On - 10:21 am, Mon, 29 March 21