DK Shivakumar Temple Run; ಬೆಳಗಾವಿ ಬೈ ಎಲೆಕ್ಷನ್, ಸತೀಶ್ ಜಾರಕಿಹೊಳಿ ನಾಮ ಪತ್ರ ಸಲ್ಲಿಕೆಗೆ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಭರ್ಜರಿ ತಯಾರಿ
ಡಿ.ಕೆ.ಶಿವಕುಮಾರ್ ಬೆಳಗಾವಿ ನಗರದ ವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಡಿ.ಕೆ.ಶಿವಕುಮಾರ್‌ಗೆ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಸಾಥ್ ನೀಡಿದ್ರು. ಈ ವೇಳೆ ಮಾತನಾಡಿದ ಡಿಕೆಶಿ ಎಲ್ಲ ವಿಘ್ನಗಳನ್ನು ನಿವಾರಣೆ ಮಾಡುವ ದೇವರು ವಿನಾಯಕ. ರಾಜ್ಯ, ರಾಷ್ಟ್ರದಲ್ಲಿ ವಿಘ್ನ ನಿವಾರಣೆಯಾಗಲಿ ಅಂತಾ ಪೂಜೆ ಮಾಡಿದ್ದೇವೆ.....
ಬೆಳಗಾವಿ: ಏಪ್ರಿಲ್ 17ರಂದು ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆ ಇನ್ನೇನು ಕೆಲವೇ ಕ್ಷಣದಲ್ಲಿ ಸತೀಶ್ ಜಾರಕಿಹೊಳಿ ನಾಮಪತ್ರ ಸಲ್ಲಿಸಲಿದ್ದಾರೆ. ಈ ನಡುವೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಬೆಳಗಾವಿಗೆ ಆಗಮಿಸಿದ್ದು ಚುನಾವಣೆಯ ಸಿದ್ದತೆಯಲ್ಲಿ ತೊಡಗಿಕೊಂಡಿದ್ದಾರೆ. ಇನ್ನು ನಿನ್ನೆ ಹಲಗಾ ಗ್ರಾಮದ ಬಾಲಾಲ ಆಚಾರ್ಯ ಸಿದ್ಧಸೇನಾ ಮುನಿಯವರನ್ನು ಭೇಟಿ ಮಾಡಿ ಜೈನ ಮುನಿಗಳಿಂದ ಆಶೀರ್ವಾದ ಪಡೆದಿದ್ದಾರೆ. ವಿರೋಧಿಗಳು ಹೆಚ್ಚಾದಂತೆ ನೀವು ಬೆಳತ್ತೀರಿ, ಸಿಎಂ ಆಗ್ತಿರಿ. ನೀವು ಕನಕಪುರದ ಬಂಡೆ, ಕಲ್ಲನ್ನು ಕಟಿದು ಕಟಿದು ಮೂರ್ತಿ ಆಗಿದೆ. ವಿರೋಧಿಗಳು ಎಷ್ಟು ಹೆಚ್ಚಾಗ್ತಾರೆ ಅಷ್ಟು ಮೂರ್ತಿ ಆಗ್ತಿರಿ. ಅಂದರೇ ರಾಜ್ಯದ ಸಿಎಂ ಆಗುತ್ತೀರಿ ಎಂದು ಜೈನ ಮುನಿಗಳು ಆಶೀರ್ವಾದ ಮಾಡಿದ್ದಾರೆ.
ನನಗೆ ಎಲ್ಲಾ ಧರ್ಮದಲ್ಲಿಯೂ ನಂಬಿಕೆ ಇದೆ ನನಗೆ ಎಲ್ಲಾ ಧರ್ಮದಲ್ಲಿಯೂ ನಂಬಿಕೆ ಇದೆ. ಜೈನ ಧರ್ಮಕ್ಕೂ ಕಾಂಗ್ರೆಸ್ ಪಕ್ಷಕ್ಕೂ ಬಹಳ ನಂಟಿದೆ. ಹಸ್ತದ ಗುರುತು ಜೈನ ಧರ್ಮದ ಗುರುಗಳ ನೀಡಿದ್ದರು. ಜೈನ ಧರ್ಮಕ್ಕೆ ಪ್ರತ್ಯೇಕ ಧರ್ಮದ ಸ್ಥಾನಮಾನ ಯುಪಿಎ ಸಮಯದಲ್ಲಿ ನೀಡಲಾಗಿತ್ತು. ನಾನು ಮುಖ್ಯಮಂತ್ರಿ ಆಗೋದು ಮುಖ್ಯ ಅಲ್ಲ. ನನಗೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರೋದು ಮುಖ್ಯ. ನಮ್ಮ ಪಕ್ಷಕ್ಕೆ ಅವರ ಆಶೀರ್ವಾದ ಮುಖ್ಯ ಇದ್ದು, ಪಡೆದಿದ್ದೇನೆ ಎಂದು ಡಿಕೆಶಿ ಜೈನ ಮುನಿಗಳ ಆಶೀರ್ವಾದ ಪಡೆದು ಬಂದ ನಂತರ ಈ ರೀತಿ ಹಂಚಿಕೊಂಡಿದ್ದಾರೆ.
ಇನ್ನು ಡಿ.ಕೆ.ಶಿವಕುಮಾರ್ ಬೆಳಗಾವಿ ನಗರದ ವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಡಿ.ಕೆ.ಶಿವಕುಮಾರ್‌ಗೆ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಸಾಥ್ ನೀಡಿದ್ರು. ಈ ವೇಳೆ ಮಾತನಾಡಿದ ಡಿಕೆಶಿ ಎಲ್ಲ ವಿಘ್ನಗಳನ್ನು ನಿವಾರಣೆ ಮಾಡುವ ದೇವರು ವಿನಾಯಕ. ರಾಜ್ಯ, ರಾಷ್ಟ್ರದಲ್ಲಿ ವಿಘ್ನ ನಿವಾರಣೆಯಾಗಲಿ ಅಂತಾ ಪೂಜೆ ಮಾಡಿದ್ದೇವೆ. ನಮ್ಮ ಅಭ್ಯರ್ಥಿ ಗೆಲ್ಲಲಿ ಅಂತಾ ಪೂಜೆ ಮಾಡಿದ್ದೇವೆ. ವಿಜಯಕ್ಕೆ ನಾಯಕ ವಿನಾಯಕ ಅಂಥ ದೇವರಿಗೆ ಪೂಜೆ ಸಲ್ಲಿಸಿದ್ದೇನೆ. ಬೆಲೆ ಏರಿಕೆಯಾಗಿ ರಾಜ್ಯದಲ್ಲಿ ಜನರಿಗೆ ದೊಡ್ಡ ತೊಂದರೆಯಾಗಿದೆ. ಎಲ್ಲ ವರ್ಗದ ಜನರು ಬೆಲೆ ಏರಿಕೆಯಿಂದ ಸಂಕಷ್ಟದಲ್ಲಿದ್ದಾರೆ. ಈ ಸಂಕಷ್ಟ ನಿವಾರಣೆಯಾಗಬೇಕಿದೆ. ಅದನ್ನೇ ದೇವರಲ್ಲಿ ಪ್ರಾರ್ಥಿಸಿಕೊಂಡಿರುವೆ. ಉಪ ಚುನಾವಣೆಯ ಎಲ್ಲ ಕ್ಷೇತ್ರಗಳಲ್ಲಿ ಗೆಲುವು ಸಿಗಲಿ ಅಂತಾ ಪ್ರಾರ್ಥಿಸಿದ್ದೇನೆ. ದೇಶದಲ್ಲಿ ಮಾಧ್ಯಮ ಮತ್ತು ಪ್ರಜಾಪ್ರಭುತ್ವ ಎರಡೂ ಉಳಿಯಬೇಕು ಎಂದು ಹೇಳಿದ್ರು.
ಇದನ್ನೂ ಓದಿ: ಬೆಳಗಾವಿ ಲೋಕಸಭಾ ಕ್ಷೇತ್ರದ ಬೈಎಲೆಕ್ಷನ್: ದಿ.ಸುರೇಶ್ ಅಂಗಡಿ ಪತ್ನಿಗೆ ಬಿಜೆಪಿ ಟಿಕೆಟ್
Published On - 10:24 am, Mon, 29 March 21