ತುಮಕೂರು: ಶಿಕ್ಷಣ ಸಚಿವ ಬಿ.ಸಿ ನಾಗೇಶ್ (BC Nagesh) ಮನೆಗೆ ಮುತ್ತಿಗೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ಎಸ್ಯುಐ (NSUI) ಅಧ್ಯಕ್ಷ ಸೇರಿದಂತೆ ಕಾರ್ಯಕರ್ತರಿಗೆ ಜಿಲ್ಲೆಯ ತಿಪಟೂರಿನ JMFC ಕೋರ್ಟ್ ಜಾಮೀನು ನೀಡಿದೆ. NSUI ಅಧ್ಯಕ್ಷ ಕೀರ್ತಿ ಗಣೇಶ್ ಸೇರಿದಂತೆ 24 ಜನರಿಗೆ ಜಾಮೀನು ನೀಡಲಾಗಿದೆ. ತುಮಕೂರು ಜಿಲ್ಲಾ ಕಾರಾಗೃಹದಲ್ಲಿರುವ NSUI ಕಾರ್ಯಕರ್ತರು, ನಾಳೆ (ಮೇ 9) ರಂದು ಬಿಡುಗಡೆಯಾಗುವ ಸಾಧ್ಯತೆ ಇದೆ.
ಶಿಕ್ಷಣ ಸಚಿವ ನಾಗೇಶ್ ಮನೆಗೆ ಮುತ್ತಿಗೆ ಹಾಕಿದ ಪ್ರಕರಣ
ಜೂನ್ 1 ರಂದು ತುಮಕೂರಿನ ತಿಪಟೂರಿನಲ್ಲಿರುವ ಶಿಕ್ಷಣ ಸಚಿವ ಬಿಸಿ ನಾಗೇಶ್ ಅವರ ಮನೆಗೆ NSUI ಕಾರ್ಯಕರ್ತರು ಮುತ್ತಿಗೆ ಹಾಕಿದ್ದರು. ಕಾರಣ ರೋಹಿತ್ ಚಕ್ರತೀರ್ತ ನೇತೃತ್ವದಲ್ಲಿ ಪಠ್ಯ ಪುಸ್ತಕ ಪರಿಷ್ಕರಣೆ ಮಾಡಿದ್ದನ್ನು ವಿರೋದಿಸಿ NSUI ಕಾರ್ಯಕರ್ತರು ಸಚಿವರ ಮನೆಗೆ ಮುತ್ತಿಗೆ ಹಾಕಿ ಅವರ ಮನೆ ಮುಂದೆ RSS ಚಡ್ಡಿಯನ್ನು ಸುಡಲು ಯತ್ನಿಸಿದ್ದರು.
ಇದನ್ನು ಓದಿ: ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಮನೆಗೆ ಮುತ್ತಿಗೆ ಪ್ರಕರಣ; ಮುತ್ತಿಗೆ ಹಾಕಿದ್ದ ಕೆಲ NSUI ಕಾರ್ಯಕರ್ತರನ್ನು ಬಂಧಿಸಿದ ಪೊಲೀಸರು
ನಂತರ ಸುದ್ದಿಗೋಷ್ಟಿ ನಡೆಸಿದ ಗೃಹ ಸಚಿವ ಆರಗ ಇವತ್ತು ಮಧ್ಯಾಹ್ನ ಬಿಸಿ ನಾಗೇಶ್ ಅವರ ತಿಪಟೂರಿನಲ್ಲಿರುವ ಮನೆಗೆ ನುಗ್ಗಿದ್ದಾರೆ. ನನಗೆ ಬಂದ ಮಾಹಿತಿ ಪ್ರಕಾರ ನಾಗೇಶ್ ಮನೆಗೆ ಬೆಂಕಿ ಹಾಕೋದಿಕ್ಕೆ ಮುಂದಾಗಿದ್ರು ಅನ್ನೋ ಮಾಹಿತಿ ಇದೆ. ಈಗಾಗಲೇ 15 ಜನರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹಾಗೂ ಎರಡು ವಾಹನಗಳನ್ನ ವಶಕ್ಕೆ ಪಡೆದಿದ್ದಾರೆ. ಈ ರೀತಿಯಾದ ಗುಂಡಾ ವರ್ತನೆ ನಮ್ಮಲ್ಲಿ ನಡೆಯಲ್ಲಾ ಎಂದು ಕಿಡಿ ಕಾರಿದ್ದರು. ನಂತರ NSUI ಅಧ್ಯಕ್ಷ ಸೇರಿದಂತೆ 24 ಕಾರ್ಯಕರ್ತರನ್ನು ಪೊಲೀರು ಬಂಧಿಸಿದ್ದರು
ನಂತರ NSUI ಕಾರ್ಯಕರ್ತರ ಮೇಲೆ ಹಲ್ಲೆ ಆರೋಪ ಕೇಳಿ ಬಂದಿತ್ತು. ತಿಪಟೂರಿನ ಕೋರ್ಟ್ ಮುಂಭಾಗ ಟೀ ಕುಡಿಯುತ್ತಿದ್ದಾಗ NSUI ಕಾರ್ಯಕರ್ತರ ಮೇಲೆ BJP ಕಾರ್ಯಕರ್ತರ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ಸ್ಥಳಕ್ಕೆ ಭೇಟಿ ನೀಡದ ತಿಪಟೂರು ಠಾಣೆ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿದ್ದರು.
ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ