ಕಲಬುರಗಿ: ಹೊಟ್ಟೆ ತುಂಬಾ ಮೇಯೋದು, ಜಾಗ ಸಿಕ್ಕಲ್ಲಿ ಮಲಗೋದು. ಹೀಗೆ ಜಿಲ್ಲೆಯಲ್ಲಿ ಜಾನುವಾರು ಎಲ್ಲೆಂದ್ರಲ್ಲೇ ಠಿಕಾಣಿ ಹೂಡ್ತಿದ್ವು. ಆದ್ರೆ ಕೆಲ ದಿನಗಳಿಂದ ಕತ್ತಲು ಕಳೆದು ಬೆಳಗಾಗುವಷ್ಟ್ರಲ್ಲಿ ಕೆಲವು ಮಾಯವಾಗ್ತಿದ್ವು. ಅರೆ ಏನಾಗ್ತಿದೆ ಅಂತಾ ತಲೆ ಕೆಡಿಸಿಕೊಂಡವ್ರಿಗೆ ಸಿಸಿಟಿವಿ ಹೇಳಿದ್ದು ಭಯಾನಕ ಸತ್ಯ.
ಜಾನುವಾರು ಕಳ್ಳರ ಅಟ್ಟಹಾಸ
ಅಚ್ಚರಿ ಅನ್ಸಿದ್ರೂ ಇದೇ ಸತ್ಯ. ಇತ್ತೀಚೆಗೆ ಚಿನ್ನಾಭರಣ ಕಳ್ಳತನ, ಮನೆಗಳ್ಳತನ ಪ್ರಕರಣ, ದರೋಡೆಗಳು ಹೆಚ್ಚಾಗ್ತಿತ್ತು. ಆದ್ರೀಗ ಅದ್ರ ಲಿಸ್ಟ್ಗೆ ಜಾನುವಾರು ಕಳ್ಳತನ ಕೂಡ ಸೇರ್ಪಡೆಯಾಗ್ತಿದೆ. ಅದೂ ಕೂಡ ಸ್ಕಾರ್ಪಿಯೋ ಕಾರಿನಲ್ಲೇ ಬಂದು ಕಳ್ಳತನ ಮಾಡ್ತಿದ್ದಾರೆ ಅನ್ನೋದು ಇಂಟ್ರೆಸ್ಟಿಂಗ್. ಕಾರ್ನಲ್ಲಿ ಬರೋ ಖದೀಮರು ರಸ್ತೆ ಪಕ್ಕದಲ್ಲಿ ಮಲಗಿದ್ದ ಜಾನುವಾರು ಕದ್ದೊಯ್ದಿದ್ದಾರೆ.
ಕಲಬುರಗಿ ನಗರದ ಶಹಬಾದ್ ಪಟ್ಟಣದಲ್ಲಿ ಬೆಳಗಿನ ಜಾವ 3 ಗಂಟೆ ವೇಳೆ ಹಸುವನ್ನ ತಮ್ಮ ಕಾರಿನಲ್ಲಿ ಹಾಕಿಕೊಂಡು ಹೋಗಿರೋ ದೃಶ್ಯ ಸೆರೆಯಾಗಿದೆ. ಮಹಾರಾಷ್ಟ್ರ ಮತ್ತು ತೆಲಂಗಾಣ ರಾಜ್ಯದಿಂದ ಕಾರ್ನಲ್ಲಿ ಬರೋ ಕಳ್ಳರು ಕೃತ್ಯ ಎಸಗುತ್ತಿದ್ದಾರೆ ಎನ್ನಲಾಗಿದೆ.
ರಸ್ತೆಯಲ್ಲಿರುವ ಬಿಡಾಡಿ ದನಗಳನ್ನೂ ಬಿಡ್ತಿಲ್ಲ:
ಸದ್ಯ ಜಾನುವಾರು ಕಳ್ಳತನದ ಬಗ್ಗೆ ಶಹಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಒಟ್ನಲ್ಲಿ ಖದೀಮರು ದೇವರನ್ನೂ ಬಿಡ್ತಿಲ್ಲ. ದೇವರ ಸಮಾನ ಅಂತಾ ನಂಬಿರೋ ಕಾಮದೇನುವನ್ನೂ ಬಿಡ್ತಿಲ್ಲ. ಆದ್ರೆ ಅವ್ರ ಕೃತ್ಯಕ್ಕೆ ಕಂಗಾಲಾಗಿರೋದು ಮಾತ್ರ ಸ್ಥಳೀಯರು.