ಬೆಂಗಳೂರು, (ಸೆಪ್ಟೆಂಬರ್ 25): ತಮಿಳುನಾಡಿಗೆ (Tamil Nadu) ಕಾವೇರಿ ನೀರು(Cauvery water) ಬಿಡುವುದನ್ನು ವಿರೋಧಿಸಿ ಕರುನಾಡಿನಲ್ಲಿ ಹೋರಾಟಗಳು ತೀವ್ರ ಸ್ವರೂಪಕ್ಕೆ ತಿರುಗಿದೆ. ಈಗಾಗಲೇ ಮಂಡ್ಯ ಮದ್ದೂರು ಬಂದ್ ಸಕ್ಸಸ್ ಆಗಿದ್ದು, ನಾಳೆ(ಸೆಪ್ಟೆಂಬರ್ 26) ರಾಜಧಾನಿ ಬೆಂಗಳೂರು ಬಂದ್ಗೆ ಕರೆ ನೀಡಲಾಗಿದೆ. ಈ ಮಧ್ಯೆ ಸೆಪ್ಟೆಂಬರ್ 29 ರಂದು ಅಖಂಡ ಕರ್ನಾಟಕ ಬಂದ್ (Karnataka Bandh) ಮಾಡಲು ತೀರ್ಮಾನಿಸಲಾಗಿದೆ.ವೀ ಬಗ್ಗೆ ಇಂದು ಅಂತಿಮ ಸಭೆ ನಡೆಯಲಿದ್ದು, ಬಳಿಕ ಕರ್ನಾಟಕ ಬಂದ್ ಭವಿಷ್ಯ ನಿರ್ಧಾರವಾಗಲಿದೆ.
ನಿನ್ನೆ(ಸೆ.24) ವಾಟಾಳ್ ನಾಗರಾಜ್ ಹಾಗೂ ಕರವೇ ಪ್ರವೀಣ್ ಶೆಟ್ಟಿ ಬಣದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯ್ತು. ಬೆಂಗಳೂರಿನ ಮೈಸೂರು ಬ್ಯಾಂಕ್ ಸರ್ಕಲ್ನಲ್ಲಿ ಕಪ್ಪು ಬಟ್ಟೆ ಪ್ರದರ್ಶನ ಮಾಡಿ ಕರಾಳ ದಿನ ಅಂತಾ ಆಕ್ರೋಶ ಹೊರಹಾಕಲಾಯ್ತು. ಇದೇ ಪ್ರತಿಭಟನೆ ವೇಳೆಯೇ ವಾಟಾಳ್ ನಾಗರಾಜ್, ಶುಕ್ರವಾರ ಅಖಂಡ ಕರ್ನಾಟಕ ಬಂದ್ ಮಾಡಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ: ಸೆ.26ರಂದು ಬೆಂಗಳೂರು ಬಂದ್ ಫಿಕ್ಸ್, ಏನಿರುತ್ತೆ? ಏನಿರಲ್ಲ? ಇಲ್ಲಿದೆ ಸಂಪೂರ್ಣ ವಿವರ
ಸೆಪ್ಟೆಂಬರ್ 29ಕ್ಕೆ ಕರೆ ನೀಡಲಾಗಿರುವ ಅಖಂಡ ಕರ್ನಾಟಕ ಬಂದ್ ಸಂಬಂಧ ಇಂದು(ಸೆ.25) ವಾಟಾಳ್ ನಾಗರಾಜ್ ಮತ್ತು ಕನ್ನಡ ಸಂಘಟನೆಗಳು ಮತ್ತೊಂದು ಸುತ್ತಿನ ಸಭೆ ನಡೆಸಲಿವೆ. ಈ ಸಭೆಯಲ್ಲಿ ಹೋರಾಟದ ರೂಪುರೇಷೆ ನಿರ್ಧಾರವಾಗಲಿದೆ. ಇನ್ನು ನಾಳೆ ನಡೆಯೋ ಬೆಂಗಳೂರು ಬಂದ್ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ವಾಟಾಳ್ ನಾಗಾರಾಜ್, ಅವರಿಗೆ ಬಂದ್ ಮಾಡಿ ಅಂತಾನೂ ಹೇಳಲ್ಲ, ಬಿಡಿ ಅಂತಾನೂ ಹೇಳಲ್ಲ ಎಂದಿದ್ದಾರೆ.
ಒಟ್ಟಿನಲ್ಲಿ ನಾಳೆ ಬೆಂಗಳೂರು ಬಂದ್ ಆಗುವುದು ಪಕ್ಕಾ ಆಗಿದೆ. ಶುಕ್ರವಾರದ ಕರ್ನಾಟಕ ಬಂದ್ ಭವಿಷ್ಯ ಇಂದು ನಿರ್ಧಾರವಾಗಲಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ