ಬೆಂಗಳೂರು: ತೊರೆಕಾಡನಹಳ್ಳಿಯಲ್ಲಿನ ಪೈಪ್ಲೈನ್ನಲ್ಲಿ ನೀರು ಸೋರಿಕೆ ಆದ ಹಿನ್ನೆಲೆಯಲ್ಲಿ ಶುಕ್ರವಾರ ಬೆಂಗಳೂರಿನ ಹಲವೆಡೆ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. 4ನೇ ಹಂತದ 2ನೇ ಘಟ್ಟದ 2500 ಮಿ ಮೀ ವ್ಯಾಸದ ಬಿಎಸ್ ವಾಲ್ವ್ ಸಂಖ್ಯೆ 1ರ 250ಮಿ.ಮೀ ವ್ಯಾಸದ ಮಾರ್ಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಸೋರಿಕೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ನಾಳೆ ಬೆಳಗ್ಗೆ 9 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ತುರ್ತು ಕಾಮಗಾರಿ ನಡೆಯಲಿದೆ.
ತುರ್ತು ಕಾರ್ಯಾಚರಣೆ ಇರುವ ಕಾರಣ ಬೆಂಗಳೂರಿನ ಹಲವು ಭಾಗದಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಆ ಏರಿಯಾಗಳ ಬಗ್ಗೆ ಇಲ್ಲಿದೆ ಮಾಹಿತಿ.
ನಂದಿನಿ ಲೇಔಟ್, ಆರ್.ಆರ್ ನಗರ, ರಾಜಾಜಿನಗರ, ನಾಗರಬಾವಿ, ಯಲಹಂಕ, ಬ್ಯಾಟರಾಯನಪುರ, ಹೆಚ್ಆರ್ಸಿಆರ್, ದಾಸರಹಳ್ಳಿ, ಚಂದ್ರ ಲೇಔಟ್, ಕೆಂಗೇರಿ, ಬಾಣಸವಾಡಿ ಮತ್ತು ಉತ್ತರ ವಿಭಾಗದ ಬಹುತೇಕ ಭಾಗಗಳಲ್ಲಿ ನೀರು ಪೂರೈಕೆ ಇರುವುದಿಲ್ಲ.
ಉಳಿದಂತೆ ಅಂಜನಾಪುರ ಮತ್ತು ಸುತ್ತಮುತ್ತಲಿನ ಪ್ರದೇಶಗಳು, ಜಂಬೂಸವಾರಿ ದಿಣ್ಣೆ, ಕೊತ್ತನೂರು ದಿಣ್ಣೆ, ಕೋಡಿ ಚಿಕ್ಕನ ಹಳ್ಳಿ, ಬೊಮ್ಮನಹಳ್ಳಿ, ಕೂಡ್ಲು, ಹೊಂಗಸಂದ್ರ, ಮಂಗಮ್ಮನಪಾಳ್ಯ, ಮಾರತ್ ಹಳ್ಳಿ, ಹೂಡಿ, ಎ.ನಾರಾಯಣಪುರ, ಕೆ.ಆರ್ ಪುರಂ, ರಾಮಮೂರ್ತಿ ನಗರ, ವೈಟ್ ಫೀಲ್ಡ್, ಸಿ.ವಿ.ರಾಮನ್ ನಗರ, ಹಳೆ ಏರ್ಪೋರ್ಟ್ ರಸ್ತೆ, ಹೆಚ್ಆರ್ಬಿಆರ್ ಲೇಔಟ್, ಒಎಂಬಿಆರ್ ಲೇಔಟ್, ರಾಮಯ್ಯ ಲೇಔಟ್ ಮತ್ತು ಸುತ್ತಮುತ್ತಲಿನ ಪ್ರದೇಶಗಳು ನೀರು ಪೂರೈಕೆಯಲ್ಲಿ ವ್ಯತ್ಯಯ ಆಗಲಿದೆ.
ಬೆಂಗಳೂರು-ಮೈಸೂರು ನಡುವೆ ಶೀಘ್ರ 10 ಪಥದ ಎಕ್ಸ್ಪ್ರೆಸ್ ವೇ: ಗೋವಿಂದ ಕಾರಜೋಳ