ಹಲಸೂರಿನ ಗ್ಯಾಂಬ್ಲಿಂಗ್ ಅಡ್ಡೆ ಮೇಲೆ ದಾಳಿ, 27ಕ್ಕೂ ಹೆಚ್ಚು ಜನರ ಬಂಧನ

|

Updated on: May 20, 2021 | 7:26 AM

ಹಲಸೂರಿನ ವಿವೇಕಾನಂದ ರಸ್ತೆ, ಎಂ.ಜಿ ರೈಲ್ವೆ ಕಾಲೋನಿಯಲ್ಲಿರುವ ಪಾಮ್ ಟ್ರೀ ಹೋಟೆಲ್ನಲ್ಲಿ ಗ್ಯಾಂಬ್ಲಿಂಗ್ ನಡೆಸಲಾಗುತ್ತಿದ್ದು ಕಾರ್ಯಾಚರಣೆಗೆ ಇಳಿದಿದ್ದ ಸಿಸಿಬಿ ಪೊಲೀಸರು ಕೊರೊನಾ ಲಾಕ್ಡೌನ್ ನಿಯಮ ಉಲ್ಲಂಘಿಸಿ ಗ್ಯಾಂಬ್ಲಿಂಗ್ ನಡೆಸ್ತಿದ್ದ ಹಿನ್ನೆಲೆಯಲ್ಲಿ ಹೋಟೆಲ್ ಮ್ಯಾನೇಜರ್ ಸೇರಿ 20ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದಿದ್ದಾರೆ.

ಹಲಸೂರಿನ ಗ್ಯಾಂಬ್ಲಿಂಗ್ ಅಡ್ಡೆ ಮೇಲೆ ದಾಳಿ, 27ಕ್ಕೂ ಹೆಚ್ಚು ಜನರ ಬಂಧನ
ಪಾಮ್ ಟ್ರೀ ಹೋಟೆಲ್ನಲ್ಲಿ ಗ್ಯಾಂಬ್ಲಿಂಗ್
Follow us on

ಬೆಂಗಳೂರು: ಗ್ಯಾಂಬ್ಲಿಂಗ್ ಅಡ್ಡೆ ಮೇಲೆ ಬೆಂಗಳೂರಿನ ಸಿಸಿಬಿ ಪೊಲೀಸರು ದಾಳಿ ನಡೆಸಿ 27ಕ್ಕೂ ಹೆಚ್ಚು ಜನರನ್ನು ಬಂಧಿಸಿದ ಘಟನೆ ಹಲಸೂರಿನ ವಿವೇಕಾನಂದ ರಸ್ತೆಯಲ್ಲಿರುವ ಹೋಟೆಲ್ನಲ್ಲಿ ನಡೆದಿದೆ.

ಹಲಸೂರಿನ ವಿವೇಕಾನಂದ ರಸ್ತೆ, ಎಂ.ಜಿ ರೈಲ್ವೆ ಕಾಲೋನಿಯಲ್ಲಿರುವ ಪಾಮ್ ಟ್ರೀ ಹೋಟೆಲ್ನಲ್ಲಿ ಗ್ಯಾಂಬ್ಲಿಂಗ್ ನಡೆಸಲಾಗುತ್ತಿದ್ದು ಕಾರ್ಯಾಚರಣೆಗೆ ಇಳಿದಿದ್ದ ಸಿಸಿಬಿ ಪೊಲೀಸರು ಕೊರೊನಾ ಲಾಕ್ಡೌನ್ ನಿಯಮ ಉಲ್ಲಂಘಿಸಿ ಗ್ಯಾಂಬ್ಲಿಂಗ್ ನಡೆಸ್ತಿದ್ದ ಹಿನ್ನೆಲೆಯಲ್ಲಿ ಹೋಟೆಲ್ ಮ್ಯಾನೇಜರ್ ಸೇರಿ 27ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದಿದ್ದು 5 ಲಕ್ಷ ನಗದು ಸೀಜ್ ಮಾಡಿದ್ದಾರೆ. ಇಂದಿರಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಪಾಮ್ ಟ್ರೀ ಹೋಟೆಲ್ನಲ್ಲಿ ಗ್ಯಾಂಬ್ಲಿಂಗ್

ಚೆನ್ನೈ: ಕಳೆದ ವರ್ಷ ಎಲ್ಲೆಡೆ ಕೊರೊನಾ ಮಾರಿ ಹಬ್ಬಿ ಜನ ಸಾಯುತ್ತಿರಬೇಕಾದ್ರೆ ಗ್ಯಾಂಬ್ಲಿಂಗ್ ಆಡಿ ಕೋಟಿ ಕೋಟಿ ವ್ಯವಹಾರದಲ್ಲಿ ತೊಡಗಿದ್ದ ತಮಿಳು ನಟ ಶಾಮ್ ಅವರನ್ನು ತಮಿಳುನಾಡು ಪೊಲೀಸರು ಬಂಧಿಸಿದ್ದರು.

ತಮಿಳುನಾಡು ಕೊರೊನಾ ಸಂಕಷ್ಟದಲ್ಲಿದ್ದಾಗ ಈ ನಟ ಶಾಮ್ ತನ್ನ ಅಪಾರ್ಟ್‌ಮೆಂಟ್‌ನಲ್ಲಿ  ಗ್ಯಾಂಬ್ಲಿಂಗ್‌ನಲ್ಲಿ ತೊಡಗಿದ್ದನ್ನೆನ್ನಲಾಗಿತ್ತು. ಕೇವಲ ಈ ನಟ ಮಾತ್ರವಲ್ಲ, ಇವನೊಂದಿಗೆ ತಮಿಳು ಚಿತ್ರರಂಗದ ಇನ್ನೂ ಹಲವಾರು ನಟರು ಪೋಕರ್ ಗೇಮ್ ಮತ್ತು ಗ್ಯಾಂಬ್ಲಿಂಗ್ ಆಟದಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗ್ತಿದೆ.

ಹೀಗೆ ಗ್ಯಾಂಬ್ಲಿಂಗ್ ಆಟದಲ್ಲಿ ಭಾರೀ ಹಣ ಸೋತ ನಟನೊಬ್ಬ ಹತಾಶೆಯಿಂದ ಚೆನ್ನೈನ ನುಂಗಂಬಕ್ಕಮ್‌ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ ಎನ್ನಲಾಗಿದೆ.

ಸುಳಿವು ಸಿಕ್ಕ ಕೂಡಲೇ ಕಾರ್ಯಪ್ರವೃತ್ತರಾದ ಚೆನ್ನೈ ಪೊಲೀಸರು ನಟ ಶಾಮ್ ಮನೆಯ ಮೇಲೆ ದಾಳಿ ಮಾಡಿ ಆತನನ್ನು ಅರೆಸ್ಟ್ ಮಾಡಿದ್ದರು. ಜೊತೆಗೆ ಕೋಟ್ಯಂತರ ಬೆಲೆಯ ಟೋಕನ್‌ಗಳನ್ನು ಕೂಡಾ ಅತನ ಮನೆಯಿಂದ ವಶಪಡಿಸಿಕೊಂಡಿದ್ದರು.

ಇದನ್ನೂ ಓದಿ: ಆನ್​ಲೈನ್​ ಗ್ಯಾಬ್ಲಿಂಗ್ ಜಾಹಿರಾತು: ನಟ ಸುದೀಪ್​ಗೆ ಮದ್ರಾಸ್ ಹೈಕೋರ್ಟ್​ನಿಂದ ನೋಟಿಸ್

Published On - 7:18 am, Thu, 20 May 21