ಬೆಂಗಳೂರು: ಸ್ಯಾಂಡಲ್ವುಡ್ಗೆ ಡ್ರಗ್ಸ್ ಜಾಲದ ನಂಟು ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ CCB ವಿಚಾರಣೆಗೆ ಹಾಜರಾಗಿದ್ದ ಇಂದ್ರಜಿತ್ ಲಂಕೇಶ್, ತಮ್ಮ ಆರೋಪಗಳಿಗೆ ಪೂರಕವೆಂಬಂತೆ CCB ಅಧಿಕಾರಿಗಳಿಗೆ ಒಂದು ಪೆನ್ ಡ್ರೈವ್ ಹಾಗು ಡಾಕುಮೆಂಟ್ಸ್ ನೀಡಿದ್ದೇನೆ ಎಂದಿದ್ದರು.
ಆದರೆ ಇಂದ್ರಜಿತ್ ಅವರ ಈ ಹೇಳಿಕೆಯನ್ನು ಅಲ್ಲಗಳೆದಿರುವ CCB ಜಾಯಿಂಟ್ ಕಮೀಷನರ್ ಸಂದೀಪ್ ಪಾಟೀಲ್, ಇಂದ್ರಜಿತ್ ಯಾವುದೇ ಸಾಕ್ಷ ನೀಡಿಲ್ಲ ಎಂದಿದ್ದಾರೆ. ಹಾಗಾದ್ರೆ ನಿಜಕ್ಕೂ ಇಂದ್ರಜಿತ್ ಬಳಿ ಇರೋ ಸಾಕ್ಷಾಧಾರಗಳೇನು ಅನ್ನೋದು ಕುತೂಹಲ ಹುಟ್ಟಿಸಿದೆ. ಇಂದ್ರಜಿತ್ ಲಂಕೇಶ್ ನಾಳೆ ಮತ್ತೆ ಸಿಸಿಬಿ ಮುಂದೆ ಹಾಜರಾಗಲಿದ್ದು, ಪೆನ್ ಡ್ರೈವ್ ಸೀಕ್ರೇಟ್ ನಾಳೆ ಬಹಿರಂಗವಾಗುವ ನಿರೀಕ್ಷೆಯಿದೆ.
ಇದನ್ನೂ ಓದಿ:
ಇಂದ್ರಜಿತ್ ಏನು ಹೇಳಿದ್ದಾರೆಂದು ಸದ್ಯಕ್ಕೆ ಹೇಳುವುದಿಲ್ಲ: ಸಂದೀಪ್ ಪಾಟೀಲ್
‘ನಿನ್ನೆ, ಮೊನ್ನೆ ಬಂದವರಿಗೆ ನಾನು ಹೆದರಲ್ಲ.. ನಾನು ರಕ್ಷಣೆ ಕೇಳುವುದಿಲ್ಲ’
Published On - 4:10 pm, Wed, 2 September 20