ಕಮರಿಪೇಟೆಯಲ್ಲಿ ಸಿಸಿಬಿ ಪೊಲೀಸರ ಕಾರ್ಯಾಚರಣೆ: ಕ್ರಿಕೆಟ್ ಬೆಟ್ಟಿಂಗ್​, ಅಕ್ರಮ ಮದ್ಯ ಸಂಗ್ರಹಿಸಿದ್ದ ಮೂವರ ಬಂಧನ

|

Updated on: Mar 20, 2021 | 11:48 AM

ಕಮಿಷನರೇಟ್ ಸಿಸಿಬಿ ಅಧಿಕಾರಿಗಳ ಕಾರ್ಯಾಚರಣೆ ವೇಳೆ ಕ್ರಿಕೆಟ್ ಬೆಟ್ಟಿಂಗ್​ನಲ್ಲಿ ತೊಡಗಿದ್ದ ಮಂಜುನಾಥ್ ಪಠ್ಠಣ, ರಾಜು ನೂಲ್ವಿ, ಅಮೃತ್ ಸೊಳಂಕೆಯನ್ನು ಬಂಧಿಸಲಾಗಿದೆ. ಬಂಧಿತರಿಂದ 39280 ರೂಪಾಯಿ ಹಣ ಸೇರಿ 8 ಮೊಬೈಲ್ ಹಾಗೂ ಟಿವಿಯನ್ನು ವಶಕ್ಕೆ‌ ಪಡೆಯಲಾಗಿದೆ.

ಕಮರಿಪೇಟೆಯಲ್ಲಿ ಸಿಸಿಬಿ ಪೊಲೀಸರ ಕಾರ್ಯಾಚರಣೆ: ಕ್ರಿಕೆಟ್ ಬೆಟ್ಟಿಂಗ್​, ಅಕ್ರಮ ಮದ್ಯ ಸಂಗ್ರಹಿಸಿದ್ದ ಮೂವರ ಬಂಧನ
ಸಾಂದರ್ಭಿಕ ಚಿತ್ರ
Follow us on

ಹುಬ್ಬಳ್ಳಿ: ಕ್ರಿಕೆಟ್ ಬೆಟ್ಟಿಂಗ್​ನಲ್ಲಿ ತೊಡಗಿದ್ದ ಮೂವರನ್ನು ಸಿಸಿಬಿ ಅಧಿಕಾರಿಗಳು ಬಂಧಿಸಿರುವ ಘಟನೆ ಹುಬ್ಬಳ್ಳಿಯ ಗಾಂಧಿನಗರದ ಸಮೀಪ ನಡೆದಿದೆ. ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಕೆ. ರಾಮರಾಜನ್ ಮತ್ತು ಅಪರಾಧ ಹಾಗೂ ಸಂಚಾರ ಡಿಸಿಬಿ ಬಸರಗಿ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆ ವೇಳೆ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದವರು ಸಿಕ್ಕಿಹಾಕಿಕೊಂಡಿದ್ದಾರೆ.

ಕಮಿಷನರೇಟ್ ಸಿಸಿಬಿ ಅಧಿಕಾರಿಗಳ ಕಾರ್ಯಾಚರಣೆ ವೇಳೆ ಕ್ರಿಕೆಟ್ ಬೆಟ್ಟಿಂಗ್​ನಲ್ಲಿ ತೊಡಗಿದ್ದ ಮಂಜುನಾಥ್ ಪಠ್ಠಣ, ರಾಜು ನೂಲ್ವಿ, ಅಮೃತ್ ಸೊಳಂಕೆಯನ್ನು ಬಂಧಿಸಲಾಗಿದೆ. ಬಂಧಿತರಿಂದ 39,280 ರೂಪಾಯಿ ಹಣ ಸೇರಿ 8 ಮೊಬೈಲ್ ಹಾಗೂ ಟಿವಿಯನ್ನು ವಶಕ್ಕೆ‌ ಪಡೆಯಲಾಗಿದ್ದು, ಈ ಮೂವರ ವಿರುದ್ಧ ಸಿಸಿಬಿ ಪೊಲೀಸರಿಂದ ಪ್ರಕರಣ ದಾಖಲಾಗಿದೆ.

ಹುಬ್ಬಳ್ಳಿಯಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಮದ್ಯ ಜಪ್ತಿ:
ಹುಬ್ಬಳ್ಳಿಯ ಕಮರಿ ಪೇಟೆಯ ರಾಘವೇಂದ್ರ ಎಂಬುವ ವ್ಯಕ್ತಿಯ ಮನೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿಡಲಾಗಿದ್ದ ಮದ್ಯವನ್ನು ಜಪ್ತಿ ಮಾಡಲಾಗಿದೆ. ರಾಘವೇಂದ್ರ ಎನ್ನುವವರ ಮನೆ ಮೇಲೆ ಏಕಾಏಕಿಯಾಗಿ ದಾಳಿ ನಡೆಸಿದ ಅಬಕಾರಿ ಅಧಿಕಾರಿಗಳು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 5.250 ಲೀಟರ್‌ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ. ಸದ್ಯ ಅಬಕಾರಿ ಇಲಾಖೆ ಅಧಿಕಾರಿಗಳು ರಾಘವೇಂದ್ರ ಹಾಗೂ ಅವರ ತಂದೆ ಮೋತಿಲಾಲ ಧರ್ಮಸಾರನ್ನು ಬಂಧಿಸಿದ್ದಾರೆ.

ಆರೋಪಿ ಜೊತೆಗೆ ಪೊಲೀಸರು

ಮೈಸೂರಿನಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದವರ ಬಂಧನ:
ಸಿಸಿಬಿ ಪೊಲೀಸರ ಕಾರ್ಯಾಚರಣೆ ವೇಳೆ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳು ಪತ್ತೆಯಾಗಿದ್ದು, ಇರ್ಫಾನ್ ಪಾಷಾ(27), ರಿಯಾಜ್ ಪಾಷಾ(23)ರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 5 ಕೆಜಿ 570 ಗ್ರಾಂ ಗಾಂಜಾ, 4200 ರೂಪಾಯಿ ನಗದು ಹಾಗೂ ಮೊಬೈಲ್ ವಶಕ್ಕೆ ಪಡೆದಿದ್ದಾರೆ. ಬೆಲವತ್ತ ಗ್ರಾಮದ ಮನೆಯಲ್ಲಿದ್ದ ಗಾಂಜಾವನ್ನು ಪೊಲಿಸರು ವಶಪಡಿಸಿಕೊಂಡಿದ್ದು, ಮೈಸೂರಿನ ಮೇಟಗಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರ ಬಂಧನ

ಇದನ್ನೂ ಓದಿ: 

ಕ್ರಿಕೆಟ್ ಬೆಟ್ಟಿಂಗ್ ದಂಧೆಯಲ್ಲಿ ಉದ್ಯಮಿಗಳನ್ನ ಸಿಲುಕಿಸಿ ಲಕ್ಷ ಲಕ್ಷ ಹಣ ಸುಲಿಗೆ: ಮಂಗಳೂರು ಸಿಸಿಬಿ ಪೊಲೀಸರ ವಿರುದ್ಧ ಗಂಭೀರ ಆರೋಪ

Sachin Tendulkar: ಕ್ರಿಕೆಟ್ ದೇವರು ಏಕದಿನ ಕ್ರಿಕೆಟ್​ಗೆ ವಿದಾಯ ಹೇಳಿ ಇಂದಿಗೆ 9 ವರ್ಷ.. ಸಚಿನ್ ಕೊನೆಯ ಪಂದ್ಯದ ವಿಶೇಷತೆ ಗೊತ್ತಾ?

Published On - 10:42 am, Sat, 20 March 21