1/5

ಟೀಂ ಇಂಡಿಯಾದ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ತಮ್ಮ 24 ವರ್ಷಗಳ ವೃತ್ತಿಜೀವನದಲ್ಲಿ ಅನೇಕ ದೊಡ್ಡ ದಾಖಲೆಗಳನ್ನು ನಿರ್ಮಿಸಿದ್ದಾರೆ. ಅವರು ಭಾರತದಲ್ಲಿ ಮಾತ್ರವಲ್ಲದೆ ಇಡೀ ವಿಶ್ವದಲ್ಲೇ ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಸಚಿನ್ ಅವರ ವೃತ್ತಿಜೀವನದಲ್ಲಿ ಇಂದು ವಿಶೇಷ ದಿನವಾಗಿದೆ.
2/5

ಮಾರ್ಚ್ 18, 2012 ರಂದು, ಸಚಿನ್ ತೆಂಡೂಲ್ಕರ್ ತಮ್ಮ ಕ್ರಿಕೆಟಿಂಗ್ ವೃತ್ತಿಜೀವನದ ಕೊನೆಯ ಅಂತರರಾಷ್ಟ್ರೀಯ ಏಕದಿನ ಪಂದ್ಯವನ್ನು ಆಡಿದರು. ಆ ವರ್ಷದ ಏಷ್ಯಾಕಪ್‌ನಲ್ಲಿ ಅವರು ಪಾಕಿಸ್ತಾನ ವಿರುದ್ಧ ಈ ಪಂದ್ಯವನ್ನು ಆಡಿದ್ದರು. ವಿಶೇಷವೆಂದರೆ ಸಚಿನ್ 1989 ರಲ್ಲಿ ಪಾಕಿಸ್ತಾನ ವಿರುದ್ಧವೂ ತನ್ನ ಮೊದಲ ಪಂದ್ಯವನ್ನು ಆಡಿದ್ದರು.
3/5

ಪಂದ್ಯದಲ್ಲಿ ಪಾಕಿಸ್ತಾನ ತಂಡದ ನಾಯಕ ಮಿಸ್ಬಾ ಉಲ್ ಹಕ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಪಾಕಿಸ್ತಾನ 6 ವಿಕೆಟ್‌ಗೆ 329 ರನ್ ಗಳಿಸಿತು. ಪ್ರವೀಣ್ ಕುಮಾರ್ ಮತ್ತು ಅಶೋಕ್ ದಿಂಡಾ ತಲಾ 2 ವಿಕೆಟ್ ಪಡೆದರು. ಇದರ ನಂತರ ವಿರಾಟ್ ಕೊಹ್ಲಿ ಅವರೊಂದಿಗೆ ಸಚಿನ್ ತೆಂಡೂಲ್ಕರ್ 132 ರನ್ ಜೊತೆಯಾಟ ಆಡಿ, ಆರಂಭಿಕ ಆಘಾತದಿಂದ ಭಾರತ ತಂಡವನ್ನು ಪಾರು ಮಾಡಿದರು.
4/5

ಸಚಿನ್ ತೆಂಡೂಲ್ಕರ್ ತಮ್ಮ ಕೊನೆಯ ಇನ್ನಿಂಗ್ಸ್‌ನಲ್ಲಿ ಅರ್ಧಶತಕ ಬಾರಿಸಿದ್ದರು. 48 ಎಸೆತಗಳಲ್ಲಿ 52 ರನ್ ಗಳಿಸಿದ ಸಚಿನ್ ತಮ್ಮ ಇನ್ನಿಂಗ್ಸ್ನಲ್ಲಿ 5 ಬೌಂಡರಿ ಮತ್ತು ಒಂದು ಸಿಕ್ಸರ್ ಬಾರಿಸಿದರು. ಪರಿಣಾಮವಾಗಿ ಭಾರತ 47.5 ಓವರ್‌ಗಳಲ್ಲಿ 4 ವಿಕೆಟ್‌ಗೆ 330 ರನ್‌ಗಳ ಗುರಿ ಪೂರ್ಣಗೊಳಿಸಿತು.
5/5

ಸಚಿನ್ ತೆಂಡೂಲ್ಕರ್
Cricketer Sachin Tendulkar tested covid 19 positive news in Kannada GGD