ಬ್ಯಾಡರಹಳ್ಳಿ ಪಿಜಿ ಮೇಲೆ ಸಿಸಿಬಿ ದಾಳಿ; ಐವರು ಡ್ರಗ್ಸ್ ಪೆಡ್ಲರ್ಸ್ ಅರೆಸ್ಟ್
ಫುಡ್ ಪಾರ್ಸೆಲ್ನಂತೆ ಪ್ಯಾಕ್ ಮಾಡಿ ಡ್ರಗ್ಸ್ನ ಸಪ್ಲೈ ಮಾಡುತ್ತಿದ್ದರು. ಡ್ರಗ್ಸ್ ಸಪ್ಲೈ ಮಾಡಿ ಆರೋಪಿಗಳು ಗೂಗಲ್ ಪೇನಲ್ಲಿ ಹಣ ಪಡೆಯುತ್ತಿದ್ದರು. ಮೂವರು ಆರೋಪಿಗಳು ಪರಾರಿಯಾಗಿದ್ದು, ಸಿಸಿಬಿ ಪೊಲೀಸರಿಂದ ಶೋಧ ಕಾರ್ಯ ಮುಂದುವರೆದಿದೆ.
ಬೆಂಗಳೂರು: ಬ್ಯಾಡರಹಳ್ಳಿಯ ಪಿಜಿ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ ಐವರು ಡ್ರಗ್ಸ್ ಪೆಡ್ಲರ್ಸ್ನ ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಂದ 300 ಎಂಡಿಎಂಎ ಮಾತ್ರೆ, ಎಕ್ಸ್ಟಸಿ ಮಾತ್ರೆಗಳು, 150 ಎಲ್ಎಸ್ಡಿ ಸ್ಟ್ರಿಪ್ಸ್, 250 ಗ್ರಾಂ ಅಶೀಶ್, 1 ಕೆಜಿ ಗಾಂಜಾ ಸೇರಿದಂತೆ 30 ಲಕ್ಷ ರೂಪಾಯಿ ಮೌಲ್ಯದ ಡ್ರಗ್ಸ್ನ ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಗಳು ಡಾರ್ಕ್ ವೆಬ್ನಲ್ಲಿ ಡ್ರಗ್ಸ್ ಖರೀದಿಸುತ್ತಿದ್ದರು. ಬಂಧಿತರಲ್ಲಿ ಇಬ್ಬರು ಟೆಕ್ಕಿಗಳು, ಒಬ್ಬ ಕಾನೂನು ವಿದ್ಯಾರ್ಥಿ ಎಂದು ತಿಳಿದುಬಂದಿದೆ.
ಫುಡ್ ಪಾರ್ಸೆಲ್ನಂತೆ ಪ್ಯಾಕ್ ಮಾಡಿ ಡ್ರಗ್ಸ್ನ ಸಪ್ಲೈ ಮಾಡುತ್ತಿದ್ದರು. ಡ್ರಗ್ಸ್ ಸಪ್ಲೈ ಮಾಡಿ ಆರೋಪಿಗಳು ಗೂಗಲ್ ಪೇನಲ್ಲಿ ಹಣ ಪಡೆಯುತ್ತಿದ್ದರು. ಮೂವರು ಆರೋಪಿಗಳು ಪರಾರಿಯಾಗಿದ್ದು, ಸಿಸಿಬಿ ಪೊಲೀಸರಿಂದ ಶೋಧ ಕಾರ್ಯ ಮುಂದುವರೆದಿದೆ.
ಆರೋಪಿಗಳು ಡ್ರಗ್ಸ್ನ ಅಮೇಜಾನ್ ಪ್ಯಾಕ್ಗಳಲ್ಲಿ ಹಾಕಿ ಪ್ಯಾಕ್ ಮಾಡುತಿದ್ದರು. ಬಳಿಕ ಅದಕ್ಕೆ ಅಮೇಜಾನ್ ಟೇಪ್ಗಳಿಂದ, ವ್ಯಾಕ್ಯೂಮ್ ಫುಡ್ ಸೀಲ್ಗಳಿಂದ ಸೀಲು ಮಾಡುತಿದ್ದರು. ಅದನ್ನು ಡೊನ್ಜೊ ಮುಖಾಂತರ ಗಿರಾಕಿಗಳಿಗೆ ನೀಡುತಿದ್ದರು. ಬಳಿಕ ಗೂಗಲ್ ಪೇನಲ್ಲಿ ಹಣ ಪಡೆಯುತಿದ್ದರು ಎಂಬ ಮಾಹಿತಿ ತಿಳಿದುಬಂದಿದೆ. ಆರೋಪಿಗಳು.
ವಿದೇಶದಿಂದ ಭಾರತಕ್ಕೆ ಬರುತಿದ್ದ ಮಾದಕ ವಸ್ತುಗಳು ಹಿಮಾಚಲ ಪ್ರದೇಶದಲ್ಲಿ ಕುಳಿತ ಮೂವರು ಆರೋಪಿಗಳು ಡಾರ್ಕ್ ವೆಬ್ನಲ್ಲಿ ಡ್ರಗ್ ಖರೀದಿ ಮಾಡುತಿದ್ದರು. ಬಿಟ್ ಕಾಯಿನ್ ಮುಖಾಂತರ ಹಣ ಪಾವತಿಸಿ ಡ್ರಗ್ ಖರೀದಿಸುತ್ತಿದ್ದರು. ಖರೀದಿಸಿದ ಡ್ರಗ್ಗಳು ಕೊರಿಯರ್ ಮುಖಾಂತರ ಹಿಮಾಚಲ ಪ್ರದೇಶಕ್ಕೆ ಬರುತಿತ್ತು. ಬಂದ ಡ್ರಗ್ಗಳನ್ನು ವ್ಯವಸ್ಥಿತವಾಗಿ ಸಾಗಿಸುತ್ತಿದ್ದರು.
ಇದನ್ನೂ ಓದಿ
(CCB police attacked Byadarahalli PG and arrested Drugs Peddlers)