ನಕಲಿ ಅಂಕಪಟ್ಟಿ ನೀಡ್ತಿದ್ದ ಇನ್‌ಸ್ಟಿಟ್ಯೂಟ್ ಮೇಲೆ ಸಿಸಿಬಿ ದಾಳಿ, ಇಬ್ಬರು ವಶಕ್ಕೆ

ಬೆಂಗಳೂರು: ನಕಲಿ ಅಂಕಪಟ್ಟಿ ನೀಡ್ತಿದ್ದ ನಗರದ ಮಹಾಲಕ್ಷ್ಮೀ ಲೇಔಟ್‌ನಲ್ಲಿರುವ ಇನ್‌ಸ್ಟಿಟ್ಯೂಟ್ ಮೇಲೆ ಸಿಸಿಬಿ ದಾಳಿ ನಡೆಸಿದೆ. ಆಂಧ್ರದ ಶ್ರೀನಿವಾಸರೆಡ್ಡಿಗೆ ಸೇರಿದ ವೆಂಕಟೇಶ್ವರ ಇನ್‌ಸ್ಟಿಟ್ಯೂಟ್​ನಲ್ಲಿ ದಾಳಿ ನಡೆಸಿದ ವೇಳೆ ಅಪಾರ ಪ್ರಮಾಣದ ಎಸ್ಎಸ್ಎಲ್‌ಸಿ, ಪಿಯುಸಿ, ಪದವಿ ನಕಲಿ ಅಂಕಪಟ್ಟಿ ಪತ್ತೆಯಾಗಿದೆ. ಆರೋಪಿಗಳು ಇನ್‌ಸ್ಟಿಟ್ಯೂಟ್ ಹೆಸರಲ್ಲಿ ನಕಲಿ ಮಾರ್ಕ್ಸ್ ಕಾರ್ಡ್ ದಂದೆ ನಡೆಸುತ್ತಿದ್ದರು. ಹಣ ಕೊಟ್ರೇ ಬೇಕಾದ ಡಿಗ್ರಿ ಮಾರ್ಕ್ಸ್ ಕಾರ್ಡ್ ಕೊಡ್ತಿದ್ರು ಅನ್ನೊ ಅರೋಪ ಕೇಳಿ ಬಂದಿದೆ. ಆರೋಪಿಗಳು ಒಂದು ಸಬ್ಜೇಕ್ಟ್ ಗೆ 15 ಸಾವಿರ ದಿಂದ 3 […]

ನಕಲಿ ಅಂಕಪಟ್ಟಿ ನೀಡ್ತಿದ್ದ ಇನ್‌ಸ್ಟಿಟ್ಯೂಟ್ ಮೇಲೆ ಸಿಸಿಬಿ ದಾಳಿ, ಇಬ್ಬರು ವಶಕ್ಕೆ

Updated on: Dec 11, 2019 | 7:41 AM

ಬೆಂಗಳೂರು: ನಕಲಿ ಅಂಕಪಟ್ಟಿ ನೀಡ್ತಿದ್ದ ನಗರದ ಮಹಾಲಕ್ಷ್ಮೀ ಲೇಔಟ್‌ನಲ್ಲಿರುವ ಇನ್‌ಸ್ಟಿಟ್ಯೂಟ್ ಮೇಲೆ ಸಿಸಿಬಿ ದಾಳಿ ನಡೆಸಿದೆ. ಆಂಧ್ರದ ಶ್ರೀನಿವಾಸರೆಡ್ಡಿಗೆ ಸೇರಿದ ವೆಂಕಟೇಶ್ವರ ಇನ್‌ಸ್ಟಿಟ್ಯೂಟ್​ನಲ್ಲಿ ದಾಳಿ ನಡೆಸಿದ ವೇಳೆ ಅಪಾರ ಪ್ರಮಾಣದ ಎಸ್ಎಸ್ಎಲ್‌ಸಿ, ಪಿಯುಸಿ, ಪದವಿ ನಕಲಿ ಅಂಕಪಟ್ಟಿ ಪತ್ತೆಯಾಗಿದೆ.

ಆರೋಪಿಗಳು ಇನ್‌ಸ್ಟಿಟ್ಯೂಟ್ ಹೆಸರಲ್ಲಿ ನಕಲಿ ಮಾರ್ಕ್ಸ್ ಕಾರ್ಡ್ ದಂದೆ ನಡೆಸುತ್ತಿದ್ದರು. ಹಣ ಕೊಟ್ರೇ ಬೇಕಾದ ಡಿಗ್ರಿ ಮಾರ್ಕ್ಸ್ ಕಾರ್ಡ್ ಕೊಡ್ತಿದ್ರು ಅನ್ನೊ ಅರೋಪ ಕೇಳಿ ಬಂದಿದೆ. ಆರೋಪಿಗಳು ಒಂದು ಸಬ್ಜೇಕ್ಟ್ ಗೆ 15 ಸಾವಿರ ದಿಂದ 3 ಲಕ್ಷದವರೆಗೂ ಚಾರ್ಜ್ ಮಾಡುತ್ತಿದ್ದರು. ಎಕ್ಸಾಮ್ ಅಟೆಂಡ್ ಮಾಡಿ ಬಂದ್ರೇ ಸಾಕು ಡಿಗ್ರಿ ಸಿಗುತ್ತಿತ್ತು.

ಯಾವುದೇ ಎಕ್ಸಾಮ್ ಬರೆಯದೇ ಎಲ್ ಎಲ್ ಬಿ ಕೋರ್ಸ್ ಸರ್ಟೀಫಿಕೇಟ್ ನೀಡುತ್ತಿದ್ರು. ಆರೋಪಿಗಳು ಆಂಧ್ರ ಹಾಗೂ ರಾಜ್ಯದ ಅನೇಕ ವಿಶ್ವವಿದ್ಯಾಲಯದ ನಕಲಿ ಅಂಕಪಟ್ಟಿಗಳನ್ನು ನೀಡಿ ಹಣ ಮಾಡುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಸಿಸಿಬಿ ತಂಡ ನಕಲಿ ಮಾರ್ಕ್ಸ್ ಕಾರ್ಡ್ ಜೊತೆ ಇನ್‌ಸ್ಟಿಟ್ಯೂಟ್ ನಲ್ಲಿದ್ದ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.