ಕಿಂಗ್ ಪಿನ್ಸ್ ನರೇಶ್, ಶ್ರವಣ್ ವಿರುದ್ಧ ಸಿಡಿ ಲೇಡಿ ಸ್ಫೋಟಕ ಹೇಳಿಕೆ; ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಬ್ಲಾಸ್ಟಿಂಗ್ ಟ್ವಿಸ್ಟ್

|

Updated on: Apr 12, 2021 | 2:42 PM

ಕಿಂಗ್ ಪಿನ್ಸ್ ನರೇಶ್, ಶ್ರವಣ್ ವಿರುದ್ಧ ಸಿಡಿ ಲೇಡಿ ಸ್ಫೋಟಕ ಆರೋಪ ಮಾಡಿದ್ದಾಳೆ. ನನ್ನನ್ನು ಹನಿಟ್ರ್ಯಾಪ್‌ಗೆ ಬಳಸಿಕೊಂಡಿದ್ದೇ ನರೇಶ್, ಶ್ರವಣ್ ಎಂದು ಎಸ್‌ಐಟಿ ಮುಂದೆ ಇಂದು ಹಾಜರಾಗಿ ಸಿಡಿ ಯುವತಿ ಹೇಳಿದ್ದಾಳೆ.

ಕಿಂಗ್ ಪಿನ್ಸ್ ನರೇಶ್, ಶ್ರವಣ್ ವಿರುದ್ಧ ಸಿಡಿ ಲೇಡಿ ಸ್ಫೋಟಕ ಹೇಳಿಕೆ; ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಬ್ಲಾಸ್ಟಿಂಗ್ ಟ್ವಿಸ್ಟ್
‘ಆ ಪ್ರಭಾವಿ ವ್ಯಕ್ತಿ’ಗೆ ಬುದ್ಧಿ ಕಲಿಸಬೇಕು ಅಣ್ಣ ಎಂದು ಸಂತ್ರಸ್ತ ಯುವತಿ ನನ್ನ ಬಳಿ ಬಂದಿದ್ದಳು: ಎಸ್​ಐಟಿ ಎದುರು ಹೇಳಿಕೆ ಕೊಟ್ಟ ನರೇಶ್
Follow us on

ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಬ್ಲ್ಯಾಸ್ಟಿಂಗ್ ಟ್ವಿಸ್ಟ್ ಸಿಕ್ಕಿದೆ. ಎಸ್‌ಐಟಿ ಅಧಿಕಾರಿಗಳ ಮುಂದೆ ಸಿಡಿ ಯುವತಿ ಉಲ್ಟಾ ಹೇಳಿಕೆ ನೀಡಿದ್ದಾಳೆ. ನನ್ನನ್ನು ಹನಿ ಟ್ರ್ಯಾಪ್‌ಗೆ ಬಳಿಸಿಕೊಂಡು ಈ ರೀತಿಯ ಕೃತ್ಯ ಎಸಗಿದ್ದಾರೆ ಎಂದು ಕಿಂಗ್ ಪಿನ್ಸ್ ನರೇಶ್, ಶ್ರವಣ್ ವಿರುದ್ಧ ಸಿಡಿ ಲೇಡಿ ಸ್ಫೋಟಕ ಆರೋಪ ಮಾಡಿದ್ದಾಳೆ. ನನ್ನನ್ನು ಹನಿಟ್ರ್ಯಾಪ್‌ಗೆ ಬಳಸಿಕೊಂಡಿದ್ದೇ ನರೇಶ್, ಶ್ರವಣ್ ಎಂದು ಎಸ್‌ಐಟಿ ಮುಂದೆ ಇಂದು ಹಾಜರಾಗಿ ಸಿಡಿ ಯುವತಿ ಹೇಳಿದ್ದಾಳೆ.

ಈ ಸಂಬಂಧ ಎಸ್​ಐಟಿ ತನಿಖಾಧಿಕಾರಿ ಕವಿತಾ ಮುಂದೆ ಸಿಡಿ ಯುವತಿ ಹೇಳಿಕೆ ರೆಕಾರ್ಡ್ ಮಾಡಲಾಗಿದ್ದು ಅದರ ವಿವರ ಹೀಗಿದೆ:
ರಮೇಶ್ ಜಾರಕಿಹೊಳಿ ವಿರುದ್ಧ ನನ್ನ ಹೇಳಿಕೆ ಪೂರ್ಣ ಸತ್ಯ ಅಲ್ಲ. ನಾನು ಹನಿಟ್ರ್ಯಾಪ್‌ ಆಗಿದ್ದೆ. ನರೇಶ್ ಹಾಗೂ ಶ್ರವಣ್ ನನ್ನನ್ನು ಆ ರೀತಿ ಬಳಸಿಕೊಂಡರು. ನರೇಶ್ ಮತ್ತು ಶ್ರವಣ್ ಹೇಳಿದಂತೆ ನಾನು ನಡೆದುಕೊಂಡೆ. ಈ ಹಿಂದೆ ಒತ್ತಡದಲ್ಲಿದ್ದರಿಂದ ಆ ರೀತಿ ಹೇಳಿಕೆ ಕೊಟ್ಟಿದ್ದೆ ಎಂದು ತನಿಖಾಧಿಕಾರಿ ಕವಿತಾ ಮುಂದೆ ಯುವತಿ ನೀಡಿರುವ ಹೇಳಿಕೆಯನ್ನು ಕ್ಯಾಮೆರಾದಲ್ಲಿ ಎಸ್‌ಐಟಿ ರೆಕಾರ್ಡ್ ಮಾಡಿಕೊಂಡಿದೆ.

ಸಿಡಿ ಯುವತಿಯನ್ನು ಮತ್ತೊಮ್ಮೆ ಜಡ್ಜ್‌ ಮುಂದೆ ಹಾಜರುಪಡಿಸಲು SIT ಸಿದ್ಧತೆ
ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಸಿಡಿ ಯುವತಿಯನ್ನು ಇದೀಗ ಮತ್ತೊಮ್ಮೆ ಜಡ್ಜ್‌ ಮುಂದೆ ಹಾಜರುಪಡಿಸಲು SIT ಸಿದ್ಧತೆ ಮಾಡಿಕೊಳ್ಳುತ್ತಿದೆ. ಸದ್ಯಕ್ಕೆ ಸಿಆರ್‌ಪಿಸಿ 161 ಅಡಿ SIT ಮುಂದೆ ಯುವತಿ ಈ ಹಿಂದೆ ಹೇಳಿಕೆ ನೀಡಿದ್ದಳು. ಇದೀಗ ಎಸ್ಐಟಿ ಮುಂದೆ ಬದಲಾದ ಹೇಳಿಕೆ ನೀಡಿರುವ ಸಂತ್ರಸ್ತ ಯುವತಿ ಸಿಆರ್‌ಪಿಸಿ 164 ಅಡಿಯಲ್ಲಿ ಜಡ್ಜ್ ಮುಂದೆಯೂ ಬದಲಾದ ಹೇಳಿಕೆ ನೀಡಲು ಸಿದ್ಧ ಎಂದು ತಿಳಿಸಿರುವುದಾಗಿ ತಿಳಿದುಬಂದಿದೆ. ಹಾಗಾಗಿ, ಎಸ್‌ಐಟಿ ಅಧಿಕಾರಿಗಳು ಮ್ಯಾಜಿಸ್ಟ್ರೇಟ್ ಕೋರ್ಟ್ ಅನುಮತಿ ಕೇಳಿದ್ದಾರೆ.

Published On - 1:15 pm, Mon, 12 April 21