ಸಿಡಿ ಯುವತಿ ಸದ್ಯಕ್ಕೆ ಬರೋಲ್ಲ; ಕೋರ್ಟ್​ ಆದೇಶಕ್ಕೆ ಕಾಯುತ್ತಿದ್ದೇವೆ- ಯುವತಿ ಪರ ವಕೀಲ ಕೆ.ಎನ್.ಜಗದೀಶ್ ಕುಮಾರ್

ಯುವತಿಯನ್ನು ಕೋರ್ಟ್‌ಗೆ ಹಾಜರುಪಡಿಸಲು ನಿರ್ಧರಿಸಿದ್ದೆವು. ಆದರೆ ನ್ಯಾಯಾಲಯದ ಆದೇಶಕ್ಕಾಗಿ ನಾವು ಕಾಯುತ್ತಿದ್ದೇವೆ. ಕೋರ್ಟ್ ಏನು ಆದೇಶವನ್ನು ನೀಡುತ್ತೋ ಅದನ್ನ ಪಾಲಿಸ್ತೇವೆ. ನ್ಯಾಯಾಲಯದ ಸೂಚನೆಯಂತೆ ನಾವು ನಡೆದುಕೊಳ್ಳುತ್ತೇವೆ ಎಂದು ಯುವತಿ ಪರ ವಕೀಲ ಕೆ.ಎನ್.ಜಗದೀಶ್ ಕುಮಾರ್ ಅವರು ಕೋರ್ಟ್​ ಆವರಣದಲ್ಲಿ ಇದೀಗತಾನೆ ಹೇಳಿದ್ದಾರೆ

ಸಿಡಿ ಯುವತಿ ಸದ್ಯಕ್ಕೆ ಬರೋಲ್ಲ; ಕೋರ್ಟ್​ ಆದೇಶಕ್ಕೆ ಕಾಯುತ್ತಿದ್ದೇವೆ- ಯುವತಿ ಪರ ವಕೀಲ ಕೆ.ಎನ್.ಜಗದೀಶ್ ಕುಮಾರ್
ಸಿಡಿ ಯುವತಿ ಸದ್ಯಕ್ಕೆ ಬರೋಲ್ಲ; ಕೋರ್ಟ್​ ಆದೇಶಕ್ಕೆ ಕಾಯುತ್ತಿದ್ದೇವೆ- ಯುವತಿ ಪರ ವಕೀಲ ಕೆ.ಎನ್.ಜಗದೀಶ್ ಕುಮಾರ್

Updated on: Mar 30, 2021 | 3:54 PM

ಬೆಂಗಳೂರು: ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಲೈಂಗಿಕ ಸಿಡಿ ಪ್ರಕರಣದಲ್ಲಿ CRPC ಸೆಕ್ಷನ್ 164ರಡಿ ಯುವತಿ ಹೇಳಿಕೆ ದಾಖಲು ಮಾಡುವ ವಿಚಾರವಾಗಿ ಸಿಡಿ ಯುವತಿ ಇಂದು ಮ್ಯಾಜಿಸ್ಟ್ರೇಟ್ ಕೋರ್ಟ್‌ನಲ್ಲಿ ಬೆಳಗ್ಗೆ 11 ಗಂಟೆಗೆ ಹಾಜರಾಗಬೇಕಿತ್ತು. ಈ ಮಧ್ಯೆ, ಬೆಂಗಳೂರು ಪೊಲೀಸ್​ ಆಯುಕ್ತ ಕಮಲ್​ ಪಂತ್​ ಅವರು ಎಸಿಪಿ ಕವಿತಾ ಅವರನ್ನು ಪ್ರಕರಣದಲ್ಲಿ ತನಿಖಾಧಿಕಾರಿಯಾಗಿ ನೇಮಕ ಮಾಡಿದ್ದಾರೆ. ಹಾಗಾಗಿ ಅವರು ಕೂಡ ಇಂದು 12 ಗಂಟೆಗೆ 24ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರಾಗಬೇಕಿದೆ.

ಯುವತಿಯನ್ನು ಕೋರ್ಟ್‌ಗೆ ಹಾಜರುಪಡಿಸಲು ನಿರ್ಧರಿಸಿದ್ದೆವು. ಆದರೆ ನ್ಯಾಯಾಲಯದ ಆದೇಶಕ್ಕಾಗಿ ನಾವು ಕಾಯುತ್ತಿದ್ದೇವೆ. ಕೋರ್ಟ್ ಏನು ಆದೇಶವನ್ನು ನೀಡುತ್ತೋ ಅದನ್ನ ಪಾಲಿಸ್ತೇವೆ. ನ್ಯಾಯಾಲಯದ ಸೂಚನೆಯಂತೆ ನಾವು ನಡೆದುಕೊಳ್ಳುತ್ತೇವೆ ಎಂದು ಯುವತಿ ಪರ ವಕೀಲ ಕೆ.ಎನ್.ಜಗದೀಶ್ ಕುಮಾರ್ ಅವರು ಕೋರ್ಟ್​ ಆವರಣದಲ್ಲಿ ಇದೀಗತಾನೆ ಹೇಳಿದ್ದಾರೆ.

CDಯಲ್ಲಿದ್ದ ಯುವತಿ ಬೆಂಗಳೂರಿನಲ್ಲಿಯೇ ಇದ್ದಾರೆ. ಮಧ್ಯಾಹ್ನ 12.30ರಿಂದ 1 ಗಂಟೆಯೊಳಗೆ ಹಾಜರಾಗಬಹುದು. ನ್ಯಾಯಾಲಯದ ಸೂಚನೆಯಂತೆ ನಾವು ನಡೆದುಕೊಳ್ಳುತ್ತೇವೆ ಎಂದೂ CD ಲೇಡಿ ಪರ ವಕೀಲ ಕೆ.ಎನ್.ಜಗದೀಶ್ ಕುಮಾರ್ ಹೇಳಿರುವುದು ಗಮನಾರ್ಹವಾಗಿದೆ.

ಸಿಆರ್‌ಪಿಸಿ 164ರಡಿ ಆದೇಶದ ಬಗ್ಗೆ ಎಸಿಪಿ ಕವಿತಾ ಅವರು ಕೋರ್ಟ್‌ಗೆ ಕೆಲವು ದಾಖಲೆ ಸಲ್ಲಿಸಲಿದ್ದಾರೆ. ತನಿಖಾಧಿಕಾರಿ ಮೂಲಕ ಯುವತಿಯನ್ನು ಹಾಜರುಪಡಿಸಲು ಎಸ್ಐಟಿ ತನಿಖಾಧಿಕಾರಿ ಕವಿತಾ ಕೋರ್ಟ್‌ಗೆ ಮನವಿ ಸಲ್ಲಿಸಲ್ಲಿಸುವ ಅಂದಾಜಿದೆ.

ಸಿಡಿ ಯುವತಿ ನೀಡಿದ್ದ ದೂರಿನ ಸಂಬಂಧ ಈ ತನಿಖಾಧಿಕಾರಿ ನೇಮಕವಾಗಿದೆ. ಹಾಗಾಗಿ ತನಿಖಾಧಿಕಾರಿ ಎಸಿಪಿ ಕವಿತಾ ಮೂಲಕವೇ ಯುವತಿ ಹಾಜರಾಗಬಹುದು. ಮ್ಯಾಜಿಸ್ಟ್ರೇಟ್ ಮುಂದೆ ಸಂತ್ರಸ್ತೆಯನ್ನು ತನಿಖಾಧಿಕಾರಿ ಗುರುತಿಸಬೇಕಾಗಿದೆ. ಕಬ್ಬನ್​ ಪಾರ್ಕ್​ ಪೊಲೀಸ್​ ಠಾಣೆಯ ಇನ್ಸ್‌ಪೆಕ್ಟರ್ ಮಾರುತಿ ಸೇರಿದಂತೆ 8 ಅಧಿಕಾರಿಗಳ ತಂಡ ಕವಿತಾ ಅವರಿಗೆ ಸಾಥ್​ ನೀಡಲಿದ್ದಾರೆ.

ಈ ಬೆಳವಣಿಗೆಗಳ ಸಮ್ಮುಖದಲ್ಲಿ ಬೆಂಗಳೂರಿನ ನೃಪತುಂಗ ರಸ್ತೆಯಲ್ಲಿರುವ 24ನೇ ACMM ಮ್ಯಾಜಿಸ್ಟ್ರೇಟ್ ಕೋರ್ಟ್ ಬಳಿ ಪೊಲೀಸ್ ಭದ್ರತೆ ಹಾಕಲಾಗಿದೆ. ಭದ್ರತೆಗಾಗಿ ಮಹಿಳಾ ಪೊಲೀಸರನ್ನೂ ನಿಯೋಜನೆ ಮಾಡಲಾಗಿದೆ.

Published On - 11:03 am, Tue, 30 March 21