ಬರ್ಥ್​​ಡೇ ಸಂಭ್ರಮದಲ್ಲಿ ಮಿಂಚಿದ ಟೈಗರ್ ಶ್ವಾನ! ಉಡುಗೊರೆಯಾಗಿ 25 ಗ್ರಾಂ ಚಿನ್ನದ ಹಾರ

ಸಂಗಯ್ಯ ಪತ್ರಿ ಮನೆಯಲ್ಲಿ ಮುದ್ದಿನಿಂದ ಸಾಕಿದ್ದ ಶ್ವಾನದ ಹುಟ್ಟುಹಬ್ಬವನ್ನು ಮನೆಯಲ್ಲಿ ವಿಜೃಂಭಣೆಯಿಂದ ಆಚರಿಸಿ ಸಂಭ್ರಮಿಸಿದ್ದಾರೆ. 25 ಗ್ರಾಂ ಚಿನ್ನವನ್ನು ಶ್ವಾನಕ್ಕೆ ಉಡುಗೊರೆಯಾಗಿ ನೀಡಲಾಗಿದೆ.

ಬರ್ಥ್​​ಡೇ ಸಂಭ್ರಮದಲ್ಲಿ ಮಿಂಚಿದ ಟೈಗರ್ ಶ್ವಾನ! ಉಡುಗೊರೆಯಾಗಿ 25 ಗ್ರಾಂ ಚಿನ್ನದ ಹಾರ
ಮೂರನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡ ಟೈಗರ್ ಎಂಬ ಹೆಸರಿನ ಶ್ವಾನ

Updated on: Dec 29, 2020 | 2:20 PM

ವಿಜಯಪುರ: ಸಂಗಯ್ಯ ಪತ್ರಿ ಎಂಬುವವರು ತಾವು ಮುದ್ದಿನಿಂದ ಸಾಕಿದ್ದ ಶ್ವಾನದ ಹುಟ್ಟುಹಬ್ಬವನ್ನು ಮನೆಯಲ್ಲಿ ವಿಜೃಂಭಣೆಯಿಂದ ಆಚರಿಸಿ ಸಂಭ್ರಮಿಸಿದ್ದಾರೆ. T ಅಕ್ಷರದಿಂದ ಪದಕ ಸಿದ್ಧಪಡಿಸಿ, ಚಿನ್ನದ ಹಾರವನ್ನು ಉಡುಗೊರೆಯಾಗಿ ಶ್ವಾನಕ್ಕೆ ನೀಡಿದ್ದಾರೆ.

ಸಂಗಯ್ಯ ಪತ್ರಿ ವಿಜಯಪುರ ಜಿಲ್ಲೆ ನಿಡಗುಂದಿ ಪಟ್ಟಣದ ನಿವಾಸಿ. ತಮ್ಮ ಮನೆಯಲ್ಲಿ ಸಾಕಿದ್ದ ಶ್ವಾನಕ್ಕೆ ಟೈಗರ್​ಎಂದು ಹೆಸರಿಟ್ಟಿದ್ದರು. ನಿನ್ನೆ (ಡಿ. 28) ಟೈಗರ್ 3ನೇ ವರ್ಷಕ್ಕೆ ಕಾಲಿಟ್ಟಿದ್ದು,  25 ಗ್ರಾಂ ಚಿನ್ನದ ಹಾರವನ್ನು ಉಡುಗೊರೆಯಾಗಿ ನೀಡಿದ್ದು, ಚಿನ್ನದ ಸರಕ್ಕೆ T (ಟೈಗರ್) ಎಂಬ ಪದಕವನ್ನು ಜೋಡಿಸಲಾಗಿದೆ.

200 ಜನರಿಗೆ ಆಮಂತ್ರಣ ನೀಡಲಾಗಿದ್ದು, ಕೇಕ್ ಕತ್ತರಿಸಿ ಹುಟ್ಟು ಹಬ್ಬವನ್ನು ಸಂಭ್ರಮಿಸಲಾಗಿದೆ.  ಆಗಮಿಸಿದ್ದ ಅತಿಥಿಗಳಿಗೆ ಕೇಸರ್ ಬಾತ್​ ಹಾಗೂ ಉಪ್ಪಿಟ್ಟು ಉಪಹಾರ ಏರ್ಪಾಟು ಮಾಡಲಾಗಿದೆ.

ಕಳೆದ ವರ್ಷದ ಟೈಗರ್ ಹುಟ್ಟುಹಬ್ಬದ ದಿನ 50 ಗ್ರಾಂ ಚಿನ್ನ ಉಡುಗೊರೆಯಾಗಿ ನೀಡಲಾಗಿತ್ತು. 500 ಜನರಿಗೆ ಶಾವಿಗೆ ಪಾಯಸ, ಪೂರಿ, ಬಜ್ಜಿ ಸೇರಿದಂತೆ ವಿವಿಧ ತೆರೆನಾದ ಖಾದ್ಯಗಳ ಸಿದ್ಧತೆ ಮಾಡಲಾಗಿತ್ತು.



ಆರತಿ ಬೆಳಗಿ ಕೇಕ್ ಕತ್ತರಿಸಿ ಬರ್ತಡೆ ಆಚರಿಸಿದ ನಾಯಿ, ಗಿಫ್ಟ್ ಆಗಿ 50 ಗ್ರಾಂ ಚಿನ್ನದ ಸರ