ಕೊಟಗ್ಯಾಳ ಗ್ರಾಮದಲ್ಲಿ ಚಾಕುವಿನಿಂದ ಇರಿದು, ಬೆಂಕಿ ಹಚ್ಚಿ ಬಾಲಕನ ಬರ್ಬರ ಹತ್ಯೆ

ಬಾಲಕನನ್ನು ಚಾಕುವಿನಿಂದ ಇರಿದು ಬೆಂಕಿ ಹಚ್ಚಿ ಕೊಲೆ ಮಾಡಿರುವ ಘಟನೆ ನಿನ್ನೆ ರಾತ್ರಿ(ಡಿ.28) ಔರಾದ್ ತಾಲೂಕಿನ ಕೊಟಗ್ಯಾಳ ಗ್ರಾಮದಲ್ಲಿ ನಡೆದಿದೆ. ಮೃತ ದುರ್ದೈವಿ ಶಿವಕುಮಾರ್ ಗೊಡೆ(17) ಎಂದು ತಿಳಿದು ಬಂದಿದೆ.

ಕೊಟಗ್ಯಾಳ ಗ್ರಾಮದಲ್ಲಿ ಚಾಕುವಿನಿಂದ ಇರಿದು, ಬೆಂಕಿ ಹಚ್ಚಿ ಬಾಲಕನ ಬರ್ಬರ ಹತ್ಯೆ
ಬೀದರ್​ನ ಕೊಟಿಗ್ಯಾಳ ಗ್ರಾಮದಲ್ಲಿ ಬಾಲಕನ ಹತ್ಯೆ
Follow us
shruti hegde
| Updated By: ಸಾಧು ಶ್ರೀನಾಥ್​

Updated on:Dec 29, 2020 | 3:08 PM

ಬೀದರ್: ಬಾಲಕನನ್ನು ಚಾಕುವಿನಿಂದ ಇರಿದು ಬೆಂಕಿ ಹಚ್ಚಿ ಕೊಲೆ ಮಾಡಿರುವ ಘಟನೆ ನಿನ್ನೆ ರಾತ್ರಿ (ಡಿ.28) ಔರಾದ್ ತಾಲೂಕಿನ ಕೊಟಗ್ಯಾಳ ಗ್ರಾಮದಲ್ಲಿ ನಡೆದಿದೆ. ಮೃತ ದುರ್ದೈವಿ ಶಿವಕುಮಾರ್ ಗೊಡೆ (17) ಎಂದು ತಿಳಿದು ಬಂದಿದೆ.

ಬಾಲಕ ಶಿವಕುಮಾರ್​ನನ್ನು ಚಾಕುವಿನಿಂದ ಚುಚ್ಚಿ ನಂತರ ಬೆಂಕಿಯಲ್ಲಿ ಸುಟ್ಟು ಹಾಕಿದ್ದಾರೆ. ಕಮಲನಗರ ಪೊಲೀಸ್ ‌ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸ್ಥಳಕ್ಕೆ ಪೊಲೀಸರು ಮತ್ತು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಗೋಪಾಲ್ ಬ್ಯಾಕೋಡ್ ಭೇಟಿ ನೀಡಿದ್ದಾರೆ. ಕೊಲೆಗಾರನನ್ನು ಪತ್ತೆ ಹಚ್ಚಲು ವಿಶೇಷ ಪೊಲೀಸ್ ತಂಡ ರಚನೆಯಾಗಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.

ಬಾಲಕನ್ನ ಕಿಡ್ನ್ಯಾಪ್ ಮಾಡಿ ಹಣಕ್ಕೆ ಡಿಮ್ಯಾಂಡ್, ಸಿನಿಮೀಯ ರೀತಿಯಲ್ಲಿ ಪೊಲೀಸರ ಕಾರ್ಯಾಚರಣೆ

Published On - 2:47 pm, Tue, 29 December 20