ರಾಜ್ಯಕ್ಕೆ ಆಗಮಿಸಿದ ಕೇಂದ್ರದ ಅಧ್ಯಯನ ತಂಡ: ನಾಳೆ 3 ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಪ್ರವಾಸ

|

Updated on: Dec 13, 2020 | 7:39 PM

ಸೆಪ್ಟೆಂಬರ್, ಅಕ್ಟೋಬರ್​ ತಿಂಗಳಲ್ಲಿ ರಾಜ್ಯದಲ್ಲಿ ಎದುರಾದ ಪ್ರವಾಹದಿಂದ ಹಾನಿ ಸಂಭವಿಸಿದ ಹಿನ್ನೆಲೆಯಲ್ಲಿ ಅದರ ಅಧ್ಯಯನ ನಡೆಸಲು ಇಂದು ಕೇಂದ್ರದ ಅಧ್ಯಯನ ತಂಡ ಭೇಟಿಕೊಟ್ಟಿದೆ. 3 ದಿನಗಳ ಕಾಲ ರಾಜ್ಯದಲ್ಲಿ ಕೇಂದ್ರ ತಂಡದಿಂದ ಅಧ್ಯಯನ ನಡೆಯಲಿದೆ.

ರಾಜ್ಯಕ್ಕೆ ಆಗಮಿಸಿದ ಕೇಂದ್ರದ ಅಧ್ಯಯನ ತಂಡ: ನಾಳೆ 3 ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಪ್ರವಾಸ
ರಾಜ್ಯಕ್ಕೆ ಆಗಮಿಸಿದ ಕೇಂದ್ರದ ಅಧ್ಯಯನ ತಂಡ
Follow us on

ಬೆಂಗಳೂರು: ಸೆಪ್ಟೆಂಬರ್, ಅಕ್ಟೋಬರ್​ ತಿಂಗಳಲ್ಲಿ ರಾಜ್ಯದಲ್ಲಿ ಎದುರಾದ ಪ್ರವಾಹದಿಂದ ಹಾನಿ ಸಂಭವಿಸಿದ ಹಿನ್ನೆಲೆಯಲ್ಲಿ ಅದರ ಅಧ್ಯಯನ ನಡೆಸಲು ಇಂದು ಕೇಂದ್ರದ ಅಧ್ಯಯನ ತಂಡ ಭೇಟಿಕೊಟ್ಟಿದೆ. 3 ದಿನಗಳ ಕಾಲ ರಾಜ್ಯದಲ್ಲಿ ಕೇಂದ್ರ ತಂಡದಿಂದ ಅಧ್ಯಯನ ನಡೆಯಲಿದೆ.

ಕೇಂದ್ರ ಗೃಹ ಇಲಾಖೆ ಜಂಟಿ ಕಾರ್ಯದರ್ಶಿ ರಮೇಶ್ ಕುಮಾರ್‌ ಗಂಠಿ ನೇತೃತ್ವದ 6 ಅಧಿಕಾರಿಗಳ ತಂಡ ನೆರೆಯಿಂದ ಹಾನಿಯಾದ ಜಿಲ್ಲೆಗಳಿಗೆ ಭೇಟಿ ನೀಡಲಿದೆ. ಜಿಲ್ಲೆಗಳಿಗೆ ತೆರಳುವ ಮುನ್ನ ಗೃಹ ಕಚೇರಿ ಕೃಷ್ಣಾಗೆ ಆಗಮಿಸಿ ಸಿಎಂ ಯಡಿಯೂರಪ್ಪರನ್ನು ಭೇಟಿ ಮಾಡಿದರು. ಈ ವೇಳೆ, ಕೇಂದ್ರ ಅಧ್ಯಯನ ತಂಡಕ್ಕೆ ಬಿಎಸ್​ವೈ ಪ್ರವಾಹದಿಂದ ಉಂಟಾದ ಹಾನಿಯ ವಿವರಣೆ ನೀಡಿದರು.

ನಾಳೆ ರಾಜ್ಯದ 3 ಜಿಲ್ಲೆಗಳಲ್ಲಿ ಕೇಂದ್ರದ ತಂಡ ಪ್ರವಾಸ ಕೈಗೊಳ್ಳಲಿದ್ದು ಸೋಮವಾರ ಮೊದಲ ತಂಡ ಕಲಬುರಗಿ ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲಿದೆ. ಎರಡನೇ ತಂಡ ವಿಜಯನಗರ ಜಿಲ್ಲೆಯಲ್ಲಿ ಪರಿಶೀಲನೆ ನಡೆಸಲಿದ್ದು ಮೂರನೇ ತಂಡ ಉಡುಪಿ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದೆ. ಮಂಗಳವಾರ ಮೂರೂ ತಂಡ ಬೆಂಗಳೂರಿಗೆ ಆಗಮಿಸಿ ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿ ನಡೆಸುವವು ಎಂದು ತಿಳಿದುಬಂದಿದೆ.

Published On - 7:35 pm, Sun, 13 December 20