ಹುಬ್ಬಳ್ಳಿ: ಬೈಕ್ ಅಪಘಾತದಿಂದ ಹೊರ ಬಿತ್ತು ಲೈಂಗಿಕ ಕಿರುಕುಳ ಪ್ರಕರಣ!
ಯುವತಿಯನ್ನು ಹಳೇ ಹುಬ್ಬಳ್ಳಿಯ ದುರ್ಗದ ಬೈಲ್ಗೆ ಬಿಡುವ ಬದಲು ಕಾರವಾರ ರಸ್ತೆ ಕಡೆಗೆ ಕರೆದುಕೊಂಡು ಹೋಗಿದ್ದ.
ಹುಬ್ಬಳ್ಳಿ: ಡ್ರಾಪ್ ಕೊಡುವ ನೆಪದಲ್ಲಿ ಪರಿಚಯಸ್ಥ ಯುವತಿಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಲೈಂಗಿಕ ಕಿರುಕುಳ ನೀಡಿದ ಪ್ರಕರಣ ಹುಬ್ಬಳ್ಳಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಹುಬ್ಬಳ್ಳಿ ಹೊರವಲಯದ ಕಾರವಾರ ರಸ್ತೆಯ ಹೇಸಿಗೆ ಮಡ್ಡಿ ಬಳಿ ಯುವತಿಗೆ ಲೈಂಗಿಕ ಕಿರುಕುಳ ನೀಡಲಾಗಿದೆ. ನಂತರ ಯುವತಿಯನ್ನು ವಾಪಾಸು ಕರೆದುಕೊಂಡು ಬರುವ ವೇಳೆ ಬೈಕ್ ಅಪಘಾತ ಆಗಿದೆ. ಈ ವೇಳೆ ಗಾಯಗೊಂಡ ಯುವತಿಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಆಗ ಲೈಂಗಿಕ ಕಿರುಕುಳ ಬೆಳಕಿಗೆ ಬಂದಿದೆ.
ನ.30ರಂದು ಮಾವನೂರ ಗ್ರಾಮಕ್ಕೆ ತೆರಳಲೆಂದು ಹುಬ್ಬಳ್ಳಿಯ ಬಾಸಲ್ ಮಿಶನ್ ಚರ್ಚ್ ಬಳಿ ಯುವತಿ ನಿಂತಿದ್ದಳು. ಈ ವೇಳೆ ಬೈಕ್ನಲ್ಲಿ ಆಗಮಿಸಿದ ಮಲ್ಲಿಕಜಾನ್ ಬಗಡಗೇರಿ ಹಾಗೂ ಆಸೀಫ್ ಡ್ರಾಪ್ ಕೊಡುವುದಾಗಿ ಬೈಕ್ನಲ್ಲಿ ಕರೆದುಕೊಂಡು ಹೋಗಿದ್ದರು. ಆಸೀಫ್ ಬೇರೆ ಬೈಕ್ ತರುತ್ತೇನೆಂದು ಹೋಗಿದ್ದ. ಈ ವೇಳೆ ಮಲ್ಲಿಕಜಾನ್ ಯುವತಿಯನ್ನು ಹಳೇ ಹುಬ್ಬಳ್ಳಿಯ ದುರ್ಗದ ಬೈಲ್ಗೆ ಬಿಡುವ ಬದಲು ಕಾರವಾರ ರಸ್ತೆ ಕಡೆಗೆ ಕರೆದುಕೊಂಡು ಹೋಗಿದ್ದ.
ಮಲ್ಲಿಕಜಾನ್ ಯುವತಿಯನ್ನು ಹೇಸಿಗೆ ಮಡ್ಡಿ ಬಳಿಯ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಲೈಂಗಿಕ ಕಿರುಕುಳ ನೀಡಿದ್ದ. ನಂತರ ಯುವತಿಯನ್ನು ಮರಳಿ ಕರೆದುಕೊಂಡು ಬರುವಾಗ ಆಕೆ ಆಯತಪ್ಪಿ ಬೈಕ್ನಿಂದ ಬಿದ್ದಿದ್ದಳು. ನಂತರ ಆಕೆಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಈ ವೇಳೆ ಪ್ರಕರಣ ಬೆಳಕಿಗೆ ಬಂದಿದೆ.
ಹುಬ್ಬಳ್ಳಿ ತಾಲೂಕಿನ ಮಾವನೂರ ಗ್ರಾಮದ ಮಲ್ಲಿಕಜಾನ್ ಬಗಡಗೇರಯನ್ನು ಪೊಲೀಸರು ಬಂಧಿಸಿದ್ದಾರೆ. ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ ನೀಡಿದ ಬಗ್ಗೆ ಪ್ರಕರಣ ದಾಖಲು ಮಾಡಿದ್ದಾರೆ.
ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ: ಮಂಗಳೂರು ವಿವಿ ಪ್ರೊ. ಅರಬಿ ವಜಾ, ವರದಿ ಮುಚ್ಚಿಟ್ಟ ಖಾನ್ ವಿರುದ್ಧ ದೂರು